| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೆಣ್ಣು ಮಕ್ಕಳನ್ನು ಯುವರಾಣಿಯರಂತೆ ಬಿಂಬಿಸುವ ಬೇಬಿ ಕ್ರೌನ್‌ಗಳು (Baby Crowns) ಇದೀಗ ಟ್ರೆಂಡಿಯಾಗಿವೆ. ಧರಿಸಿದಾಗ ನೋಡಲು ಏಂಜೆಲ್, ಪರಿ ಹಾಗೂ ಕ್ವೀನ್‌ನಂತೆ ಬಿಂಬಿಸುವ ಈ ಡಿಸೈನರ್ ಬೇಬಿ ಕ್ರೌನ್‌ಗಳು ಇದೀಗ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಹೆಣ್ಣು ಮಕ್ಕಳ ಹೇರ್‌ಸ್ಟೈಲ್ ಸಿಂಗಾರಕ್ಕೆ ಸಾಥ್ ನೀಡುತ್ತಿವೆ. ಅವುಗಳಲ್ಲಿ ಕೆಲವು ಮಕ್ಕಳ ಬರ್ತ್ ಡೇ ಹಾಗೂ ಇತರೇ ಸಮಾರಂಭಗಳಲ್ಲಿ ಧರಿಸುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಹಾಗಾದಲ್ಲಿ, ಯಾವ್ಯಾವ ಶೈಲಿಯವು ಹೆಚ್ಚು ಪ್ರಚಲಿತದಲ್ಲಿವೆ ಎಂಬುದನ್ನು ಕಿಡ್ಸ್ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.
ಕ್ವೀನ್ ಲುಕ್‌ಗಾಗಿ ಬೇಬಿ ಕ್ರೌನ್
ಪುಟ್ಟ ಹೆಣ್ಣುಮಕ್ಕಳು ತಾವು ಕೂಡ ಕ್ವೀನ್ ಎಂದು ಇವನ್ನು ಧರಿಸಿ ಮೆರೆದಾಡಬಹುದು. ಅಂತಹ ಫೀಲಿಂಗ್ ನೀಡುವ, ಹೇರ್‌ಬ್ಯಾಂಡ್‌ನಂತೆ ಸುಲಭವಾಗಿ ಧರಿಸಬಹುದಾದ ಬೇಬಿ ಕ್ರೌನ್‌ಗಳು ಇದೀಗ ಸಖತ್ ಜನಪ್ರಿಯಗೊಂಡಿವೆ. ಬರ್ತ್ ಡೇ, ಮದುವೆ ಸಮಾರಂಭ ಸೇರಿದಂತೆ ನಾನಾ ಬಗೆಯ ಕಾರ್ಯಕ್ರಮಗಳಲ್ಲಿ ಪುಟ್ಟ ಪುಟ್ಟ ಹೆಣ್ಣುಮಕ್ಕಳನ್ನು ಸವಾರಿ ಮಾಡತೊಡಗಿವೆ. ನೋಡಲು ಕ್ಯೂಟ್ ಆಗಿ ಬಿಂಬಿಸುತ್ತಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ಚಾಂದನಿ. ಅವರ ಪ್ರಕಾರ, ಈ ಬೇಬಿ ಕ್ರೌನ್ ಧರಿಸುವ ಕಾನ್ಸೆಪ್ಟ್ ವೆಸ್ಟರ್ನ್ ಕಲ್ಚರ್‌ದ್ದಾದರೂ ಇದೀಗ ನಮ್ಮಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಬೇಬಿ ಕ್ರೌನ್‌ಗಳು
ಹರಳುಗಳುಳ್ಳ ಬೇಬಿ ಕ್ರೌನ್, ಮುತ್ತಿನ ಬೇಬಿ ಕ್ರೌನ್, ಪ್ರಿಶಿಯಸ್ ಜೆಮ್ಸ್ ರಿಪ್ಲಿಕಾದಂತೆ ಕಾಣಿಸುವ ಸ್ಟೋನ್ಸ್ ಕ್ರೌನ್, ಜರ್ಕೋನ್ ಕ್ರೌನ್, ಟೈನಿ, ವೈಡ್, ಫಂಕಿ, ಜಂಕ್ ಡಿಸೈನ್‌ನವು ಸೇರಿದಂತೆ ನಾನಾ ಡಿಸೈನ್‌ಗಳಲ್ಲಿ ಫ್ಯಾನ್ಸಿ ಶಾಪ್‌ಗಳಲ್ಲಿ ದೊರೆಯುತ್ತಿವೆ. ಆಯಾ ಮಕ್ಕಳ ತಲೆಕೂದಲಿನ ವಿನ್ಯಾಸಕ್ಕೆ ತಕ್ಕಂತೆ ಇವನ್ನು ತೊಡಿಸಬಹುದು. ಅಲ್ಲದೇ, ಧರಿಸುವ ಡ್ರೆಸ್‌ಕೋಡ್‌ಗೂ ಮ್ಯಾಚ್ ಮಾಡಬಹುದು ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.
ಬೇಬಿ ಕ್ರೌನ್ ಆಯ್ಕೆ ಹೇಗೆ ?
- ಪುಟ್ಟ ಹೆಣ್ಣು ಮಗುವಾದಲ್ಲಿ ಆದಷ್ಟೂ ಮೆಟಲ್ ಬೇಬಿ ಕ್ರೌನ್ ಆವಾಯ್ಡ್ ಮಾಡಿ. ಸಾಫ್ಟ್ ಆಗಿರುವ ಸಿಲಿಕಾನ್ ಕ್ರೌನ್ ಆಯ್ಕೆ ಮಾಡಿ
- ಕೂದಲಿನ ಉದ್ದಕ್ಕೆ ತಕ್ಕಂತೆ ಬೇಬಿ ಕ್ರೌನ್ ಸೈಝ್ ಸೆಲೆಕ್ಟ್ ಮಾಡಿ
- ಸ್ಟೋನ್ ಡಿಸೈನ್ ಆದಲ್ಲಿ ಎಲ್ಲವಕ್ಕೂ ಧರಿಸಬಹುದು
- ಫಂಕಿ ಡಿಸೈನ್‌ನವನ್ನು ಪಿಕ್ನಿಕ್, ಪ್ಲೇ ಟೈಮ್‌ನಲ್ಲಿ ತೊಡಿಸಬಹುದು
- ಆದಷ್ಟೂ ಲೈಟ್‌ವೈಟ್ ಬೇಬಿ ಕ್ರೌನ್ ಚೂಸ್ ಮಾಡಿ
- ಚುಚ್ಚುವಂತಹ ತುದಿಯಿರುವಂತಹ ಬೇಬಿ ಕ್ರೌನ್ ಖರೀದಿ ಬೇಡ
- ಫಿನಿಶಿಂಗ್ ಇರುವಂತಹ ಕ್ರೌನ್ ಆಯ್ಕೆ ಮಾಡಿ
- ಮಕ್ಕಳ ತಲೆ ನೆತ್ತಿಯ ಮೇಲೆ ಕೂರುವಂತಹ ಕ್ರೌನ್ ಕೊಳ್ಳಿ. ಬೇಕಿದ್ದಲ್ಲಿ, ಟ್ರಯಲ್ ನೋಡಿ ಖರೀದಿಸಿ
( ಲೇಖಕಿ ಫ್ಯಾಷನ್ ಪತ್ರಕರ್ತೆ)