ಚಂಡೀಗಢ: ಕೆನಡಾ ಮೂಲದ ಭಯೋತ್ಪಾದಕ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾನ ಐವರು ಸಹಚರರನ್ನು ಬಂಧಿಸಲಾಗಿದೆ.
ಬಂಧಿತರಿಂದ ಮೂರು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ( ಡಿಜಿಪಿ) ಗೌರವ್ ಯಾದವ್ ತಿಳಿಸಿದ್ದಾರೆ.
ಸಂಘಟಿತ ಅಪರಾಧದ ವಿರುದ್ಧದ ಕಾರ್ಯಾಚರಣೆಯಲ್ಲಿ ಜಲಂಧರ್ ಕಮಿಷನರೇಟ್ ಪೊಲೀಸರು, ಕೆನಡಾ ಮೂಲದ ಭಯೋತ್ಪಾದಕ ಲಾಂಡಾನ ಐವರು ಸಹಚರರನ್ನು ಬಂಧಿಸಿದ್ದಾರೆ ಎಂದು ಡಿಜಿಪಿ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಬಂಧಿತ ಲಾಂಡಾ ಗ್ಯಾಂಗ್ ಸದಸ್ಯರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಗ್ಯಾಂಗ್ ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಕೊಲೆ, ಸುಲಿಗೆ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಯಾದವ್ ಹೇಳಿದ್ದಾರೆ.
ಜೂನ್ 10 ರಂದು, ಲಾಂಡಾನ ಮೂವರು ಸಹಚರರನ್ನು ಹಾಗೂ ಜೂನ್ 30 ರಂದು ಐವರು ಸಹಚರರನ್ನು ಬಂಧಿಸಲಾಗಿತ್ತು.