ಅತ್ಯಂತ ದೊಡ್ಡ ಬಿಡುಗಡೆ: ಸ್ಕೋಡಾ ಆಟೊ ಇಂಡಿಯಾ ಹೊಸ ಕಾಂಪ್ಯಾಕ್ಟ್ ಎಸ್.ಯು.ವಿ. ಹೆಸರನ್ನು ಪ್ರಕಟಿಸಿದ್ದು ಇದು ರಾಷ್ಟ್ರೀಯ `ನೇಮ್ ಯುವರ್ ಸ್ಕೋಡಾ’ ಎಂಬ ವಿನೂತನ ಅಭಿಯಾನದ ಮೂಲಕ ಮೊಟ್ಟಮೊದಲ ಬಾರಿಗೆ ಹೆಸರಿಸಲಾಗಿದೆ
ರಾಷ್ಟ್ರವ್ಯಾಪ್ತಿ ತೊಡಗಿಕೊಳ್ಳುವಿಕೆ: 200,000ಕ್ಕೂ ಹೆಚ್ಚು ಪ್ರವೇಶಗಳನ್ನು ಸ್ವೀಕರಿಸಲಾಗಿದ್ದು ಸ್ಕೋಡಾದ ಸಾಂಪ್ರದಾಯಿಕ ಐಸಿಇ ಎಸ್.ಯು.ವಿ. ನಾಮಕರಣ `ಕೆ’ಯಿಂದ ಪ್ರಾರಂಭಿಸಿ `ಕ್ಯೂ’ನಿಂದ ಅಂತ್ಯವಾಗಬೇಕಾಗುವ ಹೆಸರು ಆಯ್ಕೆ ಮಾಡಬೇಕಾಗಿತ್ತು
ಭಾಗವಹಿಸಲು ಪುರಸ್ಕಾರಗಳು: ಮುಂಚೂಣಿಯ ಆಯ್ಕೆಯಾದ 10 ಫೈನಲಿಸ್ಟ್ ಗಳಲ್ಲಿ ಅತ್ಯಂತ ಜನಪ್ರಿಯ ಹೆಸರು, ಪ್ರಥಮ ಬಹುಮಾನ ಗೆದ್ದವರು 2025ರ ಸರಣಿಯಲ್ಲಿನ ಉತ್ಪಾದನೆಯ ಮೊದಲ ವಾಹನ ಸ್ವೀಕರಿಸುತ್ತಾರೆ; ಇತರೆ ಹತ್ತು ಮಂದಿ ಭಾಗವಹಿಸುವವರು ಪ್ರಾಗ್ ದೇಶಕ್ಕೆ ವಿಶೇಷ ಪ್ರವಾಸದ ಅವಕಾಶ ಪಡೆಯುತ್ತಾರೆ
ಹುಬ್ಬಳ್ಳಿ: ಇಂದು ಸ್ಕೋಡಾ ಆಟೊ ಇಂಡಿಯಾದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು ಇದು ತನ್ನ ಸಂಪೂರ್ಣ ಕಾಂಪ್ಯಾಕ್ಟ್ ಎಸ್.ಯು.ವಿ.ಯ ಮೂಲಕ ಭಾರತದಲ್ಲಿ ಹೊಸ ಯುಗಕ್ಕೆ ಪ್ರವೇಶ ಪಡೆಯುತ್ತಿದೆ. ಫೆಬ್ರವರಿ ತಿಂಗಳಲ್ಲಿ ಪ್ರಕಟಿಸಿದ ಮತ್ತು ತನ್ನ ವಿನ್ಯಾಸದ ಇತ್ತೀಚಿನ ಟೀಸರ್ ಬಿಡುಗಡೆ ಮಾಡಿದ್ದು ಈ ವಾಹನವನ್ನು ಕಲ್ಪನೆಯ ದೇಶವ್ಯಾಪಿ ಅಭಿಯಾನದ ಮೂಲಕ ಹೆಸರಿಸಲಾಗುತ್ತದೆ. ಸಾವಿರಾರ ಜನರ ಆಯ್ಕೆಯನ್ನು ಪ್ರತಿಫಲಿಸುವ ಸ್ಕೋಡಾ ಆಟೊ ಇಂಡಿಯಾಸ ಹೊಸ ಕಾಂಪ್ಯಾಕ್ಟ್ ಎಸ್.ಯು.ವಿ.ಯನ್ನು ಕೈಲಾಕ್ (Kylaq) ಎಂದು ಕರೆಯಲಾಗಿದ್ದು ಅದು ಅದರ ಭವಿಷ್ಯದ ಚಾಲಕರೊಂದಿಗೆ ವಿಶಿಷ್ಟ ಸಂಪರ್ಕವನ್ನು ಹೊಂದಿದೆ.
