Monday, 25th November 2024

ಶೀಘ್ರವೇ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಮೈತ್ರಿಪಕ್ಷದ ಮುಖಂಡರಿಂದ ಜಿಲ್ಲಾಧಿಕಾರಿಗೆ ಮನವಿ

chickballapurಚಿಕ್ಕಬಳ್ಳಾಪುರ: ರಾಜ್ಯದ ಇತರೆ ಜಿಲ್ಲೆಗಳಲ್ಲಿ ಈಗಾಗಲೇ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗಿದ್ದರೂ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಈ ಪ್ರಕ್ರಿಯೆ ವಿಳಂಬವಾಗಿದೆ. ವಿಳಂಬ ನೀತಿಯನ್ನು ಕೈಬಿಟ್ಟು ಕೂಡಲೇ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ  ಮಾಡಬೇಕೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಮೈತ್ರಿ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಆಗಿಲ್ಲ ಇದರ ಸಂಬಂಧಪಟ್ಟಾಗಿ ಇಂದು ಬಿಜೆಪಿ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರ ತಂಡ ಹಾಗೂ ಬಿಜೆಪಿ ಮುಖಂಡರಾದ ಕೆ.ವಿ.ನಾಗರಾಜ್, ಕೆ.ವಿ.ನವೀನ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ,ಮರಳುಕುಂಟೆ ಕೃಷ್ಣಮೂರ್ತಿ,ಇತರೆ ಮುಖಂಡರು ಚುನಾವಣೆ ದಿನಾಂಕ ನಿಗದಿ ಮಾಡಬೇಕು ಹಾಗೂ ಚುನಾವಣೆಯನ್ನ ಪಾರದರ್ಶಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವ ಣೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರನ್ನು ಕೂಡ ಮತದಾರರ ಪಟ್ಟಿಯಲ್ಲಿ ಸೇರಿಸಲು ಹುನ್ನಾರ ನಡೆಯುತ್ತಿದೆ. ಕೇವಲ ಸಂಸದರು ಹಾಗೂ ಶಾಸಕರು ಸ್ಥಳೀಯರಾಗಿದ್ದಾರೆಯೇ ವಿನಃ  ವಿಧಾನ ಪರಿಷತ್ ಸದಸ್ಯರು ಸ್ಥಳೀಯರಾಗಲ್ಲ.ಇವರನ್ನು ಪಟ್ಟಿಗೆ ಸೇರಿಸಲು ಕೆಲವರು ಹುನ್ನಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.ಇದು ಆಗಬಾರದು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದೇವೆ ಎಂದರು.

ಮಾವು ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ ಮತದಾನ ನಗರಸಭಾ ಸದಸ್ಯರ ಜತೆಗೆ ಸ್ಥಳೀಯ ಶಾಸಕ ಸಂಸದರಿಗೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕಿದೆ.ಇಂತಹ ಅರ್ಹರನ್ನು ಹೊರತು ಪಡಿಸಿ,ಮತದಾನದ ಹಕ್ಕು ಇಲ್ಲದ ಎಂಎಲ್‌ಸಿಗಳಿಗೆ ಹಕ್ಕು  ನೀಡುವ ಹುನ್ನಾರ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿಯಿತ್ತು.ಇದೇ ಕಾರಣಕ್ಕಾಗಿ ಗುರುವಾರ ಮೈತ್ರಿ ಪಕ್ಷದ ಮುಖಂಡರು ಒಟ್ಟಿಗೆ ಸೇರಿ ಇದಕ್ಕೆ ಆಸ್ಪದ ನೀಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ.ಕಾಂಗ್ರೆಸ್ ಪಕ್ಷದ ಶಾಸಕರು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಏನೇ ತಿಪ್ಪರಲಾಗ ಹಾಕಿದರೂ ಚಿಕ್ಕಬಳ್ಳಾಪುರ ನಗರ ಸಭೆಯ ಅಧಿಕಾರ ಮೈತ್ರಿಪಕ್ಷದ ಪಾಲಾಗುವುದನ್ನು ತಪ್ಪಿಸಲು ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಆನಂದಬಾಬುರೆಡ್ಡಿ, ಮಂಜುನಾಥ್,ಮುನಿಕೃಷ್ಣ,ಸದಸ್ಯರಾದ ನಾಗರಾಜ್.ಜೆ,ಗಜೇಂದ್ರ, ಮಟಮಪ್ಪ. ಆರ್,ಯತೀಶ್ ಸುಬ್ರಮಣ್ಯಚಾರಿ, ಮಂಜುನಾಥಾ ಚಾರಿ, ರುಕ್ಮಿಣಿ ಮಂಜುನಾಥ್,ಸ್ವಾತಿ ಮಂಜುನಾಥ್,ಸತೀಶ್,ಜೆಡಿಎಸ್ ಕಾರ್ಯದಕ್ಷ ಕೆ.ಆರ್ ರೆಡ್ಡಿ, ಮುಖಂಡರಾದ ಬೈರೇಗೌಡ, ಮಹೇಶ್,ಅನು ಆನಂದ್, ಪುರದಗಡ್ಡೆ ಮುನೇಗೌಡ, ಮಹಾಕಾಳಿ ಬಾಬು, ಶ್ರೀನಿವಾಸ್, ಅರುಣ್ ಇತರರು ಉಪಸ್ಥಿತರಿದ್ದರು.
*

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡುವಂತೆ ಬಿಜೆಪಿ ಜೆಡಿಎಸ್ ಪಕ್ಷದ ಮುಖಂಡರು ಬಂದು ಮನವಿ ಸಲ್ಲಿಸಿದ್ದಾರೆ. ಎಂಎಲ್‌ಸಿಗಳನ್ನು ಕೂಡ ಮತದಾರರ ಪಟ್ಟಿಗೆ ಸೇರಿಸುವ ಬಗ್ಗೆ ಗುಮಾನಿಯಿದೆ. ಅಂತಹವರನ್ನು ಪಟ್ಟಿಯಿಂದ ಕೈಬಿಡುವಂತೆ ಕೂಡ ಕೋರಿದ್ದಾರೆ. ಜಿಲ್ಲೆಯ ೪ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಈಗಾಗಲೇ ಉಪವಿಭಾಗಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದರು.
ಪಿ.ಎನ್.ರವೀಂದ್ರ ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ.