Thursday, 12th December 2024

ಬಕ್ರೀದ್, ಕ್ರಿಸ್’ಮಸ್’ಗೆ ಇಲ್ಲದ ಜಾತ್ಯತೀತತೆ ಆಯುಧ ಪೂಜೆಯಂದೇ ಯಾಕೆ ಸೌಮ್ಯರೆಡ್ಡಿಗಾರು ?

ಅವಲೋಕನ

ಮೋಹನ್ ವಿಶ್ವ

ಕರ್ನಾಟಕದಲ್ಲಿ ನವರಾತ್ರಿಯೆಂದರೆ ನೆನಪಾಗುವುದು ಮೈಸೂರು ದಸರಾ, ಮೈಸೂರು ಸಂಸ್ಥಾನದ ಮಹಾರಾಜರುಗಳು ಶತ ಶತಮಾನಗಳಿಂದಲೂ ಒಂಬತ್ತು ದಿವಸ ಉತ್ಸವವನ್ನು ಆಚರಿಸಿಕೊಂಡು ಬಂದಿದ್ಧಾರೆ.

ಕನ್ನಡ ನಾಡಿನ ಜನರು ಮಹಾರಾಜರು ಆಚ ಮೈಸೂರು ದಸರಾವನ್ನು ನಾಡಹಬ್ಬವೆಂದೇ ಆಚರಿಸಿಕೊಂಡು ಬಂದಿರುವಂಥ ನಮಗೆ ತಾಯಿ ಚಾಮುಂಡೇಶ್ವರಿಯೇ ಪ್ರೇರಣೆ, ರಾಕ್ಷಸನಾಗಿದ್ದ ಮಹಿಷಾಸುರನನ್ನ ಕೊಂದು ನಾಡಿಗೆ ಒಳಿತನ್ನು ಮಾಡಿದಂತಹ ದಿನವನ್ನು ನವರಾತ್ರಿಯಂದು ನೆನೆದು ಆಕೆಯನ್ನು ಪೂಜಿಸುತ್ತೇವೆ. ಇಂತಹ ನವರಾತ್ರಿಯ ಸಂದರ್ಭದಲ್ಲಿ ಬಹುಮುಖ್ಯವಾಗಿ ಬರುವಂತಹ ಹಬ್ಬವೆಂದರೆ ಆಯುಧ ಪೂಜೆ, ಮಹಾಭಾರತದಲ್ಲಿ ಪಾಂಡವರು ವನವಾಸಕ್ಕೆ ಹೋಗುವ ಮುನ್ನ ಅರ್ಜುನನು ತನ್ನ ಅಸಗಳನ್ನು ಶಮಿವೃಕ್ಷದಲ್ಲಿ ಅಡಗಿಸಿಟ್ಟಿರುತ್ತಾನೆ. ತನ್ನ ಹದಿಮೂರು ವರ್ಷಗಳ ವನವಾಸವನ್ನು ಅನುಭವಿಸಿ ವಾಪಾಸ್ ಬಂದನಂತರ, ತಾನು ಅಡಗಿಸಿಟ್ಟಿದ್ದ ಅಸಗಳನ್ನು ತೆಗೆದು ಪೂಜೆಯನ್ನು ಮಾಡುತ್ತಾನೆ. ಪೂಜೆಯನ್ನು ಮಾಡಿದ ನಂತರ ಕುರು ಕ್ಷೇತ್ರ ಯುದ್ಧ ಪ್ರಾರಂಭವಾಗುತ್ತದೆ, ಪಾಂಡವರ ವಿಜಯವಾಗುತ್ತದೆ.

ಪಾಂಡವರ ವಿಜಯವೆಂದರೆ ಸತ್ಯಕ್ಕೆ ಸಂದ ಜಯವೆಂದು ಎಲ್ಲರಿಗೂ ತಿಳಿದಿದೆ. ಸ್ವತಃ ಶ್ರೀ ಕೃಷ್ಣ ಪರಮಾತ್ಮನ ನೇತೃತ್ವದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ, ಶ್ರೀ ಕೃಷ್ಣನು ಅರ್ಜುನನಿಗೆ ಮಾಡಿದ ಗೀತೋಪದೇಶವನ್ನು ನಾವೆಲ್ಲರೂ ಚಿಕ್ಕಂದರಿಂದಲೂ ಕೇಳಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡು ಬೆಳೆದಿದ್ದೇವೆ. ಭಾರತದ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳ ಸಂಕೇತವಾದ ಮಹಾಭಾರತ. ಇಂದಿಗೂ ಮಹಾಭಾರತದ ಹಲವಾರು ಆಚರಣೆಗಳನ್ನು ಆಚರಿಸಿಕೊಂಡು ಬಂದಿದ್ದೇವೆ, ಇಂತಹ ಆಚರಣೆಗಳಲ್ಲಿ ನವರಾತ್ರಿಯ ಆಯುಧ ಪೂಜೆಯೂ ಒಂದು ಶಿಸ್ತಿನ ಆಚರಣೆಯಾಗಿದೆ.

