ಡಾ. ನಿರಂಜನ್ ಪಾಟೀಲ್, ಸಹ ಉಪಾಧ್ಯಕ್ಷರು (AVP), ವೈಜ್ಞಾನಿಕ ವ್ಯವಹಾರಗಳ ಮುಖ್ಯಸ್ಥರು-ಸೋಂಕು ಕಾಯಿಲೆಗಳು, ಮೆಟ್ರೋಪೋಲಿಸ್ ಹೆಲ್ತ್ಕೇರ್ ಲಿ., ಮುಂಬೈ
ವೈದ್ಯಕೀಯ ಕ್ಷೇತ್ರವು, ಅದರಲ್ಲೂ ವಿಶೇಷವಾಗಿ ರೋಗಪತ್ತೆ ಕ್ಷೇತ್ರವು, ಹಳೆಯ ಕಾಲದ ವೈದ್ಯಕೀಯ ಪದ್ಧತಿ ಮತ್ತು ರೋಗಪತ್ತೆ ವಿಧಾನದ ದಿನಗಳಿಗಿಂತ ಗಣನೀಯವಾಗಿ ವಿಕಸನಗೊಂಡಿದೆ. ಈ ವಿಷಯಗಳಲ್ಲಿ ಗಮನಾರ್ಹ ಬೆಳವಣಿಗೆಗಳು ಏರ್ಪಟ್ಟಿವೆ:
1. ಸೆರೊಲಾಜಿಕಲ್ ಆಸ್ಸೇಸ್(Serological assays): ಇವುಗಳು, ವೈರಾಣುವಿನ ಪ್ರತಿಜನಕ(ಆಂಟಿಜೆನ್)ದ ಪತ್ತೆಹಚ್ಚುವಿಕೆ ಅಥವಾ ವೈರಾಣು ಸೋಂಕಿನ ವಿರುದ್ಧ ಅಭಿವೃದ್ಧಿ ಹೊಂದುವ IgM ಅಥವಾ IgG ಪ್ರತಿಕಾಯಗಳ(ಆಂಟಿಬಾಡೀಸ್) ಪತ್ತೆಹಚ್ಚುವಿಕೆ ಅಥವಾ ಪ್ರಮಾಣೀಕರಣದ ರೂಪದಲ್ಲಿ ಮನುಷ್ಯ ದೇಹದ ನಿರೋಧಕ ಪ್ರತಿಕ್ರಿಯೆ ಮೇಲೆ ಆಧಾರಪಟ್ಟಿರಬಹುದು. ರೇಡಿಯೋಇಮ್ಯುನೋಆಸ್ಸೇ ಮುಂತಾದ ಕೈಯಿಂದ ನಡೆಸಲಾಗುತ್ತಿದ್ದ ನಿರೋಧಕತೆ-ವಿಶ್ಲೇಷಣೆಗಳ(ಇಮ್ಯುನೋ-ಆಸ್ಸೇ) ಆರಂಭಿಕ ದಿನಗಳಿಂದಲೂ ಕೈಗೊಳ್ಳಲಾಗುತ್ತಿದ್ದ ರೇಡಿಯೋಐಸೋಟೋಪ್ಸ್ ಒಳಗೊಂಡ ವಿಶ್ಲೇಷಣೆ ಗಳಿಂದ ಹೊರಬಂದು, ಪ್ರಸ್ತುತದ ದಿನಗಳ ಫ್ಲೋರೋಸೆಂಟ್ ವಿಶ್ಲೇಷಣೆಗಳು ಅಥವಾ ಕಿಣ್ವ-ಸಂಪರ್ಕಿತ ಫ್ಲೋರೊಸೆಂಟ್ ಆಧಾರಿತ ವಿಶ್ಲೇಷಣೆ(ELFA), ಕೆಮಿಲ್ಯೂಮಿನೆಸೆನ್ಸ್ ವಿಶ್ಲೇಷಣೆಗಳು(CLIA), ಕೆಮಿಲ್ಯೂಮಿನೆಸೆನ್ಸ್ ಮೈಕ್ರೋಪಾರ್ಟಿಕಲ್ ವಿಶ್ಲೇಷಣೆಗಳು(CMIA), ರಾಪಿಡ್ ಇಮ್ಯುನೊಕ್ರೊಮಾ ಟೋಗ್ರಫಿ ಆಧರಿತ ಇಮ್ಯುನೊಫಿಲ್ಟ್ರೇಶನ್ ವಿಶ್ಲೇಷಣೆಯಂತಹ ಕೆಮಿಲ್ಯೂಮಿನೆಸೆಂಟ್ ವಿಶ್ಲೇಷಣೆಗಳವರೆಗೂ, ಗಣನೀಯ ಪ್ರಗತಿ ಏರ್ಪಟ್ಟಿದೆ.
