Sunday, 15th December 2024

Samit Dravid: ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾದ ದ್ರಾವಿಡ್‌ ಪುತ್ರ ಸುಮೀತ್‌

Samit Dravid

ಬೆಂಗಳೂರು: ಪ್ರಸಕ್ತ ಸಾಲಿನ ಮಹಾರಾಜ ಕ್ರಿಕೆಟ್‌ ಟೂರ್ನಿಯಲ್ಲಿ ಅವಕಾಶ ಪಡೆದಿದ್ದ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸುಮೀತ್‌ ದ್ರಾವಿಡ್‌(Samit Dravid) ಇದೀಗ  ಭಾರತ ಅಂಡರ್ 19 ತಂಡದಲ್ಲಿ(Under-19 squad) ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧದ ಏಕದಿನ ಮತ್ತು ಟೆಸ್ಟ್‌ ಸರಣಿಯ ತಂಡದಲ್ಲಿಅವಕಾಶ ಪಡೆದಿದ್ದಾರೆ. ಸಮಿತ್ ಸೇರಿ ಒಟ್ಟು 4 ಮಂದಿ ಕರ್ನಾಟಕದ ಯುವ ಆಟಗಾರರು ಸ್ಥಾನ ಪಡೆದಿದ್ದಾರೆ. ಇವರೆಂದರೆ, ಕಾರ್ತಿಕೇಯ ಕೆಪಿ, ಸಮರ್ಥ್ ಎನ್ ಹಾಗೂ ಹಾರ್ದಿಕ್ ರಾಜ್ . . ಏಕದಿನ ತಂಡವನ್ನು ಉತ್ತರ ಪ್ರದೇಶದ ಆಟಗಾರ ಮೊಹಮ್ಮದ್ ಅಮಾನ್ ಮುನ್ನಡೆಸಿದರೆ, ಟೆಸ್ಟ್ ತಂಡವನ್ನು ಮಧ್ಯ ಪ್ರದೇಶದ ಸೋಹಮ್ ಪಟವರ್ಧನ್ ಸಾರಥ್ಯವಹಿಸಲಿದ್ದಾರೆ.

ಈ ವರ್ಷದ ಆರಂಭದಲ್ಲಿ, 18 ವರ್ಷದ ಸುಮೀತ್‌ ದ್ರಾವಿಡ್, 19 ವರ್ಷದ ಕೂಚ್ ಬೆಹಾರ್ ಟ್ರೋಫಿಯಲ್ಲಿ ಕರ್ನಾಟಕ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಂಟು ಪಂದ್ಯಗಳಲ್ಲಿ 362 ರನ್ ಗಳಿಸಿದ್ದರು.

ಭಾರತ ಅಂಡರ್ 19 ಏಕದಿನ ತಂಡ

ರುದ್ರ ಪಟೇಲ್ (ಗುಜರಾತ್), ಸಾಹಿಲ್ ಪರಾಖ್ (ಮಹಾರಾಷ್ಟ್ರ), ಕಾರ್ತಿಕೇಯ ಕೆಪಿ (ಕರ್ನಾಟಕ), ಮೊಹಮ್ಮದ್ ಅಮಾನ್- ನಾಯಕ (ಉತ್ತರ ಪ್ರದೇಶ), ಕಿರಣ್ ಚೋರ್ಮಲೆ (ಮಹಾರಾಷ್ಟ್ರ)
ಅಭಿಗ್ಯಾನ್ ಕುಂದು- ವಿಕೆಟ್ ಕೀಪರ್ (ಮುಂಬೈ), ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ), ಸಮಿತ್ ದ್ರಾವಿಡ್ (ಕರ್ನಾಟಕ), ಯುಧಾಜಿತ್ ಗುಹಾ (ಪಶ್ಚಿಮ ಬಂಗಾಳ)
ಸಮರ್ಥ ಎನ್ (ಕರ್ನಾಟಕ), ನಿಖಿಲ್ ಕುಮಾರ್ (ಚಂಡೀಗಢ), ಚೇತನ್ ಶರ್ಮಾ (ರಾಜಸ್ಥಾನ್), ಹಾರ್ದಿಕ್ ರಾಜ್ (ಕರ್ನಾಟಕ), ರೋಹಿತ್ ರಾಜಾವತ್ (ಮಧ್ಯ ಪ್ರದೇಶ)
ಮೊಹಮ್ಮದ್ ಇನಾನ್ (ಕೇರಳ).

ಟೆಸ್ಟ್‌ ತಂಡ

ವೈಭವ್ ಸೂರ್ಯವಂಶಿ (ಬಿಹಾರ), ನಿತ್ಯ ಪಾಂಡ್ಯ (ಬಿಹಾರ), ವಿಹಾನ್ ಮಲ್ಹೋತ್ರಾ (ಪಂಜಾಬ್), ಸೋಹಮ್ ಪಟವರ್ಧನ್- ನಾಯಕ (ಮಧ್ಯ ಪ್ರದೇಶ), ಕಾರ್ತಿಕೇಯ ಕೆಪಿ (ಕರ್ನಾಟಕ)
ಸಮಿತ್ ದ್ರಾವಿಡ್ (ಕರ್ನಾಟಕ), ಅಭಿಗ್ಯಾನ್ ಕುಂದು- ವಿಕೆಟ್ ಕೋಪರ್ (ಮುಂಬೈ), ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ), ಚೇತನ್ ಶರ್ಮಾ (ರಾಜಸ್ಥಾನ್),
ಸಮರ್ಥ್ ಎನ್ (ಕರ್ನಾಟಕ), ಆದಿತ್ಯ ರಾವತ್ (ಉತ್ತರಾಖಂಡ್), ನಿಖಿಲ್ ಕುಮಾರ್ (ಚಂಡೀಗಢ್), ಅನ್ಮೋಲ್ಜೀತ್ ಸಿಂಗ್ (ಪಂಜಾಬ್), ಆದಿತ್ಯ ಸಿಂಗ್ (ಉತ್ತರ ಪ್ರದೇಶ), ಮೊಹಮ್ಮದ್ ಇನಾನ್ (ಕೇರಳ).

ವೇಳಾಪಟ್ಟಿ

ಸೆಪ್ಟೆಂಬರ್ 21, ಮೊದಲ ಏಕದಿನ, ಸ್ಥಳ: ಪುದುಚೇರಿ, ಸಮಯ ಬೆಳಗ್ಗೆ 9:30

ಸೆಪ್ಟೆಂಬರ್ 23, ಎರಡನೇ ಏಕದಿನ, ಸ್ಥಳ: ಪುದುಚೇರಿ, ಬೆಳಗ್ಗೆ 9:30

ಸೆಪ್ಟೆಂಬರ್ 26, ಮೂರನೇ ಏಕದಿನ, ಸ್ಥಳ: ಪುದುಚೇರಿ, ಬೆಳಗ್ಗೆ 9:30

ಸೆಪ್ಟೆಂಬರ್ 30, ಅಕ್ಟೋಬರ್ 3 ಮೊದಲ ಟೆಸ್ಟ್ (4 ದಿನ) ಚೆನ್ನೈ, ಬೆಳಗ್ಗೆ 9:30

ಅಕ್ಟೋಬರ್ 3 – ಅಕ್ಟೋಬರ್ 10 ಎರಡನೇ ಟೆಸ್ಟ್ (4 ದಿನ) ಚೆನ್ನೈ, ಬೆಳಗ್ಗೆ 9:30