Friday, 25th October 2024

ಮಾನವ ಅಂಗಾಂಗ ಕಸಿ ದಂಧೆ: ವೈದ್ಯರು ಸೇರಿ ಏಳು ಜನರ ಬಂಧನ

ವದೆಹಲಿ: ಮಾನವ ಅಂಗಾಂಗ ಕಸಿ ದಂಧೆಯನ್ನು ದೆಹಲಿ ಪೊಲೀಸರು ಭೇದಿಸಿದ್ದು, ವೈದ್ಯರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿದೆ.

ದೆಹಲಿ ಪೊಲೀಸ್ ಆಯುಕ್ತ ಅಮಿತ್ ಗೋಯೆಲ್ ಅವರ ಪ್ರಕಾರ, ಪ್ರಕರಣದ ಹಿಂದಿನ ‘ಮಾಸ್ಟರ್ ಮೈಂಡ್’ ಬಾಂಗ್ಲಾದೇಶದವರು ಮತ್ತು ಈ ಪ್ರಕರಣ ದಲ್ಲಿ ದಾನಿಗಳು ಮತ್ತು ಸ್ವೀಕರಿಸುವವರು ಇಬ್ಬರೂ ಬಾಂಗ್ಲಾದೇಶದವರು. ಈ ದಂಧೆಯಲ್ಲಿರುವ ಎಲ್ಲ ಜನರು ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.

ಈ ಪ್ರಕರಣದಲ್ಲಿ ಬಂಧಿಸಲಾದ ಏಳು ಜನರ ತನಿಖೆ ಇನ್ನೂ ನಡೆಯುತ್ತಿದೆ.

2019 ರಿಂದ ನಡೆಯುತ್ತಿರುವ ಅಂಗಾಂಗ ಕಸಿ ದಂಧೆಯ ಬಗ್ಗೆ ಮಾತನಾಡಿದ ಡಿಸಿಪಿ ಗೋಯೆಲ್, “ಅವರು ಪ್ರತಿ ಕಸಿಗೆ 25-30 ಲಕ್ಷ ರೂ.ಗಳನ್ನು ನೀಡುತ್ತಿದ್ದರು” ಎಂದು ಹೇಳಿದರು. ಬಂಧಿತ ವೈದ್ಯನಿಗೆ ಎರಡು ಅಥವಾ ಮೂರು ಆಸ್ಪತ್ರೆಗಳೊಂದಿಗೆ ಸಂಪರ್ಕವಿದೆ ಎಂದು ತಿಳಿಸಿದ್ದಾರೆ.

”ದಾನಿ ಮತ್ತು ಸ್ವೀಕರಿಸುವವರು ರಕ್ತ ಸಂಬಂಧಿಗಳಲ್ಲ ಎಂದು ತಿಳಿದಿದ್ದರೂ ಸಹ ಅವಳು ಅಂಗಾಂಗ ಕಸಿಗೆ ಅನುಕೂಲ ಮಾಡಿಕೊಡುತ್ತಿದ್ದಳು, ಇದು ಅವಳನ್ನು ಪಿತೂರಿಯ ಭಾಗವನ್ನಾಗಿ ಮಾಡಿತು” ಎಂದು ಡಿಸಿಪಿ ಗೋಯೆಲ್ ಹೇಳಿದರು.