Saturday, 23rd November 2024

ಒಳ ಮೀಸಲಾತಿ ಪರ ಸುಪ್ರೀಂ ತೀರ್ಪು: ಚಿತ್ರದುರ್ಗದಲ್ಲಿ ಸಂಭ್ರಮ

ಚಿತ್ರದುರ್ಗ: ಒಳ ಮೀಸಲಾತಿ ಪರ ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆ ಚಿತ್ರದುರ್ಗದಲ್ಲಿ ದಲಿತ ಮುಖಂಡರು ಸಂಭ್ರಮಿಸಿದ್ದಾರೆ.

ನಗರದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಪ್ರತಿಮೆಯ ಪಾದಕ್ಕೆ ನಮಿಸಿದ ಮುಖಂಡರು, ಜೈಕಾರ ಹಾಕಿದ್ದಾರೆ.

ಸಿಜೆಐ ಚಂದ್ರಚೂಢ ನೇತೃತ್ವದ ಪೀಠದಿಂದ ಮಹತ್ವದ ತೀರ್ಪು ಬಂದಿದೆ. ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿಯವರು ಮಾತ್ರ ಭಿನ್ನ ತೀರ್ಪು ನೀಡಿ ದ್ದಾರೆ. ಉಳಿದ ಆರು ನ್ಯಾಯಮೂರ್ತಿಗಳು ಒಳಮೀಸಲಾತಿ ಸಮಾನತೆ ಉಲ್ಲಂಘಿಸುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.

ಪರಿಶಿಷ್ಣ ಜಾತಿ/ಪಂಗಡಗಳ ಮೀಸಲಾತಿಯಡಿ ರಾಜ್ಯ ಸರ್ಕಾರಗಳಿಗೆ ಒಳಮೀಸಲು ನೀಡುವ ಅಧಿಕಾರವಿದೆಯಾ ಎಂಬ ಸೂಕ್ಷ್ಮ ಸಂಗತಿಯ ವಿಚಾರಣೆ ಯನ್ನು ಸರ್ವೋಚ್ಛ ನ್ಯಾಯಾಲಯದ ಏಳು ಸದಸ್ಯರ ಪೀಠ ಕಳೆದ ವರ್ಷ ಆರಂಭಿಸಿತ್ತು.

ಕರ್ನಾಟಕವೂ ಸೇರಿದಂತೆ ಇಡೀ ದೇಶದ ಮೇಲೆ ಪರಿಣಾಮ ಬೀರುವಂತ ಅರ್ಜಿ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿದ್ದ ಪೀಠ ಕೈಗೊಂಡಿತ್ತು. ಇದೀಗ ರಾಜ್ಯ ಸರ್ಕಾರಗಳಿಗೆ ಈ ಹೊಣೆ ಹೊರಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕದಲ್ಲಿಯೂ ಈ ಹಿಂದೆ ಇದ್ದ ಬಸವರಾಜ್ ಬೊಮ್ಮಾಯಿ ಸರ್ಕಾರ ಎಸ್ಸಿ/ಎಸ್ಟಿ ಒಳಮೀಸಲಾತಿ ಘೋಷಣೆ ಮಾಡಿತ್ತು. ಎಸ್ಸಿ/ಎಸ್ಟಿ ಒಳಮೀಸ ಲಾತಿ ವಿಚಾರ ವಿಚಾರಣೆ‌ ನಡೆಸಿದ ಸುಪ್ರೀಂ ಕೋರ್ಟ್, ಕ್ರಿಮಿಲೇಯರ್ ವರ್ಗವನ್ನು ಎಸ್ಸಿ/ಎಸ್ಟಿ ಮೀಸಲಾತಿಯಿಂದ ಹೊರಗಿಡಬೇಕು. ರಾಜ್ಯ ಸರ್ಕಾರಗಳು ಕ್ರಿಮಿಲೇಯರ್ ವರ್ಗಗಳನ್ನು ಗುರುತಿಸಲು ನೀತಿ ರೂಪಿಸಬೇಕು. ಸಮಾನತೆ ಸಾಧಿಸಲು ಇರುವುದು ಇದೊಂದೆ ಮಾರ್ಗ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ, ಕ್ರಿಮಿಲೇಯರ್ ಒಬಿಸಿಗೆ ಅನ್ವಯವಾಗುತ್ತದೆ.

ಎಸ್ಸಿ/ಎಸ್ಟಿಗೂ ಅನ್ವಯವಾಗುತ್ತದೆ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ. ತನ್ನ ಮಹತ್ವದ ತೀರ್ಪಿನಲ್ಲಿ ಎಸ್ಸಿ/ಎಸ್ಡಿ ಉಪ ವರ್ಗೀಕರಣಕ್ಕೆ ಅಸ್ತು ಎಂದಿದೆ. ರಾಜ್ಯಗಳಿಗೆ ಉಪವರ್ಗೀಕರಣ ಮಾಡಲು ಅಧಿಕಾರವಿದೆಯೆಂದು ಸಿಜೆಐ ಚಂದ್ರಚೂಢ ನೇತೃತ್ವದ ಪೀಠ ತೀರ್ಪು ನೀಡಿದೆ.