ದೇಶದಾದ್ಯಂತ ಅಸಂಖ್ಯಾತ ಹಿಂದೂಗಳು ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಹಿಂದೂ ಧಾರ್ಮಿಕ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ನವರಾತ್ರಿಯೆಂದರೆ ಕೇವಲ ಹಿಂದೂಗಳಿಗಷ್ಟೇ ಸೀಮಿತವಾದ ಹಬ್ಬ, ಅದೇ ರೀತಿ ಆಯುಧ ಪೂಜೆಯೆಂದರೆ ಕೇವಲ ಹಿಂದುಗಳಿಗೆ ಸೀಮಿತವಾದಂತಹ ಹಬ್ಬವಷ್ಟೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರು ನವರಾತ್ರಿಯನ್ನು ಆಚರಿಸುವುದಿಲ್ಲ, ಕುರಾನ್ ಹಾಗೂ ಬೈಬಲ್‌ನ‌ಲ್ಲಿ ಎಲ್ಲಿಯೂ ಸಹ ನವರಾತ್ರಿಯ ಉಲ್ಲೇಖವಿಲ್ಲ. ಜಯನಗರದ ಕಾಂಗ್ರೆಸ್ಸಿನ ಶಾಸಕಿ ಸೌಮ್ಯ ರೆಡ್ಡಿಯ ವರು ಮೊನ್ನೆ ಆಯುಧ ಪೂಜೆಯ ದಿವಸ ತಮ್ಮ ಕಚೇರಿಯ ಪೂಜೆಯಂದು ಒಂದು ಫೋಟೋಕ್ಕೆ ಪೂಜೆ ಮಾಡುತ್ತಿರುವ ಚಿತ್ರ ವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು.

ಒಂದೇ ಫೋಟೋದಲ್ಲಿ ಗಣೇಶ, ಏಸು ಕ್ರಿಸ್ತ ಹಾಗು ಅಹುವಿನ ಚಿತ್ರಗಳಿದ್ದವು. ಜೊತೆಗೆ ಆ ಫೋಟೋವಿನ ಮುಂದೆ ಭಾರತದ
ಸಂವಿಧಾನದ ಪುಸ್ತಕವನ್ನಿಟ್ಟು ಪೂಜೆ ಮಾಡಿದ್ದರು. ಭಾರತದ ಸಂವಿದಾನವನ್ನು ಪೂಜೆ ಮಾಡುವುದು ಸರಿ ಆದರೆ ಹಿಂದೂಗಳ ಹಬ್ಬದಂದು ಏಸು ಕ್ರಿಸ್ತ ಹಾಗೂ ಅಹುವಿನ ಚಿತ್ರಕ್ಕೆ ಪೂಜೆ ಮಾಡಿದ್ದು ಹಿಂದೂ ಧರ್ಮಕ್ಕೆ ಮಾಡಿದ ಬಹುದೊಡ್ಡ ಅವಮಾನ. ಟ್ವಿಟ್ಟರ್ ನಲ್ಲಿ ಎಲ್ಲರೂ ಸರಿಯಾಗಿ ಜಾಡಿಸಿದ ಮೇಲೂ ಸಹ ತಾವು ಮಾಡಿದ ತಪ್ಪಿಗೆ ಕ್ಷಮೆಯನ್ನು ಕೇಳಬೇಕಿತ್ತು. ಆದರೆ ತಾವು ಮಾಡಿದನ್ನು ಸರಿಯೆಂದು ಮತ್ತೊಮ್ಮೆ ಹೇಳಿಕೊಳ್ಳುವ ಮೂಲಕ ಮೊಂಡುತನ ಪ್ರದರ್ಶಿಸಿದ್ದರು. ಕಾಂಗ್ರೆಸ್ಸಿನ ಕೆಲ ನಾಯಕರ ಹಣೆಬರಹವೇ ಇಷ್ಟು, ಜಾತ್ಯತೀತತೆಯೆಂಬ ಹೆಸರಿನಲ್ಲಿ ಯಾವಾಗಲೂ ಸಹ ಹಿಂದೂ ಧರ್ಮಕ್ಕೆ ಅಪಚ್ಯುತಿ ತರುವ ಕೆಲಸವನ್ನು ಮಾಡುತ್ತಿರುತ್ತಾರೆ. ದೆಹಲಿಯಲ್ಲಿ ಕುಳಿತಿರುವ ಅಂಟೋನಿಯೋ ಮೈನೋವನ್ನು ಖುಷಿ ಪಡಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ.