2. ಪರೀಕ್ಷೆಯ ಪಾಯಿಂಟ್ (POCT): ಈ ಸಾಧನಗಳು ಕ್ಷಿಪ್ರ ರೋಗಪತ್ತೆ ಪರೀಕ್ಷೆಗಳಾಗಿದ್ದು, ಇವುಗಳನ್ನು, ವೈದ್ಯರ ಚಿಕಿತ್ಸಾಲಯ, ತುರ್ತುಸ್ಥಿತಿ ವಾರ್ಡುಗಳು ಅಥವಾ ರೋಗಿಯ ಮನೆ, ಅಥವಾ ಶಿಬಿರ ಸೆಟ್ಟಿಂಗ್ಗಳಲ್ಲಿ ನೆರವೇರಿಸಬಹುದು. ಸಾಮಾನ್ಯವಾಗಿ ಇವು, ಕ್ಷಿಪ್ರ ಕ್ಯಾಸೆಟ್ ಸಾಧನಗಳನ್ನು ಹೊಂದಿರುವ ಪಾರ್ಶ್ವ ಹರಿವಿನ(ಲ್ಯಾಟರಲ್ ಫ್ಲೋ) ವಿಶ್ಲೇಷಣೆಗಳಾಗಿರಬಹುದು ಅಥವಾ ಅವು, ಯಾಂತ್ರೀಕೃತ ಸಾಧನದ ಚಿಕ್ಕಪ್ರತಿರೂಪದ ಆವೃತ್ತಿ ಗಳಾಗಿರಬಹುದು. ಈ POCT ಸಾಧನಗಳು, ವೈರಾಣು ಸೋಂಕಿಗೆ ಮನುಷ್ಯ ದೇಹದ ನಿರೋಧಕ ಪ್ರತಿಕ್ರಿಯೆಯಿಂದಾಗಿ ಏರ್ಪಡುವ ವೈರಾಣುವಿನ ಪ್ರತಿಜನಕ ಅಥವಾ ಪ್ರತಿಕಾಯಗಳ ಕ್ಷಿಪ್ರ ಪತ್ತೆಹಚ್ಚುವಿಕೆ ಒದಗಿಸುತ್ತವೆ. ಫಲಿತಾಂಶಗಳು ಕೆಲವೇ ನಿಮಿಷಗಳಲ್ಲಿ ಲಭ್ಯವಾಗಿ ಕೂಡಲೇ ರೋಗಿ ಆರೈಕೆಗೆ ಲಭ್ಯವಾಗುತ್ತವೆ.
3. ಪಾಲಿಮರೇಸ್ ಚೈನ್ ರಿಯಾಕ್ಷನ್ (PCR) ಪರೀಕ್ಷೆ: ಇವು, ಹೆಪಾಟೈಟಿಸ್ ವೈರಾಣುಗಳ ವಂಶಾವಳಿ ವಸ್ತು(DNA ಅಥವಾ RNA)ವನ್ನು ಪತ್ತೆಹಚ್ಚುವ ಗುರಿ ಹೊಂದಿರುವ ಆಣ್ವಿಕ(ಮಾಲಿಕ್ಯುಲರ್) ಪರೀಕ್ಷೆಗಳಾಗಿವೆ. ಇವುಗಳನ್ನು, ಗುಣಾತ್ಮಕ ಪತ್ತೆಹಚ್ಚುವಿಕೆಗೆ ಅಥವಾ ರೋಗದ ಪ್ರಗತಿ ಮತ್ತು ಚಿಕಿತ್ಸೆಯ ಮೇಲುಸ್ತುವಾರಿ ಮಾಡುವುದಕ್ಕಾಗಿ ವೈರಾಣುವಿನ ನಕಲುಪ್ರತಿಗಳ ಪ್ರಮಾಣೀಕರಣವನ್ನು ಮಾಡುವುದಕ್ಕೆ ಉಪಯೋಗಿಸಬಹುದು. ಈ ಪರೀಕ್ಷೆಗಳು ಸ್ವಲ್ಪ ಸೂಕ್ಷ್ಮ ಹಾಗೂ ನಿರ್ದಿಷ್ಟವಾಗಿರುವುದರಿಂದ, ಇವುಗಳನ್ನು ವೈರಾಣು ಸೋಂಕುಗಳ ಆರಂಭಿಕ ಹಂತಗಳಲ್ಲೂ ಬಳಸಲಾಗುತ್ತದೆ.
