ಚಿಕ್ಕಮಗಳೂರು: ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿಯಲ್ಲಿ ಕಳಸ ಅರಣ್ಯ ಇಲಾಖೆ ಡಿಆರ್ ಎಫ್ ಓ ಚಂದನ್ ಗೌಡ ಅವರನ್ನು ಅಮಾನತ್ತುಗೊಳಿಸಿ ಕೊಪ್ಪ ಅರಣ್ಯ ವಿಭಾಗದ ಡಿಎಫ್ ಓ ಉಪೇಂದ್ರ ಪ್ರತಾಪ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಡಿಆರ್ ಎಫ್ ಓ ಚಂದನ್ ಗೌಡ ರಾಣಿಝರಿ, ಬಂಡಾಜೆ ಫಾಲ್ಸ್ ಟಿಕೆಟ್ ಗೋಲ್ ಮಾಲ್ ಮಾಡಿ ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ನಕಲಿ ಆನ್ ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದು 9 ಸಾವಿರ ವಂಚನೆ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಹಣವನ್ನು ಫೋನ್ ಪೇ ಮೂಲಕ ಯುವತಿಯೊಬ್ಬರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ದೂರು ಇದೆ. ಕೇವಲ 9 ಸಾವಿರ ಅಲ್ಲದೇ ಲಕ್ಷಗಟ್ಟಲೆ ಹಣ ದುರುಪಯೋಗವಾಗಿರುವ ಅನುಮಾನ ವ್ಯಕ್ತವಾಗಿದೆ.
ಬಂಡಾಂಜೆ ಫಾಲ್ಸ್ ಬಳಿ 200 ಜನರಿಗೆ ಟಿಕೆಟ್ ನೀಡದೆ ಬಿಡಲಾಗಿದ್ದು ಮದ್ಯ ವಶಕ್ಕೆ ತೆರಳಿದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಜೂನ್ ತಿಂಗಳಲ್ಲಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಹಾಗೂ ಪ್ರವಾಸಿಗರ ನೋಂದಣಿ ಪುಸ್ತಕದಲ್ಲಿ ಎಂಟ್ರೀ ಮಾಡಿಲ್ಲ ಎಂಬ ಆರೋಪವೂ ಈತನ ಮೇಲಿದೆ.