ಇತ್ತ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಮುನೇಶ್ವರ ಬೆಟ್ಟವನ್ನು ಏಸು ಬೆಟ್ಟವನ್ನಾಗಿ ಮಾಡಲು ತಯಾರಾಗಿದ್ದರು, ತಮ್ಮ ಅಧ್ಯಕ್ಷರನ್ನು ಹಿಂಬಾಲಿಸಿ ಸೌಮ್ಯ ರೆಡ್ಡಿ ಆಯುಧ ಪೂಜೆಯಂದು ಈ ರೀತಿಯ ಕೆಲಸ ಮಾಡಿzರೆ. ಸೌಮ್ಯ ರೆಡ್ಡಿಯವರು 2018 ರಲ್ಲಿ ಜಯನಗರದಿಂದ ಆರಿಸಿ ಬಂದಾಗ, ಅವರಿಗೆ ಹೆಚ್ಚು ಮತಗಳು ಬಿದ್ದದ್ದು ಗುರಪ್ಪನ ಪಾಳ್ಯ ವಾರ್ಡಿನಲ್ಲಿ, ಬರೀ ಮುಸಲ್ಮಾನರೇ ವಾಸವಿರುವ ಈ ವಾರ್ಡಿನಲ್ಲಿ ಶೇ.84ರಷ್ಟು ಮತದಾನವಾಗಿತ್ತು, ಇತರೆ ಐದು ವಾರ್ಡುಗಳ ಜನರು ಮನೆಯಿಂದ ಹೊರಬಂದು ಮುಸಲ್ಮಾನರಷ್ಟು ಮತ ಚಲಾವಣೆ ಮಾಡಿದ್ದರೆ ಇಂದು ಜಯನಗರದ ಹಿಂದೂಗಳಿಗೆ ಈ ರೀತಿಯ ಅವಮಾನಕರ ಸನ್ನಿವೇಶ ಬಂದೊದಗುತ್ತಿರಲಿಲ್ಲ.

ತನಗೆ ವೋಟು ಹಾಕಿದ ಮತದಾರರ ಋಣ ತೀರಿಸಲೆಂದೇ ಸೌಮ್ಯ ರೆಡ್ಡಿ ಈ ರೀತಿಯ ಕೆಲಸ ಮಾಡಿದ ಹಾಗಿದೆ. ತಾನು ಮಾಡಿದ ಕೆಲಸವನ್ನು ಸಮರ್ಥಿಸಿಕೊಳ್ಳಲು ಸಂವಿಧಾನವನ್ನು ಪೂಜೆ ಮಾಡಿರುವ ಸೌಮ್ಯರೆಡ್ಡಿಯವರಿಗೆ, ನಮ್ಮದೇ ಸಂವಿಧಾನ ಇತರೆ ಧರ್ಮದವರಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವೆಂದು ಹೇಳಿರುವುದು ತಿಳಿದಿಲ್ಲವೇ ? ಸಂವಿಧಾನಕ್ಕೆ ಪೂಜೆ
ಮಾಡಿ ತಾವು ಮಾಡಿದ ಕೆಲಸವನ್ನು ಜಾತ್ಯತೀತ ವೆಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದು ಎಷ್ಟು ಸರಿ ಮೇಡಂ ? ಮಾತು ಮಾತಿಗೂ ಸಂವಿಧಾನವನ್ನು ಅಡ್ಡ ತರುವ ನಿಮ್ಮ ಪಕ್ಷದವರಿಗೆ ತಿಳಿದಿರಲಿ ಸಂವಿಧಾನದಲ್ಲಿ ಜಾತ್ಯತೀತವೆಂಬ ಪದವನ್ನು ಸೇರಿಸಿದ್ದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ನಿಮ್ಮದೇ ಪಕ್ಷದ ಇಂದಿರಾ ಗಾಂಧಿ.

ಜಾತ್ಯತೀತವೆಂದರೆ ಹಿಂದೂ ಹಬ್ಬಗಳಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ದೇವರನ್ನು ಪೂಜಿಸುವುದೇ? ನಿಮಗೆ ಧೈರ್ಯವಿದ್ದರೆ
ಬಕ್ರೀದ್ ಹಬ್ಬದಂದು ಇದೇ ಚಿತ್ರಕ್ಕೆ ಪೂಜೆ ಮಾಡಿ ಮುಸಲ್ಮಾನ್ ಬಂಧುಗಳಿಗೆ ಶುಭಾಶಯವನ್ನು ಕೋರಿ ನೋಡೋಣ? ಕ್ರಿಸ್ ‌ಮಸ್ ಹಬ್ಬದಂದು ಗಣೇಶನ ಪೂಜೆಯನ್ನು ಮಾಡಿ ನೋಡೋಣ? ರಸ್ತೆಗಳಲ್ಲಿ ನಮಾಜ್ ಮಾಡಲು ಟ್ರಾಫಿಕ್ ಜಾಮ್ ಮಾಡುವ
ಮುಸಲ್ಮಾನರಿಗೆ ರಸ್ತೆಗಳನ್ನು ಜಾಮ್ ಮಾಡಬೇಡಿ ಎಂದು ಹೇಳಿ ನೋಡೋಣ? ನಿಮ್ಮ ಕ್ಷೇತ್ರದಲ್ಲಿಯೇ ಮೆಕ್ಕಾವನ್ನೂ ಮೀರಿಸು ವಂಥ ದೊಡ್ಡದೊಂದು ಮಸೀದಿಯನ್ನು ಕಟ್ಟಿದ್ದಾರ, ಪ್ರತಿ ಶುಕ್ರವಾರ ದಂದು ಬನ್ನೇರುಘಟ್ಟ ರಸ್ತೆಯಲ್ಲಾಗುವ ಟ್ರಾಫಿಕ್ ಜಾಮ್ ಬಗ್ಗೆ ನಿಮಗೆ ತಿಳಿದಿಲ್ಲವೇ? ಆಧುನಿಕಯುಗದಲ್ಲಿಯೂ ಬೆಳಗೆದ್ದು ಆಜಾನ್‌ ಕೂಗುವ ಬದಲು ಮುಸಲ್ಮಾನರ ಬಳಿಯಿರುವ ಮೊಬೈಲ್ ಗಳಲ್ಲಿ ಅಲಾರಾಂ ಇಟ್ಟುಕೊಂಡು ಬೆಳಗ್ಗೆ ಐದು ಗಂಟೆಗೆ ಏಳಲು ಹೇಳಿ, ಅವರು ಮಾಡುವ ಆಜಾನ್ ನಿಂದ ಬೆಳಗಿನ ಜಾವ ಎಷ್ಟು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುತ್ತದೆಯಲ್ಲವೇ? ಅದೇ ಸಮಯದಲ್ಲಿ ನಿಮ್ಮದೇ ಕ್ಷೇತ್ರದ ಹಿಂದೂ ವಿನ ಮನೆಯಲ್ಲಿ ಅದೆಷ್ಟು ಪೂಜೆಗಳು ನಡೆಯುತ್ತಿರುತ್ತದಲ್ಲವೇ? ಆಗ ನಿಮಗೆ ಜಾತ್ಯತೀತತೆಯ ನೆನಪಾಗುವುದಿಲ್ಲ.

ಒಬ್ಬ ಹಿಂದೂವಿನ ಧಾರ್ಮಿಕ ಭಾವನೆಗಳಿಗೆ ಅದೆಷ್ಟು ಧಕ್ಕೆ ಬಂದರೂ ಪರವಾಗಿಲ್ಲ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದ ವರಿಗೆ ಧಕ್ಕೆ ಬಂದರೆ ಮಾತ್ರ ನಿಮಗೆ ಸಹಿಸಲು ಸಾಧ್ಯವಾಗುವುದಿಲ್ಲವಲ್ಲ. ಹಾಗಾದರೆ ಇಂದಿರಾಗಾಂಧಿಯ ಜಾತ್ಯತೀತವೆಂದರೆ ಕೇವಲ ಮುಸಲ್ಮಾನ್ ಹಾಗೂ ಕ್ರಿಶ್ಚಿಯನ್ ಧರ್ಮದವರನ್ನು ಸಂತುಷ್ಟಗೊಳಿಸುವುದೇ? ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರಿಗೆ ನೀಡಿರುವ ಸ್ವಾತಂತ್ರ್ಯವನ್ನು ತಮ್ಮಂಥ ರಾಜಕಾರಣಿಗಳು ಸ್ವಾರ್ಥಕ್ಕೆ ಬಳಸಿ ಕೊಳ್ಳುತ್ತಿರುವುದು ಮಾತ್ರ ಅಸಯ್ಯಕರ ಸಂಗತಿ.

ಮೂರು ಧರ್ಮದ ದೇವರನ್ನಿಟ್ಟು ಪೂಜೆ ಮಾಡುವ ನಿಮಗೆ, ಕಳೆದ ವರ್ಷ ರಾಮ ಮಂದಿರದ ತೀರ್ಪು ಬಂದಾಗ ಜಾತ್ಯತೀತತೆಯ ನೆನಪಾಗಲಿಲ್ಲವೇ? ಅಸಂಖ್ಯಾತ ಹಿಂದೂಗಳ ಆರಾಧ್ಯ ದೈವ ಶ್ರೀ ರಾಮಚಂದ್ರನ ಮಂದಿರದ ಪರವಾಗಿ ತೀರ್ಪು ಬಂದಾಗ, ಬಹಿರಂಗವಾಗಿ ತಾವು ತಮ್ಮ ಕಚೇರಿಯಲ್ಲಿ ಯಾಕೆ ಶ್ರೀರಾಮನ ಪೂಜೆ ಮಾಡಲಿಲ್ಲ? ತಮ್ಮ ಕಚೇರಿಯ ಮೇಲೆ ಯಾಕೆ ಶ್ರೀರಾಮನ ಧ್ವಜವನ್ನು ಹಾರಿಸಲಿಲ್ಲ? ಐನೂರು ವರ್ಷಗಳ ಕಾಲ ತಾಳ್ಮೆಯಿಂದ ಕೋರ್ಟಿನ ತೀರ್ಪಿಗಾಗಿ ಕಾದಿದ್ದ ಹಿಂದೂಗಳ
ಪರವಾಗಿ ಅದೆಷ್ಟು ಮಾತನಾಡಿದ್ದೀರಿ ? ನಿಮ್ಮದೇ ಪಕ್ಷದವರು ಶ್ರೀರಾಮನ ಇರುವಿಕೆಯನ್ನೇ ಪ್ರಶ್ನಿಸಿ ಕೋರ್ಟಿನಲ್ಲಿ ಅರ್ಜಿ ಹಾಕಿದ್ದರು, ಆಗ ನಿಮಗೆ ಜಾತ್ಯತೀತತೆಯ ನೆನಪಾಗಲಿಲ್ಲವೇ? ಆಗ ನಿಮಗೆ ಸಂವಿಧಾನದ ನೆನಪಾಗಲಿಲ್ಲವೇ, ರಾಮ ಮಂದಿರದ
ತೀರ್ಪು ಹಿಂದೂಗಳ ಪರವಾಗಿ ಬಂದಾಗ ಮುಸಲ್ಮಾನರಿಗೆ ನೋವಾಗದಂತೆ ನೋಡಿಕೊಳ್ಳುತ್ತೀರಿ.