4. ಮಲ್ಟಿಪ್ಲೆಕ್ಸ್ ವಿಶ್ಲೇಷಣೆಗಳು : ಸಹ-ಸೋಂಕುಗಳೂ ಒಳಗೊಂಡಂತೆ, ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚಿನ ಹೆಪಾಟೈಟಿಸ್ ವೈರಾಣುವನ್ನು ಗುರುತಿಸುವ ರೀತಿಯಲ್ಲಿ ಇವುಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ರಕ್ತನಿಧಿಗಳಲ್ಲಿ ದಾನ ಮಾಡುವ ರಕ್ತವನ್ನು ಸ್ಕ್ರೀನ್ ಮಾಡಲು ಅಥವಾ ಸಾಂಕ್ರಾಮಿಕರೋಗ ಶಾಸ್ತ್ರಗಳ ಉದ್ದೇಶಗಳಿಗೂ ನಿರ್ದಿಷ್ಟವಾಗಿ ಈ ದೃಷ್ಟಿಕೋನ ಉಪಯುಕ್ತವಾಗಿರುತ್ತದೆ.
5. ಸೀಕ್ವೆನ್ಸಿಂಗ್ ತಂತ್ರಗಳು : ಸ್ಯಾಂಗರ್(Sanger) ಸೀಕ್ವೆನ್ಸಿಂಗ್ ಅಥವಾ ಜನರೇಶನ್ ಸೀಕ್ವೆನ್ಸಿಂಗ್(NGS)ಮುಂತಾದ ತಂತ್ರಗಳನ್ನು, ವೈರಾಣುವಿನ ಜೆನೋಟೈಪ್ಸ್(ವಂಶವಾಹಿಗಳ ಕ್ರಮಾನುಗತಿಯ ವಿಧ) ಮತ್ತು ಉಪವಿಧಗಳನ್ನು ಬೇಗನೆ ಪತ್ತೆ ಹಚ್ಚುವುದಕ್ಕೆ, ಮತ್ತು ವೈರಾಣುನಿರೋಧಕಗಳಿಗೆ ಔಷಧದ ಪ್ರತಿರೋಧ ತೀರ್ಮಾನಿಸಲು, ವೈರಾಣು ವಂಶವಾಹಿಗಳ ಪರಿವರ್ತನೆಯನ್ನು ಗುರುತಿಸಲು, ವೈರಾಣುವಿನ ವಿಕಸನದ ಪತ್ತೆ ಹಚ್ಚಲು, ಮತ್ತು ಸಮುದಾಯ ಹಾಗೂ ಸಾಂಸ್ಥಿಕ ಸೆಟ್ಟಿಂಗ್ಗಳಲ್ಲಿ ಸಾಂಕ್ರಾಮಿಕತೆಯ ಪ್ರವೃತ್ತಿಗಳನ್ನು ತೀರ್ಮಾನಿಸಲು ಬಳಸಲಾಗುತ್ತದೆ.
6. ಇಮೇಜಿಂಗ್ ಮತ್ತು ಡಿಜಿಟಲ್ ಪೆಥಾಲಜಿ : ಮ್ಯಾಗ್ನೆಟಿಕ್ ರೆಸೋನೆನ್ಸ್ ಫೈಬ್ರೋ-ಎಲಾಸ್ಟೋಗ್ರಫಿ, ರೇಡಿಯೋಮಿಕ್ಸ್ ಮುಂತಾದ ಅತ್ಯಾಧುನಿಕ ಇಮೇಜಿಂಗ್ ಪರಿಶೋಧನೆಗಳು ಹಾಗೂ ಡಿಜಿಟಲ್ ಪೆಥಾಲಜಿಯನ್ನು, ಹೆಪಾಟೈಟಿಸ್ ವೈರಾಣುಗಳಿಂದ ಯಕೃತ್ತಿನ ಕೋಶಗಳಿಗೆ ಏರ್ಪಡುವ ಹಾನಿ ಯನ್ನು ಮಾಪಿಸಲು ಬಳಸಲಾಗುತ್ತದೆ. ರೋಗಿಯ ಕಾಯಿಲೆಗೆ ಚಿಕಿತ್ಸೆಯ ಸವಿವರ ಯೋಜನೆ ಮತ್ತು ನಿರ್ವಹಣೆಯಲ್ಲಿ ಈ ಪರೀಕ್ಷೆಗಳು ಒದಗಿಸುವ ವಿವರಗಳು ಉಪಯುಕ್ತವಾಗಿರುತ್ತವೆ.
