Friday, 20th September 2024

Gold Rate: ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಬೆಲೆ ಇಳಿಮುಖ

Gold Rate

ಬೆಂಗಳೂರು: ಚಿನ್ನ ಗ್ರಾಹಕರಿಗೆ ಗುಡ್‌ನ್ಯೂಸ್‌ ಇಲ್ಲಿದೆ. ಇಂದು (ಆಗಸ್ಟ್‌ 31) ಚಿನ್ನದ ದರ ಇಳಿಕೆಯಾಗಿದೆ (Gold Rate). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 10 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 11 ರೂ. ಕಡಿಮೆಯಾಗಿದೆ. ಇಂದು 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,695 ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 7,304 ರೂ. ಇದೆ.

22 ಕ್ಯಾರಟ್‌ ಚಿನ್ನದ ದರಗಳ ವಿವರ

22 ಕ್ಯಾರಟ್‌ನ 8 ಗ್ರಾಂ ಚಿನ್ನ 53,560 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 66,950 ರೂ. ಮತ್ತು 100 ಗ್ರಾಂಗೆ 6,69,500 ರೂ. ಪಾವತಿಸಬೇಕಾಗುತ್ತದೆ.

24 ಕ್ಯಾರಟ್‌ ಚಿನ್ನದ ದರಗಳ ವಿವರ

24 ಕ್ಯಾರಟ್‌ನ 8 ಗ್ರಾಂ ಚಿನ್ನ 58,432 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 73,040 ರೂ. ಮತ್ತು 100 ಗ್ರಾಂಗೆ 7,30,400 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ

 ನಗರ  22 ಕ್ಯಾರಟ್‌ (1 ಗ್ರಾಂ)  24 ಕ್ಯಾರಟ್‌ (1 ಗ್ರಾಂ)
ಬೆಂಗಳೂರು  6,695 ರೂ.  7,304 ರೂ.
ದೆಹಲಿ  6,710 ರೂ.  7,319 ರೂ.
ಮುಂಬೈ  6,695 ರೂ.  7,304 ರೂ.
ಚೆನ್ನೈ  6,695 ರೂ.  7,304 ರೂ.
ಹೈದರಾಬಾದ್  6,695 ರೂ.  7,304 ರೂ.

ಚಿನ್ನಾಭರಣ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶ

ಶುದ್ಧತೆ ಪರಿಶೀಲಿಸಿ: ಚಿನ್ನಾಭರಣ ಖರೀದಿಸುವ ಮುನ್ನ ಅದರ ಶುದ್ಧತೆಯನ್ನು ಪರಿಶೀಲಿಸುವುದು ಅಗತ್ಯ. ಚಿನ್ನದ ಮೇಲೆ ಶುದ್ಧತೆಯನ್ನು ಸೂಚಿಸುವ ಬಿಐಎಸ್‌ (BIS) ಹಾಲ್‌ಮಾರ್ಕ್‌ ಇದೆ ಎನ್ನುವುದನ್ನು ಖಚಿತಪಡಿಸಿ. ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂಬುದನ್ನು ಆ ಮೂಲಕ ಪ್ರಮಾಣೀಕರಿಸಬಹುದು.

ಬೆಲೆ: ಚಿನ್ನದ ಬೆಲೆ ಪ್ರತಿ ದಿನ ಬದಲಾಗುತ್ತಿರುತ್ತದೆ. ಖರೀದಿಸುವ ಮುನ್ನ ಬೆಲೆ ಎಷ್ಟಿದೆ ಎನ್ನುವುದನ್ನು ಗಮನಿಸಿ. ಇದಕ್ಕಾಗಿ ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್  ಅನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ಹೋಲಿಕೆ ಮಾಡಿ: ಮತ್ತೊಂದು ಮುಖ್ಯ ವಿಚಾರ ಎಂದರೆ ಬೆಲೆಗಳ ಹೋಲಿಕೆ.  ಬೇರೆ ಬೇರೆ ಜ್ಯುವೆಲ್ಲರಿಗಳಲ್ಲಿ ವ್ಯತ್ಯಸ್ತ ಬೆಲೆಗಳಿರುತ್ತವೆ. ನೀವು ಚಿನ್ನ ಖರೀದಿಸುವ ಮುನ್ನ ಬೆಲೆಗಳನ್ನು ಹೋಲಿಸಿ ನೋಡಿ. ಇದರಿಂದ ನಿಮಗೆ ಸಾಕಷ್ಟು ಹಣ ಉಳಿತಾಯು ಮಾಡಬಹುದಾಗಿದೆ.

ಮೇಕಿಂಗ್‌ ಚಾರ್ಜಸ್‌: ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ (Making Charges) ಮತ್ತು ವೇಸ್ಟೇಜ್ ಚಾರ್ಜ್ (Wastage Charges) ಎಂದಿರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲ ಆಭರಣಗಳಿಗೆ ಮೇಕಿಂಗ್, ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರ ವರೆಗೆ ಇದೆ.

ವಿನ್ಯಾಸ: ಮೊದಲೇ ಹೇಳಿದಂತೆ ಆಭರಣಗಳ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಸೂಕ್ಷ್ಮ ಕೆತ್ತನೆಯ, ಕೈಯಿಂದ ತಯಾರಿಸುವ ಆಭರಣ ಸ್ವಲ್ಪ ದುಬಾರಿಯಾಗಿತ್ತವೆ. ಆದ್ದರಿಂದ ಈ ಬಗ್ಗೆಯೂ ಗಮನ ಹರಿಸಿ.