ತವರಿನಲ್ಲಿ ಗೆಲುವಿನ ಫೇವರೇಟ್ ಎನಿಸಿಕೊಂಡಿದ್ದ ಪಾಕಿಸ್ತಾನ ತಂಡದ ಬ್ಯಾಟಿಂಗ್ ವಿಭಾಗ ಎರಡನೇ ಇನ್ನಿಂಗ್ಸ್ನಲ್ಲಿ ಧಯನೀಯವಾಗಿ ವಿಫಲ ವಾಯಿತು. ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು 448 ರನ್ ಕಲೆಹಾಕಿದ್ದ ಪಾಕ್ ತಂಡ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 146 ರನ್ಗಳಿಗೆ ಆಲೌಟ್ ಆಯಿತು.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಯಾವುದೇ ವಿಕೆಟ್ ಕಳೆದು ಕೊಳ್ಳದೆ ಜಯದ ನಗೆಬೀರಿತು. ಈ ಗೆಲುವಿನೊಂದಿಗೆ ಬಾಂಗ್ಲಾ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ವಾಸ್ತವವಾಗಿ ಪಿಸಿಬಿ, ಮೊದಲ ಟೆಸ್ಟ್ಗಾಗಿ ರಾವಲ್ಪಿಂಡಿಯಲ್ಲಿ ವೇಗಿಗಳಿಗೆ ನೆರವಾಗುವಂತೆ ಗ್ರೀನ್ ಪಿಚ್ ಸಿದ್ದಪಡಿಸಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದಕ್ಕೆ ಪೂರಕವಾಗಿ ಪಿಸಿಬಿ, ಮೊದಲ ಟೆಸ್ಟ್ಗೆ ತನ್ನ ತಂಡದಲ್ಲಿ ಸ್ಪಿನ್ನರ್ಗಳಿಗೆ ಅವಕಾಶವನ್ನೇ ನೀಡಿರ ಲಿಲ್ಲ. ಅದೃಷ್ಟವೆಂಬಂತೆ ಟಾಸ್ ಕೂಡ ಪಾಕ್ ಪರವಾಗಿಯೇ ಬಿದ್ದಿತ್ತು. ಹೀಗಾಗಿ ಗ್ರೀನ್ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಆನಂತರ ಬಾಂಗ್ಲಾ ತಂಡಕ್ಕೆ ಸಂಕಷ್ಟ ನೀಡುವ ಇರಾದೆಯೊಂದಿಗೆ ಪಾಕ್ ತಂಡ ಕಣಕ್ಕಿಳಿದಿತ್ತು. ಆದರೆ ಮೊದಲ ದಿನದಾಟದ ನಂತರ ಪಿಚ್ನ ಸ್ವರೂಪವೇ ಬದಲಾಗಿತ್ತು. ಹೀಗಾಗಿ ಪಿಸಿಬಿಯ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿತ್ತು.