7. ರೋಗಪತ್ತೆಯಲ್ಲಿ ಕೃತಕ ಬುದ್ಧಿಮತ್ತೆ(Artificial intelligence): ರೋಗಿಯ ವೈದ್ಯಕೀಯ ಇತಿಹಾಸ, ನೆರವೇರಿಸಲಾಗಿರುವ ಕಾರ್ಯವಿಧಾನಗಳು, ರೋಗಪತ್ತೆ ಶೋಧನೆಗಳು, ಮೇಲುಸ್ತುವಾರಿ ಪರೀಕ್ಷೆಗಳು ಮತ್ತು ಇಮೇಜಿಂಗ್ ಪರೀಕ್ಷೆಗಳನ್ನು ಒಳಗೊಂಡ ಸಂಕೀರ್ಣ ರೋಗಿ-ಸಂಬಂಧಿತ ಮಾಹಿತಿ ಯನ್ನು ವಿಶ್ಲೇಷಿಸಲು ಹೊಸ ಆಲ್ಗೋರಿದಮ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ AI-ಆಧಾರಿತ ರೋಗಪತ್ತೆ ಪರೀಕ್ಷೆಗಳು, ಹೆಪಾಟೈಟಿಸ್ ವೈರಾಣುಗಳ ಆರಂಭಿಕ ಪತ್ತೆ ಒದಗಿಸುವ ಮೂಲಕ ರೋಗಿ ನಿರ್ವಹಣೆಯನ್ನು ಗರಿಷ್ಟಗೊಳಿಸಲು, ಮಾರ್ಗಸೂಚಿಗಳು ಮತ್ತು ಸೋಂಕಿನ ಹಂತಗಳ ಮೇಲೆ ಆಧಾರಿತವಾದ ಚಿಕಿತ್ಸಾಕ್ರಮಗಳನ್ನು ಸೂಚಿಸಲು, ಚಿಕಿತ್ಸೆಯ ಮೇಲುಸ್ತುವಾರಿ ಮಾಡಲು ಮತ್ತು ಫಲಿತಾಂಶಗಳ ಮುನ್ಸೂಚನೆ ಒದಗಿಸಲು ಉಪಯುಕ್ತವಾಗಿರುತ್ತವೆ.
8. ಬಯೋಮಾರ್ಕರ್ಸ್(Biomarkers): ಸೋಂಕಿನ ಆರಂಭಿಕ ಪತ್ತೆಗಾಗಿ ಅಥವಾ ಪ್ರಗತಿಯ ಮೇಲುಸ್ತುವಾರಿಗಾಗಿ ನೆರವಾಗಬಲ್ಲ ಸೋಂಕಿನ ವಿಶಿಷ್ಟ ಗುರುತು(ಮಾರ್ಕರ್)ಗಳನ್ನು ಪತ್ತೆಹಚ್ಚಲು, ಸಂಶೋಧನೆಯಲ್ಲಿ ಮತ್ತು ಪರೀಕ್ಷೆಗಳಲ್ಲಿ ನಿರಂತರ ಅಭಿವೃದ್ಧಿಯಾಗುತ್ತಿವೆ. ಈ ಬಯೋಮಾರ್ಕರ್ಗಳು, ರಕ್ತ ಅಥವಾ ದೇಹದ ದ್ರವಗಳು ಮುಂತಾದ ರೋಗಿಯ ವಿವಿಧ ಮಾದರಿಗಳಿಂದ ಪಡೆದುಕೊಂಡವುಗಳಾಗಿರಬಹುದು.
ಮೇಲೆ ತಿಳಿಸಿದ ವಿನೂತನ ರೋಗಪತ್ತೆ ವಿಧಾನಗಳು, ಹೆಪಾಟೈಟಿಸ್ ವೈರಾಣುಗಳ ರೋಗಪತ್ತೆಯ ನಿಖರತೆ ಮತ್ತು ವೇಗವನ್ನು ಇನ್ನಷ್ಟು ಉತ್ತಮ ಗೊಳಿಸುವುದಕ್ಕೆ ನೆರವಾಗುವ ಮೂಲಕ ಸುಧಾರಿತ ಸಾಮರ್ಥ್ಯ, ಉತ್ತಮ ತಿಳುವಳಿಕೆ, ಮತ್ತು ಸುಧಾರಿತ ರೋಗನಿರ್ವಹಣೆಗೆ ಕೊಡುಗೆ ಸಲ್ಲಿಸಲು ಸದಾ ಏರ್ಪಡುತ್ತಿರುವ ತಂತ್ರಗಳನ್ನು ಪ್ರತಿನಿಧಿಸುತ್ತವೆ. ಒಟ್ಟಾರೆಯಾಗಿ ಇದು, ರೋಗಿ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ, ರೋಗಿ-ಸಂಬಂಧಿತ ಫಲಿತಾಂಶಗಳನ್ನು ಉತ್ತಮವಾಗಿಸುತ್ತದೆ ಹಾಗೂ ರೋಗದೊಂದಿಗೆ ಬರುವ ಯಾತನೆಗಳನ್ನು ಕಡಿಮೆ ಮಾಡುತ್ತದೆ.