Friday, 22nd November 2024

Paris Paralympics: ಭಾರತಕ್ಕೆ ಮೊದಲ ಪದಕ ಭರವಸೆ ಮೂಡಿಸಿದ ಮಹಿಳಾ ಶೂಟರ್‌ಗಳು; ಅವನಿ, ಅಗರ್ವಾಲ್ ಫೈನಲ್‌ಗೆ

Paris Paralympics

ಪ್ಯಾರಿಸ್‌: ಶುಕ್ರವಾರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್(Paris Paralympics) 2024ರ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪಧೆಯಲ್ಲಿ ಭಾರತ ಶೂಟರ್‌ಗಳಾದ ಅವನಿ ಲೇಖರ(Avani Lekhara) ಮತ್ತು ಮೋನಾ ಅಗರ್ವಾಲ್(Mona Agarwal) ಫೈನಲ್‌ ಪ್ರವೇಶಿಸುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಫೈನಲ್‌ ಪಂದ್ಯ ಇಂದೇ ನಡೆಯಲಿದೆ. ಇಂದು ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಲಿ ಪ್ಯಾರಾಲಿಂಪಿಕ್ ಚಾಂಪಿಯನ್ ಅವನಿ 625.8 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದರೆ,  ಮೋನಾ 623.1 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು. 17 ಶೂಟರ್‌ಗಳಲ್ಲಿ ಅಗ್ರ ಎಂಟು ಮಂದಿ ಫೈನಲ್‌ಗೆ ಅರ್ಹತೆ ಪಡೆದರು. ಉಭಯ ಶೂಟರ್‌ಗಳ ಪೈಕಿ ಯಾರೇ ಪಕದ ಗೆದ್ದರೂ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಖಾತೆ ತೆರೆಯಲಿದೆ.

ಕಳೆದ ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕದ ಖಾತೆ ತೆರೆದ್ದು ಕೂಡ ಅವನಿ ಲೇಖರ. ಇದೀಗ ಪ್ಯಾರಿಸ್‌ನಲ್ಲಿಯೂ ಇದೇ ಸಾಧನೆ ಮಾಡುವ ಸನಿಹದಲ್ಲಿದ್ದಾರೆ. ರಾಜಸ್ಥಾನದ ಅವನಿ ಟೋಕಿಯೋದಲ್ಲಿ 10 ಮೀ. ಏರ್ ರೈಫಲ್‌ನಲ್ಲಿ ಚಿನ್ನ ಹಾಗೂ 50 ಮೀ. ಏರ್ ರೈಫಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಇಂದು ನಡೆದ ಪುರುಷರ ಸಿಂಗಲ್ಸ್ SL3 ಬ್ಯಾಡ್ಮಿಂಟನ್‌  ವಿಭಾಗದ ಪಂದ್ಯದಲ್ಲಿ ಭಾರತದ ನಿತೇಶ್‌ ಕುಮಾರ್‌ ಚೀನಾದ ಯಾಂಗ್ ಜಿಯಾನ್ಯುವಾನ್ ಅವರನ್ನು 21-5, 21-11 ನೇರ ಗೇಮ್‌ಗಳಿಂದ ಹಿಮ್ಮಟ್ಟಿಸುವಲ್ಲಿ ಯಶಸ್ವಿಯಾದರು. ಆದರೆ ಇದೇ ವಿಭಾಗದಲ್ಲಿ ಕಣಕ್ಕಿಳಿದ್ದ ಮತೋರ್ವ ಭಾರತೀಯ ಮನೋಜ್‌ ಸರ್ಕಾರ್‌ ಥಾಯ್ಲೆಂಡ್‌ನ ಮೊಂಗ್ಖೋನ್ ಬುನ್ಸನ್ ವಿರುದ್ಧ 19-21, 8-21 ಅಂತರದಿಂದ ಪರಾಭವಗೊಂಡರು. ನಾಳೆ ನಡೆಯುವ ಅಂತಿಮ ಪಂದ್ಯದಲ್ಲಿ ಚೀನಾದ ಯಾಂಗ್ ಜಿಯಾನ್ಯುವಾನ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಗುರುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತೀಯನೇ ಆಗಿದ್ದ ನಿತೇಶ್‌ ಕುಮಾರ್‌ ವಿರುದ್ಧ ಸೋಲು ಕಂಡಿದ್ದರು.

ಮಿಶ್ರ 10 ಮೀ. ಏರ್‌ ರೈಫ‌ಲ್‌ (ಅರ್ಹತಾ ಸುತ್ತು): ಶ್ರೀಹರ್ಷ ದೇವರೆಡ್ಡಿ, (ಸಮಯ: ಸಂಜೆ 5.00)

ರೋವಿಂಗ್‌

ಮಿಶ್ರ ಡಬಲ್ಸ್‌ ಸ್ಕಲ್ಸ್‌ (ಹೀಟ್‌): ಅನಿತಾ-ನಾರಾಯಣ ಕೊಂಗನಪಲ್ಲೆ, (ಸಮಯ: ಮಧ್ಯಾಹ್ನ 3.00)

ಟ್ರ್ಯಾಕ್‌ ಸೈಕ್ಲಿಂಗ್‌

ಪುರುಷರ ಅರ್ಹತಾ ಸ್ಪರ್ಧೆ: ಅರ್ಷದ್‌ ಶೈಕ್‌, (ಸಮಯ: ಸಂಜೆ 4.24)