ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿಯರಾದ ಸಂಜನಾ ಗಲ್ರಾಣಿ ಹಾಗೂ ರಾಗಿಣಿ ದ್ವಿವೇದಿ ನವೆಂಬರ್ 2ರವರೆಗೂ ಜೈಲುವಾಸ ಅನುಭವಿಸಬೇಕಿದೆ.
ಈ ಪ್ರಕರಣದಲ್ಲಿ ಜೈಲು ಪಾಲಾಗಿರುವ ರಾಗಿಣಿ, ಸಂಜನಾ ಹಾಗೂ ಇನ್ನಿತರೆ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಗಳನ್ನು ಎನ್ಡಿಪಿಎಸ್ ವಿಚಾರಣಾ ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ. ಈ ಹಿನ್ನೆಲೆ ಆರೋಪಿಗಳೆಲ್ಲರೂ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ, ತೀರ್ಪು ಕಾಯ್ದಿರಿ ಸಿದೆ.
ನ.2ರವರೆಗೂ ಹೈಕೋರ್ಟ್ಗೆ ದಸರಾ ರಜೆ ಇದೆ. ಇದರ ನಡುವೆ ಅಕ್ಟೋಬರ್ 29ರಂದು ರಜೆ ಕಾಲದ ಪೀಠಗಳು ಕಾರ್ಯ ನಿರ್ವ ಹಿಸಲಿವೆ.