ಆದರೆ ಆಯುಧ ಪೂಜೆಯಂದು ಹಿಂದೂ ಧರ್ಮದವರಿಗೆ ನೋವಾಗುವಂತೆ ಮಾಡುತ್ತೀರಿ. ಹಾಗಾದರೆ ಸಂವಿಧಾನವನ್ನು ಪೂಜೆ ಮಾಡಿರುವ ನಿಮಗೊಂದು ಪ್ರಶ್ನೆ, ಪ್ರಧಾನಿ ನರೇಂದ್ರ ಮೋದಿಯವರನ್ನೇ ಟ್ಯಾಗ್ ಮಾಡಿ ಹಲವು ಜನರು ತಮ್ಮ ಸಮಸ್ಯೆಗಳನ್ನು
ಹೇಳಿಕೊಳ್ಳುತ್ತಾರೆ, ಹಲವಾರು ಸಮಸ್ಯೆಗಳನ್ನು ಸ್ವತಃ ಪ್ರಧಾನಿಯವರ ಕಾರ್ಯಾಲಯವೇ ಸ್ವೀಕರಿಸಿದಂಥ ಉದಾಹರಣೆಗಳಿವೆ. ಆದರೆ ಒಂದು ಕ್ಷೇತ್ರದ ಶಾಸಕಿಯಾದ ತಾವು ಟ್ವಿಟ್ಟರ್‌ನಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಇಲ್ಲಿ ಟ್ಯಾಗ್ ಮಾಡಬೇಡಿ ಎಂದು
ಬಹಿರಂಗವಾಗಿ ಹಾಕಿಕೊಂಡಿದ್ದೀರ, ಸಂವಿಧಾನದ ಮೇಲೆ ಪ್ರಮಾಣ ಮಾಡಿ ಪ್ರಮಾಣವಚನ ಸ್ವೀಕಾರ ಮಾಡಿರುವ ನಿಮಗೆ, ಸಂವಿಧಾನದ ಮೇಲೆ ಗೌರವವಿಲ್ಲವೇ? ಟ್ವಿಟ್ಟರ್‌ನಲ್ಲಿ ಕೇವಲ ಎರಡು ದೂರವಾಣಿ ಸಂಖ್ಯೆಯನ್ನು ನೀಡಿದರೆ ಸಾಕೆ, ತಮ್ಮ
ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಜನರು ಟ್ವಿಟ್ಟರ್‌ನಲ್ಲಿ ಹೇಳಿಕೊಳ್ಳಬಾರದೇ? ಆಂಧ್ರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ
ರಾಜಶೇಖರ ರೆಡ್ಡಿಯವರ ಮೇಲೆ ಇದೆ ರೀತಿಯ ಹಲವು ಆರೋಪಗಳಿವೆ.

ತಮ್ಮ ಆಡಳಿತಾವಧಿಯಲ್ಲಿ ತಿರುಪತಿಯಲ್ಲಿ ಮತಾಂತರವನ್ನು ಪ್ರಚಾರ ಮಾಡುವ ಸಲುವಾಗಿ ಸಾವಿರಾರು ಕರಪತ್ರಗಳನ್ನು ಭಕ್ತಾದಿಗಳಿಗೆ ನೀಡಲಾಗುತ್ತಿದೆಯೆಂಬ ವರದಿಗಳು ಕೇಳಿ ಬಂದಿದ್ದವು. ಈಗ ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ಮೇಲೆ, ಮತ್ತದೇ ಮತಾಂತರದ ಮಾತುಗಳು ಆಂಧ್ರದಲ್ಲಿ ಕೇಳಿ ಬರುತ್ತಿವೆ. ಸೌಮ್ಯ ರೆಡ್ಡಿಯವರು ಆಯುಧ ಪೂಜೆಯ ದಿವಸ ಮಾಡಿದ ಕೆಲಸವನ್ನು ಗಮನಿಸಿದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಮತಾಂತರವನ್ನು ಬಹಿರಂಗವಾಗಿ ಬೆಂಬಲಿಸಿದಂತಿದೆ.

