Monday, 16th December 2024

MLA Pradeep Eshwar: ವಿಶೇಷ ಚೇತನರಿಗೆ ಅವಕಾಶಗಳನ್ನು ನೀಡಿ ಮುಖ್ಯವಾಹಿನಿಗೆ ತರೋಣ : ಪ್ರದೀಪ್ ಈಶ್ವರ್

chickballapur

ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ

ಚಿಕ್ಕಬಳ್ಳಾಪುರ : ಸರ್ಕಾರದಲ್ಲಿ ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಕಷ್ಟು ಯೋಜನೆಗಳಿವೆ. ಇವುಗಳನ್ನು ಅರ್ಹರಿಗೆ ದೊರೆಯುವಂತೆ ಮಾಡುವ ಮೂಲಕ ನಮ್ಮಂತೆ ಉತ್ತಮ ಜೀವನ ನಡೆಸಲು ನೆರವಾಗೋಣ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ವಿಕಲಚೇತನ ಫಲಾನುಭವಿಗಳಿಗೆವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ  ಅವರು ಮಾತನಾಡಿದರು.

ವಿಕಲಚೇತನರು ಸೇರಿದಂತೆ ಸಮಾಜದ ದುರ್ಬಲರಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ವಿಕಲಚೇತನರು ದೈಹಿಕವಾಗಿ ಕುಗ್ಗಿದರು ಮಾನಸಿಕವಾಗಿ ಕುಗ್ಗದೇ ಸಬಲರಾಗಬೇಕು. ವಿಕಲಚೇತನ ವ್ಯಕ್ತಿಗಳಿಗೆ  ದ್ವಿ-ಚಕ್ರವಾಹನ (ಎರಡು ಹೆಚ್ಚುವರಿ ಚಕ್ರಗಳು ಒಳಗೊಂಡAತೆ) ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಶೇ ೭೫% ಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿಬೇಕು ಹಾಗೂ ಎರಡು ಕಾಲು ಗಳಲ್ಲಿ ಸ್ವಾಧೀನ ಕಳೆದುಕೊಂಡಿರುವ ಎರಡು ಕೈಗಳು ಸ್ವಾಧೀನದಲ್ಲಿರುವ ಹಾಗೂ ಇರತೆ ಎಲ್ಲಾ ರೀತಿಯಲ್ಲಿ ಸದೃಡವಾಗಿರುವ ವಿಕಲಚೇತನರಾಗಿರಬೇಕು ಎಂದರು.

ಅರ್ಹ ವಿಕಲಚೇತನ ವ್ಯಕ್ತಿಗಳು ಭಾರತದ ಪ್ರಜೆಯಾಗಿದ್ದು, ಕರ್ನಾಟಕದಲ್ಲಿ ಕನಿಷ್ಠ ೧೦ ವರ್ಷಗಳು ವಾಸವಾಗಿರಬೇಕು. ೨೦ ರಿಂದ ೬೦ ರ ವಯೋಮಾನದ ತೀವ್ರತರನಾದ ದೈಹಿಕ ವಿಕಲಚೇತನರಿಗೆ ಈ ಅವಕಾಶ ಕಲ್ಪಿಸಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ. ೨ ಲಕ್ಷಗಳಿಗಿಂತ ಕಡಿಮೆ ಇರಬೇಕು. ದ್ವಿ-ಚಕ್ರ ವಾಹನ (ಎರಡು ಹೆಚ್ಚುವರಿ ಚಕ್ರಗಳು ಒಳಗೊಂಡAತೆ) ಸೌಲಭ್ಯ ಪಡೆದ ಫಲಾನುಭವಿಯು ಅವರ ಜೀವತಾವಧಿಯಲ್ಲಿ ಒಂದು ಬಾರಿಗೆ ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ. ವಿಕಲಚೇತನರು ದ್ವಿ-ಚಕ್ರ ವಾಹನ ಸವಾರರು ಸಂಚಾರಿ ಕಾನೂನು ಬಾಹಿರ ಚಾಲನೆ ಮಾಡದೇ, ಜಾಗೃತೆಯಿಂದ   ವಾಹನ ಚಲಾಯಿಸಬೇಕು. ಶಾಸಕರು ಸಂಚಾರಿ ನಿಯಮದ ಹಲವು ಸಲಹೆಗಳನ್ನು ನೀಡಿದರು.

ಈ ವೇಳೆ ೯ ವಿಕಲಚೇತನ ವ್ಯಕ್ತಿಗಳಿಗೆ ಎರಡು ಹೆಚ್ಚುವರಿ ಚಕ್ರಗಳು ಒಳಗೊಂಡ0ತಹ ದ್ವಿ-ಚಕ್ರವಾಹನವನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗ ವಿಕಲರ ಕಲ್ಯಾಣಾಧಿಕಾರಿ ಎನ್. ಎಂ ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಕಾಧಿಕಾರಿ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ರಾಜಕೀಯ ಪ್ರತಿನಿಧಿಗಳು ಹಾಜರಿದ್ದರು.