ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಮುಂದಿನ ವರ್ಷ ಅಹಮದಾಬಾದ್ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ಮುಂದಿನ ವರ್ಷದ ಇಂಗ್ಲೆಂಡ್‌ನ ಭಾರತ ಪ್ರವಾಸದ ಸಂದರ್ಭ ಅಹಮದಾಬಾದ್ ಡೇ-ನೈಟ್ ಪಿಂಕ್ ಬಾಲ್ ಟೆಸ್ಟ್ ಆತಿಥ್ಯ ವಹಿಸ ಲಿದೆ ಎಂದು ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಟೆಸ್ಟ್ ಶ್ರೇಯಾಂಕದಲ್ಲಿ 4 ನೇ ಸ್ಥಾನ ಮತ್ತು ಏಕದಿನ ಸ್ವರೂಪದಲ್ಲಿ ಪ್ರಥಮ ಸ್ಥಾನದಲ್ಲಿರುವ ಇಂಗ್ಲೆಂಡ್ ಜನವರಿ-ಮಾರ್ಚ್ ನಿಂದ 5 ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಸರಣಿಗೆ ಭಾರತಕ್ಕೆ ಭೇಟಿ ನೀಡಲಿದೆ.
ಕೊರೊನಾ ವೈರಸ್ ಕಾರಣದಿಂದಾಗಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿಯನ್ನು ಆಯೋಜಿಸು ತ್ತಿರುವ ಯುಎಇ, ಭಾರತ ವಿರುದ್ಧ ಇಂಗ್ಲೆಂಡ್ ಸರಣಿಯನ್ನು ಸಹ ಆಯೋಜಿಸುತ್ತದೆ ಎಂದು ಹೇಳಿದ್ದಾರೆ. ಆದರೆ ಬಿಸಿಸಿಐ ಭಾರತದಲ್ಲಿ ಮಾತ್ರ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲು ನಿರ್ಧರಿಸಿದೆ ಎಂದರು. ಆದರೆ ಇನ್ನೂ ಕೂಡ ಅಂತಿಮ ನಿರ್ಧಾರ ತೆಗೆದು ಕೊಂಡಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ನಾವು ಕೆಲವು ತಾತ್ಕಾಲಿಕ ಯೋಜನೆಗಳನ್ನು ಮಾಡಿದ್ದೇವೆ. ಈಗಿನವರೆಗೆ ಏನನ್ನೂ ನಿರ್ಧರಿಸಲಾಗಿಲ್ಲ. ಇನ್ನೂ ನಾಲ್ಕು ತಿಂಗಳ ಸಮಯವಿದೆ’ ಎಂದು ಹೇಳಿದರು.