ಮಂಡ್ಯ: ನಮ್ಮ 50 ಶಾಸಕರ ಖರೀದಿಗೆ ಪ್ರಯತ್ನ ನಡೆಯುತ್ತಿದ್ದು, ಒಬ್ಬೊಬ್ಬರಿಗೆ 100 ಕೋಟಿಯ ಆಫರ್ ಮಾಡಿದ್ದಾರೆ ಎಂದು ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಆರೋಪ ಮಾಡಿದ್ದಾರೆ.
ಬಿಜೆಪಿಯ ಬ್ರೋಕರ್‌ಗಳು ಪ್ರತಿನಿತ್ಯ ನಮ್ಮ ಶಾಸಕರನ್ನ ಸಂಪರ್ಕಿಸುತ್ತಿದ್ದಾರೆ. ಮೊದಲು 50 ಕೋಟಿಯಿಂದ 100 ಕೋಟಿಗೆ ಆಫರ್ ಏರಿಕೆ ಆಗಿದೆ. ಮೊನ್ನೆಯೂ ಕೆಲ ಕಾಂಗ್ರೆಸ್ ಶಾಸಕರಿಗೆ ಕರೆಗಳು ಬಂದಿವೆ. 100 ಕೋಟಿ ರೆಡಿ.. 100 ಕೋಟಿ ರೆಡಿ ಇದೆ ಎಲ್ಲಿಗೆ ಬರ್ತೀರಾ?
50 ಜನ MLA ಖರೀದಿಗೆ ಪ್ಲಾನ್ ನಡೆದಿದೆ ಎಂದಿದ್ದಾರೆ. ನನಗೆ ಯಾರೋ ಒಬ್ಬ ಫೋನ್ ಮಾಡಿದ್ದ, ನೂರು ಕೋಟಿ ರೆಡಿ ಎಂದು ಹೇಳ್ದ. ಹೇಯ್ ನೂರು ಕೋಟಿ ಇಟ್ಕೊಳಯ್ಯ, ನಿನ್ನನ್ನು ಯಾರು ಹಿಡಿಯವರು ಹಿಡಿಯುತ್ತಿಲ್ವಾ ಅಂತಾ ಹೇಳಿದ್ದೇನೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಕರೆ ಮಾಡಬೇಕು ಅಂತಲೂ ಚಿಂತಿಸಿದ್ದೆ. ನಮ್ಮ ಸರ್ಕಾರ ಬೀಳಿಸಲು ದಿನನಿತ್ಯ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.