Sunday, 24th November 2024

ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಜೈಲಿಗೆ ದರ್ಶನ್ ಶಿಫ್ಟ್ : ಬಾಗೇಪಲ್ಲಿ ಗಡಿಯ ನಾರೇಪಲ್ಲಿ ಟೋಲ್‌ನಲ್ಲಿ ಪ್ರಯಾಣದ ದೃಶ್ಯ ಸೆರೆ

chickballapur

ಚಿಕ್ಕಬಳ್ಳಾಪುರ : ರೇಣುಕಾಸ್ವಾಮಿ ಕೊಲೆಕೇಸಿನಲ್ಲಿ ಸಿಕ್ಕಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಚಾಲೆಂಜಿAಗ್ ಸ್ಟಾರ್ ದರ್ಶನ್ ವಿಚಾರಣಾಧೀನ ಕೈದಿಯಂತಿರದೆ ನಿಯಮಮೀರಿ ರಾಜಾತಿಥ್ಯ ಪಡೆದಿದ್ದರು ಎಂಬ ಸುದ್ದಿ ವೈರಲ್ ಆದ ಹಿನ್ನೆಲೆ ಹತ್ತಾರು ಅಧಿಕಾರಿಗಳ ತಲೆದಂಡದ ಜತೆಗೆ ಅತನನ್ನು ಬಳ್ಳಾರಿಯ ಇಂಡಲಗಾ ಜೈಲಿಗೆ ಸ್ಥಳಾಂತರಿಸುವರು ಎಂಬ ಕೂಗು ಜೋರಾಗಿತ್ತು.

ಜನಪ್ರಿಯ ನಟ ಮತ್ತು ಕುಖ್ಯಾತ ಪ್ರಕರಣ ಇದಾದ ಕಾರಣ ದೇಶದ ಗಮನ ಸೆಳೆದಿತ್ತು. ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಗುರುವಾರ ಬೆಳಗಿನ ಜಾವ ೪:೩೦ ಕ್ಕೆ  ಪರಪ್ಪನ ಅಗ್ರಹಾರ ಜೈಲಿಂದ  ಬಳ್ಳಾರಿಗೆ ಸ್ಥಳಾಂತರಿ ಸಲು ಮುಂದಾದ ಪೊಲೀಸ್ ಇಲಾಖೆ ಅದಕ್ಕೆ ಆರಿಸಿಕೊಂಡ ಮಾರ್ಗ ಚಿಕ್ಕಬಳ್ಳಾಪುರದ ಮೂಲಕ ಸಾಗುವ ಬೆಂಗಳೂರು ಬಳ್ಳಾರಿ ಮಾರ್ಗವಾಗಿತ್ತು.

೫ ಪೊಲೀಸ್ ವಾಹನಗಳ ಹೈಸೆಕ್ಯೂರಿಟಿಯೊಂದಿಗೆ ನಟ ದರ್ಶನ ಅವರನ್ನು ಚಿಕ್ಕಬಳ್ಳಾಪುರದ ಮೂಲಕ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ ೪೪ರ ಮೂಲಕ ಬಳ್ಳಾರಿಯ ಇಂಡಲಗಾ ಜೈಲಿನತ್ತ ಗುರುವಾರ ಮುಂಜಾನೆ ಪ್ರಯಾಣ ಬೆಳೆಸಿದ್ದರು.

ಬಳ್ಳಾರಿಗೆ ಹೋಗುವ ಮಾರ್ಗಮಧ್ಯೆ ಬರುವ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಗಡಿಯ ನಾರೇಪಲ್ಲಿ ಟೋಲ್ ಗೇಟ್‌ನ ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.ಬೆಳಗ್ಗೆ ೬:೪೦ ಕ್ಕೆ ಬಾಗೇಪಲ್ಲಿ ಟೋಲ್ ಮೂಲಕ ದರ್ಶನ್ ಅವರನ್ನು ಹೊತಿದ್ದ ವಾಹನ ಬಳ್ಳಾರಿಯತ್ತ ಪ್ರಯಾಣ ಬೆಳೆಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಒಟ್ಟು ಐದು ಪೊಲೀಸ್ ಬೆಂಗಾವಲು ವಾಹನಗಳ ಮೂಲಕ ದರ್ಶನ್ ಅವರನ್ನು  ಕರೆದುಕೊಂಡು ಮಂತ್ರಾಲಯ ಮಾರ್ಗದ ಮೂಲಕ ಬಳ್ಳಾರಿಯ ಇಂಡಲಗಾ ಜೈಲು ಪ್ರವೇಶ ಮಾಡಲಿವೆ.

ಏನೇ ಆಗಲಿ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡ ಜನಪ್ರಿಯ ನಟ ನಟಿಯರು ನೆಲದ ಕಾನೂನಿಗೆ ಬದ್ದವಾಗಿ ನಡೆದುಕೊಳ್ಳಬೇಕು.ತಮ್ಮನ್ನು ಅಂಧರAತೆ ಪ್ರೀತಿಸುವ ಕೋಟ್ಯಾಂತರ ಅಭಿಮಾನಿಗಳು ಗರ್ವ ಪಡುವಂತೆ ಬದುಕು ತೋರಿಸಬೇಕು.ಅದು ಬಿಟ್ಟು ಚಲನ ಚಿತ್ರಗಳಲ್ಲಿ ನಾಯಕ ನಿಜಜೀವನದಲ್ಲಿ ಖಳನಾಯಕ ಆಗಬಾರದು. ದರ್ಶನ್ ರೀತಿ ನಡೆದುಕೊಂಡರೆ ಏನೆಲ್ಲಾ ಆಗಲಿದೆ ಎಂಬುದಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣವೇ ಸಾಕ್ಷಿಯಾಗಿದೆ.