ಒಬ್ಬ ಹಿಂದೂ ಧರ್ಮದ ಶಾಸಕಿಯಾಗಿ ಬಹಿರಂಗವಾಗಿ ಗಣೇಶನ ಚಿತ್ರವಿರುವ ಫೋಟೋನಲ್ಲಿ ಯೇಸು ಕ್ರಿಸ್ತನ ಫೋಟೋ ಹಾಕಿ ಪೂಜೆ ಮಾಡಿದರೆ, ಕರ್ನಾಟಕದಲ್ಲಿ ನಡೆಯುತ್ತಿರುವ ಮತಾಂತರಕ್ಕೆ ಬೆಂಬಲ ಸೂಚಿಸಿದಂತೆಯೇ ತಾನೇ? ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಹಿಂದೂ ಧರ್ಮದ ಸಾಧು ಸಂತರು ಹಗಲು ರಾತ್ರಿಯೆನ್ನದೇ ಹೋರಾಡುತ್ತಿದ್ದರೆ, ಇವರು ಮಾಡಿದ ಪ್ರಮಾದದಿಂದ ಮತಾಂತರಿಗಳಿಗೆ ಎರಡು ರೆಕ್ಕೆ ಹೆಚ್ಚಾಗಿ ಬಂದಂತಾಗಿರುವುದು ಮಾತ್ರ ನಿಶ್ಚಿತ. ಕಾಂಗ್ರೆಸ್ಸಿನವರ ಡಬಲ್ ಸ್ಟ್ಯಾಂಡರ್ಡ್ ಎಷ್ಟಿದೆಯೆಂದರೆ, ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನನನ್ನು ಆಂಧ್ರದಿಂದ ಬಂದಂಥ ನಾಯ್ಡು ಎಂದು ಹೇಳಿ ಜಾತಿ ರಾಜಕೀಯ ಮಾಡುತ್ತಾರೆ, ಹಾಗಾದರೆ ಜಯನಗರದಲ್ಲಿರುವ ಶಾಸಕಿ ಸೌಮ್ಯರೆಡ್ಡಿ ಯಾರು? ರೆಡ್ಡಿಯೆಂದರೆ ಯಾರು ಸ್ವಾಮಿ? ಡಿ.ಕೆ.ಶಿವಕುಮಾರ್ ಬಳಿ ಉತ್ತರವಿರುವುದಿಲ್ಲ.

ರಾಜರಾಜೇಶ್ವರ ಉಪಚುನಾವಣೆಯಲ್ಲಿ ನೆನಪಾಗುವ ಒಕ್ಕಲಿಗರ ಮೇಲಿನ ಪ್ರೀತಿ, ಕನಕಪುರದಲ್ಲಿ ಯೇಸು ಬೆಟ್ಟವನ್ನು
ನಿರ್ಮಾಣ ಮಾಡುವಾಗ ಇರಲಿಲ್ಲ. ಅತ್ತ ದೇವೇಗೌಡರು ಮುಂದಿನ ಜನ್ಮದಲ್ಲಿ ತಾವು ಮುಸಲ್ಮಾನನಾಗಿ ಹುಟ್ಟಬೇಕೆಂದು ಹೇಳಿದ್ದಾರೆ. ಅವರು ಒಕ್ಕಲಿಗರ ನಾಯಕರಂತೆ!! ಒಬ್ಬ ಒಕ್ಕಲಿಗ ನಾಯಕನಿಗೆ ಕ್ರಿಶ್ಚಿಯನ್ನರ ಮೇಲೆ ಪ್ರೀತಿ, ಮತ್ತೊಬ್ಬರಿಗೆ ಮುಸ್ಲಿಮರ ಮೇಲೆ ಪ್ರೀತಿ, ಇವರ ಶಿಷ್ಯಂದಿರಿಗೆ ಇಬ್ಬರ ಮೇಲೂ ಪ್ರೀತಿ. ಸೌಮ್ಯರೆಡ್ಡಿಯವರಿಗಂತೂ ಹಿಂದೂಗಳ ಧಾರ್ಮಿಕ
ಭಾವನೆಗಳಿಗೆ ದಕ್ಕೆ ತರಲು ಇಬ್ಬರ ಮೇಲೂ ಎಲ್ಲಿಲ್ಲದ ಪ್ರೀತಿ.

ಸೌಮ್ಯರೆಡ್ಡಿಯವರು ಮಾಡಿದಂತಹ ಈ ಕೆಲಸ ಇಲ್ಲಿಗೆ ನಿಲ್ಲುವುದಿಲ್ಲ, ಕಾಂಗ್ರೆಸ್ಸಿನಲ್ಲಿ ಇದೊಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ಅಂಟೋನಿಯೋ ಮೈನೋರನ್ನು ತೃಪ್ತಿ ಪಡಿಸಲು ಹಲವರು ಇದೇ ರೀತಿ ಮಾಡುತ್ತಿರುತ್ತಾರೆ. ಹಾಳೂರಿನಲ್ಲಿ ಉಳಿದವನೇ
ಗೌಡನೆಂಬಂತೆ ಎಲ್ಲರಿಗೂ ಈಗ ಆಕೆಯ ಮೆಚ್ಚುಗೆ ಬೇಕು. ಕಾಂಗ್ರೆಸ್ಸಿಗರಿಂದ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ತಡೆಯ ಲಾಗಲಿಲ್ಲ, ಕಾಶ್ಮೀರದ ಸಮಸ್ಯೆಯನ್ನು ಹಾಗೆಯೇ ಮುಂದುವರಿಸಲು ಸಾಧ್ಯವಾಗಲಿಲ್ಲ, ತ್ರಿವಳಿ ತಲಾಕ್ ನಿಷೇಧ ತಿದ್ದುಪಡಿ ಯನ್ನು ತಡೆಯಲಾಗಲಿಲ್ಲ, ಎಷ್ಟೇ ಸುಳ್ಳು ಹೇಳಿ ಗಲಾಟೆ ಮಾಡಿಸಿದರೂ ಸಹ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಡೆಯಲು ಸಾಧ್ಯವಾಗಲಿಲ್ಲ.