ಈ ಹೆಸರು ಅನಾವರಣದಲ್ಲಿ ಸ್ಕೋಡಾ ಆಟೊ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಪೆಟ್ರ್ ಜನೇಬಾ, “ನಮ್ಮ ಹೊಸ ಎಸ್.ಯು.ವಿ ಕೈಲಾಕ್ (Kylaq) ಭಾರತದ ಜನರಿಗಾಗಿದೆ. ನಾವು ಅವರನ್ನು ದೇಶದ ಅತ್ಯಂತ ದೊಡ್ಡ ಬಿಡುಗಡೆಯ ಪ್ರತಿಯೊಂದು ಮೈಲಿಗಲ್ಲಿನ ಭಾಗವಾಗಿರಲು ಬಯಸುತ್ತೇವೆ. `ನೇಮ್ ಯುವರ್ ಸ್ಕೋಡಾ’ ಅಭಿಯಾನವು ಭಾಗವಹಿಸುವವರಲ್ಲಿ ಮತ್ತು ಸಂಭವನೀಯ ಗ್ರಾಹಕರಲ್ಲಿ ಹೆಮ್ಮೆಯ ಮತ್ತು ಸೇರ್ಪಡೆ ಹೊಂದಿದ ಭಾವನೆ ಮೂಡಿಸುವ ಗುರಿ ಹೊಂದಿದೆ. ಇದರ ಫಲಿತಾಂಶಗಳು 200,000ಕ್ಕೂ ಹೆಚ್ಚು ಪ್ರವೇಶಗಳನ್ನು ಪಡೆದಿರುವುದು ನಿಜಕ್ಕೂ ವಿನೀತವಾಗಿದೆ. ಇದು ಭಾರತದಲ್ಲಿ ನಮ್ಮ ಪರಂಪರೆಯನ್ನು ಮರು ದೃಢೀಕರಿಸುತ್ತದೆ ಮತ್ತು ಜನರಲ್ಲಿ ಬ್ರಾಂಡ್ ಸ್ಕೋಡಾ ಕುರಿತು ಇರುವ ಮಹತ್ತರ ಬಾಂಧವ್ಯವನ್ನು ತೋರಿಸುತ್ತದೆ. ಈ ಕಾರಿನ ಹೆಸರಿಸುವ ಪ್ರಕ್ರಿಯೆಯು ನಮಗೆ ಮುಖ್ಯವಾಗಿದೆ. ಮತ್ತು ಈ ಮುಂದೆ ಬರಲಿರುವ ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ. ಯು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ದೊಡ್ಡ ವರ್ಗದ ಒಳಗಡೆ ಅತ್ಯುತ್ತಮ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಕೈಲಾಕ್ (Kylaq), ಜನರು, ಗ್ರಾಹಕರು ಮತ್ತು ಅಭಿಮಾನಿಗಳು ಸ್ವತಃ ನಮ್ಮ ಹೊಚ್ಚಹೊಸ ಕುಟುಂಬ ಸದಸ್ಯನ ಹೆಸರು ಇರಿಸಿದ್ದು ಅದನ್ನು ಭಾರತ ಮತ್ತು ಯೂರೋಪ್ ನಲ್ಲಿನ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ ಮತ್ತು ಸ್ಥಳೀಯವಾಗಿ ಉತ್ಪಾದನೆಯಾಗುತ್ತವೆ” ಎಂದರು.
