ರಾಯಚೂರು : ನಗರದಲ್ಲಿ ಬುಧವಾರ ಬೆಳಗ್ಗೆ ಇಡಿ ಅಧಿಕಾರಿಗಳು ಮಧ್ಯರಾತ್ರಿವರೆಗೂ ತನಿಖೆ ಮಾಡಿ ಎರಡನೆಯ ದಿನ ಗುರುವಾರ ಕೂಡ ತಲಾಷ್ ಮಾಡುತ್ತಲೇ ಇದ್ದಾರೆ.
ನಿರಂತರವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ಭ್ರಷ್ಟಾಚಾರದ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಎರಡು ತಂಡ ಬುದುವಾರ ಬೆಳ್ಳ ಬೆಳಗ್ಗೆ ಗ್ರಾಮೀಣ ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದದ್ದಲ್ ಬಸನಗೌಡ ಮನೆ ಮತ್ತು ಆಪ್ತ ಕಾರ್ಯ ದರ್ಶಿಯಾದ ಪಂಪಣ್ಣ ಅವರ ಮನೆಯ ಮೇಲೆ ನಿರಂತರ ದಾಖಲೆ ಸಂಗ್ರಹಿಸು ವಲ್ಲಿ ಅಧಿಕಾರಿಗಳು ನಿರತರಾಗಿದ್ದು ಎರಡನೆಯ ದಿನ ಇಂದು ಕೂಡ ಅಧಿಕಾರಿಗಳು ಕಾರ್ಯ ಪ್ರಕೃತರಾಗಿದ್ದಾರೆ.
ನೆನ್ನೆಯಿಂದ ಕೂಡ ನಗರದ ಆರ್ ಆರ್ ಬಡಾವಣೆಯಲ್ಲಿನ ಮನೆಲ್ಲಿ ವಾಸ್ತವ್ಯ ಹೂಡಿರೋ ಅಧಿಕಾರಿಗಳು ಇದ್ದಲ್ಲಿ ಊಟ ತರಿಸಿಕೊಂಡು ಹೊರಗಡೆ ಯಾರನ್ನು ಬಿಡದೆ ಗೋಪ್ತವಾಗಿ ಅಧಿಕಾರಿಗಳು ದಾಖಲೆಯನ್ನು ಸಂಗ್ರಹಿಸಿದ್ದು ಇತ್ತ ಇಂದು ಬಂಧನದ ಭೀತಿಯಲ್ಲಿರುವ ವಾಲ್ಮೀಕಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾಗಿರುವ ದದ್ದಲ್ ಅವರ ಮನೆಯ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತು ಕೂಡ ಪೊಲೀಸ್ ಇಲಾಖೆ ಕೈಗೊಂಡಿದೆ.