Friday, 22nd November 2024

ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ ಉಸಿರುಗಟ್ಟಿ ಸಾವು

ಡುಪಿ: ಉಡುಪಿಯಲ್ಲಿ ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಡೆದಿದೆ.

ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆಂದು ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ರಾತ್ರಿ ಕಾರಿನಲ್ಲಿಯೇ ಮಲಗಿದ್ದ ಅವರು, ಬೆಳಗಾಗು ವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಚಿಕ್ಕಮಗಳೂರು ಮೂಲದ ಆನಂದ (37) ಎಂದು ತಿಳಿದುಬಂದಿದೆ. ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಬಳಿಕ ರೋಗಿಯನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾ ಗಿತ್ತು.

ನಂತರ ಮಣಿಪಾಲದಲ್ಲಿ ಉಳಿದುಕೊಳ್ಳಲು ಯಾವುದೇ ರೂಂ ಸಿಗದ ಕಾರಣ, ಮಣಿಪಾಲ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಮಲಗಿ ದ್ದರು. ಕಾರಿನ ಗ್ಲಾಸನ್ನು ಮುಚ್ಚಿಕೊಂಡು ಮಲಗಿದ್ದ ಹಿನ್ನಲೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.