ಇವೆಲ್ಲದರ ಪರಿಣಾಮ ಮುಸಲ್ಮಾನರಿಗೆ ಕಾಂಗ್ರೆಸ್ಸಿನ ಮೇಲಿದ್ದ ನಂಬಿಕೆ ಹೊರಟು ಹೋಗಿದೆ. ಕಾಂಗ್ರೆಸ್ಸಿನವರು ಇನ್ನು ಮುಂದೆ ತಮಗೆ ಸರಿ ಹೋಗುವುದಿಲ್ಲವೆಂಬ ಅಂಶ ಇವರಿಗೆ ಅರ್ಥವಾಗಿ ಹೋಗಿದೆ. ಅವರಿಗೆ ಈಗ ಬೇರೊಂದು ಪಕ್ಷವು ಬೇಕಾಗಿದೆ, ಆದರೆ ಯಾರ ಪರವಾಗಿ ಹೋಗುವುದೆಂಬ ಗೊಂದಲದಲ್ಲಿ ಅವರಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ಬೆಳ್ಳಿ ರೇಖೆಯಾಗಿ ಕಂಡಿರುವ ಪಕ್ಷವೆಂದರೆ ಎಸ್.ಡಿ.ಪಿ.ಐ, ಇದಕ್ಕೆ ಇತ್ತೀಚಿಗೆ ಕೆ.ಜಿ.ಹಳ್ಳಿಯಲ್ಲಿ ನಡೆದ ದಾಂಧಲೆಯ ಘಟನೆಯೇ ಸಾಕ್ಷಿ.

ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ವಿರಾರು ಜನರು ಮುಗಿಬಿದ್ದು ಬೆಂಕಿ ಹಚ್ಚಿ ದ್ದರು. ಮುಸಲ್ಮಾನರು ಆಗಲೇ ತಮ್ಮ ಪ್ರೀತಿಯ ಪಕ್ಷದ ಶಾಸಕನ ಮೇಲಿನ ಆಕ್ರೋಶವನ್ನು ಹೊರಹಾಕಿದ್ದರು. ಎಸ್.ಡಿ.ಪಿ.ಐ ಇದರ ಲಾಭವನ್ನು ಮುಂಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಪಡೆದು ಕೊಳ್ಳುವುದು ನಿಶ್ಚಿತ, ಎಡೆಯೂ ಕಾಂಗ್ರೆಸ್ಸಿನ
ವೋಟುಗಳನ್ನು ಒಡೆಯುತ್ತದೆ. ಇದರಿಂದ ಮುಸಲ್ಮಾನರ ಮತಗಳನ್ನು ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿನ ಹಲವು ನಾಯಕರುಗಳಿಗೆ ಸೋಲುಂಟಾಗುತ್ತದೆ. ನಾನು ಆಗಲೇ ಹೇಳಿದ ಹಾಗೆ ಸೌಮ್ಯರೆಡ್ಡಿಯವರು ಪ್ರತಿನಿಧಿಸುವ ಜಯನಗರದಲ್ಲಿ ಕಳೆದ ಬಾರಿ ಹೆಚ್ಚಿನ
ಮುಸ್ಲಿಂ ಮತಗಳಿಕೆಯಿಂದ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ ಅದೇ ಗುರಪ್ಪನಪಾಳ್ಯದಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿ ಏನಾದರೂ ನಿಂತರೆ, ಸೌಮ್ಯರೆಡ್ಡಿಯವರಿಗೆ ಮುಸ್ಲಿಂ ಮತಗಳಿಕೆಯಲ್ಲಿ ಇಳಿಕೆಯಾಗುವುದಂತೂ ನಿಶ್ಚಿತ, ಹಾಗಾಗಿ ಮುಸಲ್ಮಾನರನ್ನು ಓಲೈ ಸುವ ಈ ರೀತಿಯ ಪ್ರಯತ್ನಗಳು ಆಗಾಗ್ಗೆ ನಡೆಯುತ್ತಿರುತ್ತವೆ.