ಜನರಿಂದ ಹೆಸರಿಸಲ್ಪಟ್ಟಿದೆ
ನೇಮ್ ಯುವರ್ ಸ್ಕೋಡಾ ಅಭಿಯಾನವನ್ನು ಫೆಬ್ರವರಿ 2024ರಂದು ಪ್ರಾರಂಭಿಸಲಾಗಿದ್ದು ಅದು ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ.ಗೆ ಹೆಸರು ಆಯ್ಕೆ ಮಾಡುವಲ್ಲಿ ಸ್ಕೋಡಾ ಬಳಕೆದಾರರು, ಗ್ರಾಹಕರು ಮತ್ತು ಅಭಿಮಾನಿಗಳ ತೊಡಗಿಕೊಳ್ಳುವಿಕೆ ಮತ್ತು ಸಕ್ರಿಯತೆಯನ್ನು ಸನ್ನದ್ಧವಾಗಿಸಿದ್ದು ಅದು ಅದರ ಭಾರತ ಮತ್ತು ವಿಶ್ವಕ್ಕೆ ಪ್ರವೇಶವನ್ನು 2025ರಲ್ಲಿ ಮಾಡುತ್ತದೆ. `ನೇಮ್ ಯುವರ್ ಸ್ಕೋಡಾ’ ಮೂಲಕ ಭಾಗವಹಿಸುವವರು `ಕೆ’ಯಿಂದ ಪ್ರಾರಂಭಗೊಳ್ಳುವ ಮತ್ತು `ಕ್ಯೂ’ನಿಂದ ಕೊನೆಗೊಳ್ಳುವ ಒಂದು ಅಥವಾ ಎರಡು ಶಬ್ದಗಳಿಂದ ಇರುವ ಕಾಂಪ್ಯಾಕ್ಟ್ ಎಸ್.ಯು.ವಿ. ಹೆಸರುಗಳನ್ನು ಸಲಹೆ ಮಾಡಬೇಕಾಗಿತ್ತು, ಇದು ಅವರ ಐಸಿಇ ಎಸ್.ಯು.ವಿ.ಗಳನ್ನು ಹೆಸರಿಸುವ ಸ್ಕೋಡಾದ ಸಂಪ್ರದಾಯಕ್ಕೆ ಪೂರಕವಾಗಿತ್ತು. ಈ ಅಭಿಯಾನಕ್ಕೆ 200,000ಕ್ಕೂ ಹೆಚ್ಚು ಪ್ರವೇಶಗಳು ಲಭ್ಯವಾಗಿದ್ದು 24,000ಕ್ಕೂ ಹೆಚ್ಚು ವಿಶಿಷ್ಟ ಹೆಸರುಗಳು ಬಂದಿದ್ದವು.
ಮುಂದಿನ ಹಂತದಲ್ಲಿ ಭಾಗವಹಿಸಿದವರು ಆಯ್ಕೆಯಾದ 15 ಹೆಸರುಗಳಲ್ಲಿ ಅವರ ಆಯ್ಕೆಗೆ ಮತ ನೀಡುವ ಅವಕಾಶವಿತ್ತು. ಮತಗಳ ಸಂಖ್ಯೆ ಆಧರಿಸಿ 15 ಆಯ್ಕೆಯಾದ ಹೆಸರುಗಳಲ್ಲಿ 10 ಹೆಸರುಗಳನ್ನು ಸ್ಕೋಡಾ ಆಟೊ ಇಂಡಿಯಾ ಪ್ರಕಟಿಸಿತು. ಈ ಪಟ್ಟಿಯಿಂದ ಅತ್ಯಂತ ಹೆಚ್ಚು ಮತಗಳನ್ನು ಪಡೆದ ವಿಜೇತ ಹೆಸರನ್ನು ಮತ್ತು ಎಲ್ಲ ಕಾನೂನು ಅನುಸರಣೆ ಮಾನದಂಡ ಪೂರೈಸುವ ಹೆಸರು ಕೈಲಾಕ್ (Kylaq) ಹೊಚ್ಚಹೊಸ ಕಾಂಪ್ಯಾಕ್ಟ್ ಎಸ್.ಯು.ವಿ.ಗೆ ಆಯ್ಕೆ ಮಾಡಲಾಗಿದ್ದು ಅದನ್ನು ಸಂಸ್ಕೃತ ಶಬ್ದ ಸ್ಫಟಿಕದಿಂದ ಪಡೆಯಲಾಗಿದ್ದು ಅದು ವಾಹನದ ಮೂಲ ಗುಣಗಳು ಮತ್ತು ಸ್ಫೂರ್ತಿಯನ್ನು ಮೌಂಟ್ ಕೈಲಾಶ್ ರಿಂದ ಪಡೆದಿದೆ.