Sunday, 15th December 2024

ರೈತರಿಗೆ ಆಧುನಿಕ ಕೃಷಿ ಚಟುವಟಿಕೆ ಮತ್ತು ಜ್ಞಾನ ಅಗತ್ಯ -ಡಾ.ನಾಗಭೂಷಣ್

 ಚಿಕ್ಕನಾಯಕನಹಳ್ಳಿ : ಇಂದಿನ ಪ್ರಸ್ತುತ ಅಗತ್ಯ ಸನ್ನಿವೇಶದಲ್ಲಿ  ರೈತರು ಆಧುನಿಕ  ಕೃಷಿ ಚಟುವಟಿಕೆಗಳನ್ನು ಉಳಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು   ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗಭೂಷಣ್ ನುಡಿದರು.
ಅರಳಿಕೆರೆ ಗ್ರಾಮದಲ್ಲಿ ನವೋದಯ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ  ಸಂಜೆಯ ಕಾರ್ಯಕ್ರಮದಲ್ಲಿ  ಆಧುನಿಕ ಪಶುಪಾಲನ ಚಟುವಟಿಕೆಗಳು ಕುರಿತು  ವಿಶೇಷ ಉಪನ್ಯಾಸ ನೀಡಿ  ಮಾತನಾಡಿದರು.
ಭಾರತದ ನೆಲದಲ್ಲಿ  ಅನೇಕ ಸಂಪನ್ಮೂಲಗಳಿದ್ದು   ಉಪಯೋಗಿಸಿಕೊಳ್ಳುವಲ್ಲಿರೈತ್ರರು ವಿಫಲವಾಗುತ್ತಿದ್ದಾರೆ, ಇಂದು ನಾವು ಮಾಡುತ್ತಿರುವ  ಪಶುಪಾಲನೆ ಮತ್ತು ಹೈನುಗಾರಿಕೆ  ವಿಧಾನಗಳು ಹಳೆಯದಾಗಿದ್ದು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು  ಹೊಸ ಆಧುನಿಕತೆಯನ್ನು ರೂಡಿಸಿಕೊಂಡು ಹೆಜ್ಜೆ ಇಡುತ್ತಿವೆ. ಆದರೆ ನಮ್ಮಲ್ಲಿ ಉದಾಸೀನ, ಸೋಮಾರಿತನದಿಂದ ಹಿಂದುಳಿದಿದ್ದು  ಉತ್ತಮ ಹಾದಿಯಲ್ಲಿ ನಡೆಯಬೇಕು ಎಂದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ  ಉನ್ನತ ಹುದ್ದೆಗಳನ್ನು  ಅಲoಕರಿಸಬೇಕು ಎಂದರು. ಗ್ರಾಮಗಳು ಬೆಳೆಯದೆ ಹೋದಲ್ಲಿ  ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಉತ್ತಮ ತಳಿಗಳು ಅವುಗಳ ಸಾಕುವ ವಿಧಾನವನ್ನು ತಿಳಿದುಕೊಂಡು ಕೃಷಿಯನ್ನು ಲಾಭದಾಯಕವನ್ನಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಎ ಜಿ ರಾಕೇಶ್ ಮಾತನಾಡಿ ದೇಶವನ್ನು ಕಟ್ಟುವಲ್ಲಿ  ಯುವ ಕರ ಪಾತ್ರ ಅತ್ಯಂತ ಗಣನೀಯವಾದದ್ದು ನಾವು  ದೇಶ ಮತ್ತು ಭಾಷೆಯ ಬಗ್ಗೆ  ಅಭಿಮಾನವನ್ನು ಮೂಡಿಸಿಕೊಳ್ಳದೆ ಹೋದಲ್ಲಿ ದೇಶದ ಋಣವನ್ನು ತೀರಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಓದುವ ಹಂತ ದಲ್ಲಿ ಒಳ್ಳೆಯ ಮಾರ್ಗವನ್ನು ಹಿಡಿದುಬೆಳೆಯಬೇಕು. ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಬಿರಾಧಿಕಾರಿ ಸದಾನಂದ ಸ್ವಾಮಿ ಎನ್ಎಸ್ಎಸ್ ಮೂಲಕ  ಗ್ರಾಮ ಸ್ವಚ್ಛತೆ ಮತ್ತು ಮೌಲ್ಯಗಳನ್ನು ಉಳಿಸುವ ಕಾರ್ಯ ಕ್ರಮ ನಿರಂತರವಾಗಿ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ  ಗ್ರಾಮ ಕುಪ್ಪುರು ಪಂಚಾಯತಿ ಸದಸ್ಯರಾದ ಲಕ್ಷ್ಮಿದೇವಮ್ಮ, ಪಶುವೈದ್ಯಾಧಿಕಾರಿ  ಕಂಬಯ್ಯಾ  ಮತ್ತು ಇತರರು ಭಾಗವಹಿಸಿದ್ದರು.