Saturday, 23rd November 2024

US Open 2024: ಪ್ರೀ ಕ್ವಾರ್ಟರ್‌ ಪ್ರವೇಶಿಸಿದ ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್

US Open 2024

ನ್ಯೂಯಾರ್ಕ್‌: ಯುಎಸ್ ಓಪನ್‌ನ(US Open 2024)ಲ್ಲಿ ಪೋಲೆಂಡ್‌ನ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್( Iga Swiatek) ಅವರ ಗೆಲುವಿನ ಓಟ ಮುಂದುವರಿದಿದೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ 25 ನೇ ಶ್ರೇಯಾಂಕದ ರಷ್ಯಾದ ಅನಾಸ್ತೆಸಿಯಾ ಪಾವ್ಲ್ಯುಚೆಂಕೋವಾ(Anastasia Pavlyuchenkova) ವಿರುದ್ಧ 6-4, 6-2 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಗೆ ಫೈನಲ್‌ ಪ್ರವೇಶಿಸಿದ್ದಾರೆ. 2022 ರಲ್ಲಿ ಸ್ವಿಯಾಟೆಕ್ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು. 16ನೇ ಸುತ್ತಿನ ಪಂದ್ಯದಲ್ಲಿ ಸ್ವಿಯಾಟೆಕ್‌ ಅವರು 16 ನೇ ಶ್ರೇಯಾಂಕದ ಲಿಯುಡ್ಮಿಲಾ ಸ್ಯಾಮ್ಸೊನೊವಾ ಸವಾಲು ಎದುರಿಸಲಿದ್ದಾರೆ.

ಜೂನ್‌ನಲ್ಲಿ ಮುಕ್ತಾಯ ಕಂಡಿದ್ದ ಫ್ರೆಂಚ್‌ ಓಪನ್‌ ಕೂಟದಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಸ್ವಿಯಾಟೆಕ್ ಈ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಪದಕ ಗೆದ್ದ ಸಾಧನೆ ಮಾಡಿದ್ದರು. ಒಟ್ಟಾರೆಯಾಗಿ ಸ್ವಿಯಾಟೆಕ್​ಗೆ 5 ಗ್ರ್ಯಾನ್‌ ಸ್ಲಾಮ್‌ ಕಿರೀಟ ಗೆದ್ದಿದ್ದಾರೆ.  ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೊಕೊ ಗಾಫ್ 4ನೇ ಸುತ್ತು ಪ್ರವೇಶಿಸಿದರು. 2ನೇ ಶ್ರೇಯಾಂಕಿತ ಅರೈನಾ ಸಬಲೆಂಕಾ ಕೂಡ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.

https://x.com/usopen/status/1830028367619318174

ಶನಿವಾರ ನಡೆದಿದ್ದ ಪುರುಷರ ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ ಮತ್ತು ಫ್ರಾನ್ಸ್‌ನ ಅಲ್ಫಾನೊ ಒಲಿವೆಟ್ಟಿ ಜೋಡಿ ಗೆಲುವು ಸಾಧಿಸಿ 3ನೇ ಸುತ್ತಿಗೆ ಏರಿದ್ದಾರೆ. ಇಂಡೋ-ಫ್ರೆಂಚ್‌ ಜೋಡಿ ಸೇರಿಕೊಂಡು ಅಮೆರಿಕದ ಆಸ್ಟಿನ್‌ ಕ್ರಾಜಿಸೆಕ್‌-ನೆದರ್ಲೆಂಡ್ಸ್‌ನ ಜೀನ್‌ ಜೂಲಿಯನ್‌ ರೋಜರ್‌ ಅವರನ್ನು ತೀವ್ರ ಹೋರಾಟದ ಬಳಿಕ 4-6, 6-3, 7-5ರಿಂದ ಮಣಿಸಿದ್ದರು. ಆದರೆ, ಎನ್‌. ಶ್ರೀರಾಮ್‌ ಬಾಲಾಜಿ-ಗಿಡೊ ಆಯಂಡ್ರಿಯೋಝಿ (ಆರ್ಜೆಂಟೀನಾ) ಜೋಡಿ ನ್ಯೂಜಿಲ್ಯಾಂಡ್‌ನ‌ ಮೈಕಲ್‌ ವೀನಸ್‌-ಗ್ರೇಟ್‌ ಬ್ರಿಟನ್‌ನ ನೀಲ್‌ ಸ್ಕಪ್‌ಸ್ಕಿ ವಿರುದ್ಧ 6 (4)-7-, 4-6 ಅಂತರದಿಂದ ಪರಾಭವಗೊಂಡಿದ್ದರು.

ಆಘಾತಕಾರಿ ಸೋಲು ಕಂಡಿದ್ದ ಜೋಕೊ

ಶುಕ್ರವಾರ ನಡೆದಿದ್ದ ಪುರುಷರ ಸಿಂಗಲ್ಸ್‌ನಲ್ಲಿ  ಹಾಲಿ ಹಾಗೂ 4 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ 3ನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಈ ಸೋಲಿನೊಂದಿಗೆ ಜೋಕೊ ಅವರ  25ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ಕನಸು  ಭಗ್ನಗೊಂಡಿತ್ತು. ಕಳೆದ ವರ್ಷ ಯುಎಸ್ ಓಪನ್‌ ಗೆದ್ದಿದ್ದ ಜೋಕೊ, ಈ ವರ್ಷ ಒಂದೂ ಗ್ರಾನ್‌ಸ್ಲಾಂ ಪ್ರಶಸ್ತಿ ಗೆದ್ದಿಲ್ಲ. 2017ರ ಬಳಿಕ ಇದೇ ಮೊದಲ ಬಾರಿ ವರ್ಷದ 4 ಗ್ರಾನ್ ಸ್ಲಾಂಗಳ ಪೈಕಿ ಒಂದನ್ನೂ ಗೆಲ್ಲಲು ಜೋಕೊ ವಿಫಲರಾದ ಸಂಕಟಕ್ಕೆ ಸಿಲುಕಿದರು.