Thursday, 12th December 2024

ಪ್ರಯಾಣಿಕರ ಪ್ರಯಾಣ ಇನ್ನಷ್ಟು ಸುಮಧುರಗೊಳಿಸಲು “ಏರ್‌ಪೋರ್ಟ್‌ ಗೀತೆ” ಬಿಡುಗಡೆ ಮಾಡಿದ BLR ವಿಮಾನ ನಿಲ್ದಾಣ

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ಸಂಯೋಜಿಸಿದ ಅಧಿಕೃತ ಗೀತೆಯು ವಿಮಾನ ನಿಲ್ದಾಣ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಥಮ ಪ್ರದರ್ಶನಗೊಂಡಿತು.

ನಿಮ್ಮ ವಿಮಾನ ಪ್ರಯಾಣವನ್ನು ಇನ್ನಷ್ಟು ಮಾಧುರ್ಯವಾಗಿಸಲು ಹಾಗೂ ಕಾಯುವಿಕೆಯ ಸಮಯವನ್ನು ಸುಮಧುರಗೊಳಿಸಲು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಗೀತ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿ. ವಿಮಾನ ನಿಲ್ದಾಣವು ಇದೀಗ ತನ್ನ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿದ್ದು, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ “ರಿಕಿ ಕೇಜ್” ಸಂಯೋಜಿಸಿದ ಡೈನಾಮಿಕ್ ದ್ವಿಭಾಷಾ ಟ್ರ್ಯಾಕ್ನನ್ನು ಬಿಡುಗಡೆ ಮಾಡಲಾಯಿತು.

ಈ ಗೀತೆಯು ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಲೋನಿಪಾರ್ಕ್ ಮತ್ತು ಕನ್ನಡದ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಅವರ ಸುಮಧುರ ಕಂಠದಿಂದ ಮೂಡಿಬಂದಿದ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಮಿಶ್ರಣದಲ್ಲಿ ಈ ಗೀತೆ ಹೊರಹೊಮ್ಮಿದೆ.

BLR ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ, ಈ ಗೀತೆಯ ಪ್ರಥಮ ಪ್ರದರ್ಶನಗೊಂಡು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿತು, ಈ ಮೂಲಕ ಮರೆಯಲಾಗದ ಸಂಗೀತ ಅನುಭವಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.

ಪ್ರಸ್ತುತ ಈ ಗೀತೆಯು ಸ್ಪೂಟಿಫೈ, ಆಪಲ್‌ ಮ್ಯೂಸಿಕ್‌, ಅಮೆಜಾನ್‌ ಮ್ಯೂಸಿಕ್‌, ವಿಂಕ್‌ ಮತ್ತು ಇತರ ಮ್ಯೂಸಿಕ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಪ್ರಯಾಣಿಕರು ತಾವು ಹೋದಲ್ಲೆಲ್ಲಾ BLR ವಿಮಾನ ನಿಲ್ದಾಣದ ರೋಮಾಂಚಕ ಮನೋಭಾವವನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು.
ಈ ಸುಮಧುರ ಗೀತೆಯು ವಿಡಿಯೋದೊಂದಿಗೆ ಮೂಡಿಬಂದಿದ್ದು, BLR ವಿಮಾನ ನಿಲ್ದಾಣದಿಂದ ತಮ್ಮ ಪ್ರಯಾಣ ಪ್ರಾರಂಭಿಸುವ ಪ್ರಯಾಣಿಕರ ಮೂರು ಭಾವನಾತ್ಮಕ ಕಥೆಗಳನ್ನು ಒಳಗೊಂಡಿದೆ. ಈ ಗೀತೆಯ ವಿಡಿಯೋದಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣ ಪ್ರಾರಂಭಿಸುವ ಪೂರ್ವದಲ್ಲಿ ತಮ್ಮ ಉತ್ಸಾಹ ಹಾಗೂ ನಿರೀಕ್ಷೆಯಲ್ಲಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಭಾವನಾತ್ಮಕ ದೃಶ್ಯಾವಳಿಗಳು ಒಳಗೊಂಡಿದೆ.

ಇದು BLR ವಿಮಾನ ನಿಲ್ದಾಣದ ಪ್ರಯಾಣಿಕರ ಸೌಕರ್ಯ ಮತ್ತು ತೃಪ್ತಿಗೆ ಅಚಲವಾದ ಸಮರ್ಪಣೆಯನ್ನು ತೋರುತ್ತದೆ. ಅತ್ಯಾಧುನಿಕ ಸೌಲಭ್ಯಗಳಿಂದ ಹಿಡಿದು ಎಲ್ಲಾ ಪ್ರಯಾಣಿಕರಿಗೆ ಅನುಗುಣವಾಗಿ ಚಿಂತನಶೀಲ ಸೇವೆಗಳು, ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವುದು ಸೇರಿದಂತೆ, ವಿಮಾನ ನಿಲ್ದಾಣದ ಅನುಭವದ ಪ್ರತಿಯೊಂದು ಅಂಶವು ಪ್ರಯಾಣಿಕರ ಪ್ರಯಾಣವನ್ನು ಉನ್ನತೀಕರಿಸಲು ವಿನ್ಯಾಸಗೊಳಿಸಲಾಗಿದೆ.

