ಪ್ಯಾರಿಸ್ ಒಲಂಪಿಕ್ಸ್: ಜಾವೆಲಿನ್ ಪುರುಷರ ವಿಭಾಗದಲ್ಲಿ ನೀರಜ್ ಚೋಪ್ರಾ ಫೈನಲ್ ಪ್ರವೇಶಿಸಿದ್ದಾರೆ. 89.34 ಸೆಕೆಂಡುಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದರು.
ಮೊದಲ ಪ್ರಯತ್ನದಲ್ಲೇ 89 ಮೀ ಭರ್ಜಿ ಎಸೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ನೀರಜ್ ಚೋಪ್ರಾ ಮತ್ತೊಂದು ಪದಕ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಭಾರತದ ವಿನೇಶ್ ಫೋಗಟ್ ಜಯಗಳಿಸಿದ್ದಾರೆ. ವಿಶ್ವದ ನಂಬರ್ 1 ಕುಸ್ತಿಪಟು ಸುಸಾಕಿ ವಿರುದ್ಧ ಭಾರತದ ವಿನೇಶ್ ಫೋಗಟ್ ಜಯಗಳಿಸಿದ್ದಾರೆ. ವಿನೇಶ್ ಪೋಗಟ್ ಗೆ 3-2 ಗೆಲುವಾಗಿದೆ.
ಭಾರತದ ಅತ್ಯಂತ ಯಶಸ್ವಿ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್ ಅವರು ಇಂದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತಮ್ಮ ಕುಸ್ತಿ ಅಭಿಯಾನ ಆರಂಭಿಸಿದ್ದಾರೆ.
2022ರ ವಿಶ್ವ ಚಾಂಪಿಯನ್ ಶಿಪ್‌ನ ನಂತರ ಇದು ಅವರ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದೆ. ವಿಶ್ವ ಚಾಂಪಿಯನ್ ಶಿಪ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಫೋಗಟ್ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದೀಗ ಜಪಾನ್ ನ ಸುಸಾಕಿ ವಿರುದ್ಧ ವಿನೇಶ್ ಫೋಗಟ್ ಗೆಲುವು ಸಾಧಿಸಿದ್ದಾರೆ.