ಸಂವಿಧಾನದ ಬಗ್ಗೆ ಇಷ್ಟೆ ಮಾತನಾಡುವ ಸೌಮ್ಯ ರೆಡ್ಡಿಯವರು ತಿಳಿದುಕೊಳ್ಳಬೇಕಿರುವ ವಿಷಯವೆಂದರೆ ಹಲವು ಮುಸಲ್ಮಾನ ರಿಗೆ ಸಂವಿದಾನಕ್ಕಿಂತಲೂ ತಮ್ಮ ಧರ್ಮವೇ ಮೊದಲಂತೆ, ಅವರಿಗೆ ಸ್ವಲ್ಪವಾದರೂ ಸಂವಿಧಾನದ ಮೇಲೆ ಗೌರವವಿದ್ದರೆ
ಇಂತಹ ಮುಸಲ್ಮಾನರ ಬಾಯಿಯಲ್ಲಿ ಸಂವಿಧಾನವೇ ಮೊದಲೆಂದು ಹೇಳಿಸಲಿ ನೋಡೋಣ? ಕೇವಲ ರಾಜಕೀಯ ಮತಬ್ಯಾಂಕಿ ಗಾಗಿ ಸಂವಿಧಾನವನ್ನು ಮಧ್ಯೆ ತಂದು ಅವಮಾನ ಮಾಡುವುದು ಬೇಡ.

ಇತ್ತೀಚಿಗೆ ತನಿಷ್ಕ್ ಕಂಪನಿಯ ಜಾಹೀರಾತಿನಲ್ಲಿ ಲವ್ ಜಿಹಾದ್ ಅನ್ನು ಅಷ್ಟು ಬಹಿರಂಗವಾಗಿ ಪ್ರಚಾರ ಮಾಡಿದರೂ ತುಟಿಕ್ ಪಿಟಕ್ ಎನ್ನದ ನಿಮಗೆ ಜಾತ್ಯತೀತತೆಯ ಬಗ್ಗೆ ಮಾತನಾಡುವ ಯಾವ ಹಕ್ಕಿದೆ? ಮತ್ತದೇ ಸಂವಿಧಾನದಲ್ಲಿ ಇತರೆ ಧರ್ಮಕ್ಕೆ
ಧಕ್ಕೆ ತರುವಂಥ ಕೆಲಸವನ್ನು ಮಾಡಬಾರದೆಂದು ಬರೆದಿರುವುದು ತಮಗೆ ನೆನಪಾಗಲಿಲ್ಲವೇ? ಲವ್ ಜಿಹಾದ್‌ಗೆ ಸಿಲುಕಿ ಪ್ರಾಣ ಬಿಟ್ಟಿರುವ ಅದೆಷ್ಟು ಹಿಂದೂ ಹೆಣ್ಣು ಮಕ್ಕಳ ಪರವಾಗಿ ತಾವು ನಿಂತಿದ್ದೀರಿ? ಟ್ವಿಟ್ಟರ್‌ನಲ್ಲಿ ಹತ್ರಾಸ್ ಘಟನೆಯ ಬಗ್ಗೆ ಪುಂಕಾನು ಪುಂಕವಾಗಿ ಮಾತನಾಡುವ ನಿಮಗೆ ಲವ್ ಜಿಹಾದ್‌ನಿಂದ ಮನನೊಂದು ಇತ್ತೀಚಿಗೆ ಲಕ್ನೋನಲ್ಲಿ ಬೆಂಕಿ ಹಚ್ಚಿಕೊಂಡಂಥ ಹೆಣ್ಣು ಮಗಳು ನೆನಪಾಗಲಿಲ್ಲವೇ? ಆಕೆಯ ಬಗ್ಗೆ ಎಲ್ಲೂ ತಾವು ಧ್ವನಿ ಎತ್ತಲಿಲ್ಲವಲ್ಲ.

ಹತ್ರಾಸ್ ಘಟನೆಯ ಬಗ್ಗೆ ಮಾತನಾಡುವ ತಮಗೆ ತಮ್ಮದೇ ಪಕ್ಷದ ದಲಿತ ಶಾಸಕನ ಮನೆಯ ಮೇಲೆ ಸಾವಿರಾರು ಜನರು ಮುಗಿ ಬಿದ್ದು ಬೆಂಕಿ ಹಚ್ಚಿದಾಗ, ಪೊಲೀಸ್ ಠಾಣೆಯಲ್ಲಿ ಒಂದು ದೂರು ನೀಡಲಿಲ್ಲವಲ್ಲವೇಕೆ? ಮಾತು ಮಾತಿಗೂ ದಲಿತರನ್ನುದ್ಧಾರ  ಮಾಡಲೆಂದೇ ಇರುವ ಪಕ್ಷವೆಂದು ಬಾಯಿ ಬಡೆದು ಕೊಳ್ಳುವ ನಿಮಗೆ ದಲಿತನ ಮನೆಯ ಮೇಲಿನ ದಾಳಿಯಾದಾಗ ಹತ್ರಾಸ್ ಘಟನೆಯು ನೆನಪಾಗಲಿಲ್ಲವಲ್ಲ.

ಯಾರನ್ನೋ ಮೆಚ್ಚಿಸಲು ಹೋಗಿ ತಾವು ಮಾಡಿದ ಆಯುಧಪೂಜೆಯ ಜಾತ್ಯತೀತತೆಯನ್ನು ನಾವೆಲ್ಲರೂ ಕ್ರಿಸ್ ಮಸ್ ಹಾಗೂ ಬಕ್ರೀದ್ ಹಬ್ಬದಲ್ಲಿ ನೋಡಲು ಕಾಯುತ್ತಿದ್ದೇವೆ, ತಡ ಮಾಡಬೇಡಿ.