ತಮ್ಮ ಅನುಭವದ ಬಗ್ಗೆ ಮಾತನಾಡಿದ ರಿಕಿ ಕೇಜ್, ಸಂಗೀತಗಾರನಾಗಿ ನನ್ನ ನಂಬಿಕೆ ಹಾಗೂ ಅನುಭವಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡುತ್ತೇನೆ ಎಂದು ನಾನು ಸದಾ ನಂಬುತ್ತೇನೆ. ನಾನು ರಚಿಸುವ ಪ್ರತಿಯೊಂದು ಸಂಗೀತವು ನನ್ನ ಒಂದು ಭಾಗವೇ ಆಗಿರುತ್ತದೆ. ನನ್ನ ಎರಡನೇ ಮನೆಯಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಗೀತೆಯನ್ನು ಸಂಯೋಜಿಸಿದ್ದು ಈ ಅನುಭವವನ್ನು ಇನ್ನಷ್ಟು ಹೆಚ್ಚಿಸಿದೆ. ಈ ವಿಮಾನ ನಿಲ್ದಾಣವು ಬೆಂಗಳೂರಿನ ಅತ್ಯುತ್ತಮ ನಗರವಾಗಿ ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ, ನಮ್ಮ ರಾಷ್ಟ್ರದ ಮನ್ನಣೆಯ ಸಂಕೇತ ವಾಗಿದೆ. ಈ ಗೀತೆಯು ನನಗೆ ಹಾಗೂ ನನ್ನ ಆತ್ಮೀಯ ಸ್ನೇಹಿತ ಲೋನಿ ಪಾರ್ಕ್‌ಗೆ ಹೆಮ್ಮೆಯ ವಿಷಯವಾಗಿದೆ. ಈ ಗೀತೆಯು ಈ ವಿಮಾನ ನಿಲ್ದಾಣದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದಲ್ಲದೆ, ಪ್ರತಿ ಸಂದರ್ಭದಲ್ಲೂ ವಿಮಾನ ನಿಲ್ದಾಣದ ಸಾಂಸ್ಕೃತಿಕ ಮಹತ್ವವನ್ನು ಸದಾ ಹಚ್ಚಾಹಸಿರಿನಂತೆ ಉಳಿಸಿಕೊಳ್ಳಲಿದೆ ಎಂದರು.

BLR ವಿಮಾನ ನಿಲ್ದಾಣದ ಗೀತೆಯು ಸಂಗೀತ ಮತ್ತು ನಮ್ಮ ಸಂಸ್ಕೃತಿಯ ಮೂಲಕ ಪ್ರಯಾಣಿಕರ ಅನುಭವವನ್ನು ಉತ್ಕೃಷ್ಟಗೊಳಿಸಲಿದೆ. ಜಾಗತಿಕವಾಗಿ ಮೆಚ್ಚುಗೆ ಪಡೆದ ಕಲಾವಿದರೊಂದಿಗೆ ತೊಡಗಿಸಿಕೊಳ್ಳುವ ಮೂಲಕ, BLR ವಿಮಾನ ನಿಲ್ದಾಣವು ಭಾರತಕ್ಕೆ ಹೊಸ ಗೇಟ್‌ವೇ ಎಂಬ ಖ್ಯಾತಿಯನ್ನು ಬಲಪಡಿಸುತ್ತದೆ, ಈ ಗೀತೆಯು ಕೇವಲ ಹಾಡಷ್ಟೇ ಅಲ್ಲದೆ, ತನ್ನ ಗೇಟ್‌ಗಳ ಮೂಲಕ ಹಾದುಹೋಗುವ ಲಕ್ಷಾಂತರ ಪ್ರಯಾಣಿಕರ ವೈವಿಧ್ಯಮಯ ಕಥೆ, ಭಾವನೆ ಮತ್ತು ಅನುಭವಗಳ ಆಚರಣೆಯನ್ನು ಪ್ರತಿನಿಧಿಯಾಗಿರಲಿದೆ, ತಡೆರಹಿತ ಹಾಗೂ ಆರಾಮದಾಯ ಪ್ರಯಾಣದ ಅನುಭವಗಳನ್ನು ಒದಗಿಸುವ BLR ವಿಮಾನ ನಿಲ್ದಾಣದ ಸಮರ್ಪಣೆಯನ್ನು ಇದು ಒತ್ತಿಹೇಳುತ್ತದೆ.