Thursday, 19th September 2024

Stone Baby: ಮಹಿಳೆಯ ಹೊಟ್ಟೆಯಲ್ಲಿತ್ತು ಮಗುವಿನ ಅಸ್ಥಿ ಪಂಜರ!

Stone Baby

ವಿಶಾಖಪಟ್ಟಣಂ: ಸುಮಾರು ಮೂರು ವರ್ಷಗಳಿಂದ ಹೊಟ್ಟೆ ನೋವಿನಿಂದ (Stomach pain) ಬಳಲುತ್ತಿದ್ದ ಮಹಿಳೆಯ ಹೊಟ್ಟೆಯಲ್ಲಿದ್ದ 24 ವಾರಗಳ ಮಗುವಿನ ಅಸ್ಥಿಯನ್ನು (Stone Baby) ವೈದ್ಯರು ಹೊರ ತೆಗೆದಿದ್ದಾರೆ. ಆಂಧ್ರಪ್ರದೇಶದ (andrapradesh) ವಿಶಾಖಪಟ್ಟಣಂನ ಮಹಿಳೆ (Visakhapatnam) ಮೂರು ವರ್ಷಗಳ ಹಿಂದೆ ಗರ್ಭಪಾತಕ್ಕೆ (abortion) ಔಷಧ ತೆಗೆದುಕೊಂಡಿದ್ದರು. ಬಳಿಕ ಹೊಟ್ಟೆ ನೋವಿಗೆ ತುತ್ತಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಅತ್ಯಂತ ಅಪರೂಪದ ಈ ಪ್ರಕರಣದಲ್ಲಿ ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆ (ಕೆಜಿಎಚ್) ವೈದ್ಯರು ಭ್ರೂಣದ ಅಸ್ಥಿಪಂಜರವನ್ನು 27 ವರ್ಷದ ಮಹಿಳೆಯ ಹೊಟ್ಟೆಯಿಂದ ಹೊರತೆಗೆದಿದ್ದಾರೆ. ಇದನ್ನು “ಕಲ್ಲಿನ ಮಗುʼ ಅಥವಾ `ಲಿಥೋಪಿಡಿಯನ್’ ಎಂದು ಕರೆಯಲಾಗುತ್ತದೆ.

ಆಗಸ್ಟ್‌ನಲ್ಲಿ ಅನಕಪಲ್ಲಿ ಜಿಲ್ಲೆಯ ಇಬ್ಬರು ಮಕ್ಕಳ ತಾಯಿ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದರು. ಮೂರು ವರ್ಷಗಳ ಹಿಂದೆ ಆಕೆ ಗರ್ಭಿಣಿಯಾಗಿದ್ದಳು. ಆದರೆ ಗರ್ಭಪಾತದ ಮೂಲಕ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಪ್ರಯತ್ನಿಸಿದ್ದರು. ಬಳಿಕ ನಿರಂತರ ಹೊಟ್ಟೆ ನೋವು ಅನುಭವಿಸುತ್ತಿರುವುದಾಗಿ ವೈದ್ಯರಿಗೆ ತಿಳಿಸಿದ್ದರು.

ಲಿಥೋಪಿಡಿಯನ್ ಎಂದರೇನು?

ಲಿಥೋಸ್ ಎಂದರೆ ಕಲ್ಲು ಮತ್ತು ಪೇಡಿಯನ್ ಎಂದರೆ ಮಗು. ಲಿಥೋಪಿಡಿಯನ್ ಎಂಬುದು ಮೂಲತಃ ಗ್ರೀಕ್ ಪದವಾಗಿದೆ. ಇದು ಅತ್ಯಂತ ಅಪರೂಪದ ಪ್ರಕರಣ. ಇದು ಸಂಭವಿಸುವ ಸಾಧ್ಯತೆ ಶೇ. 1ಕ್ಕಿಂತಲೂ ಕಡಿಮೆ
ಯಾಗಿದೆ. 10ನೇ ಶತಮಾನದಲ್ಲಿ ಮೊದಲ ಬಾರಿಗೆ ಇದನ್ನು ವೈದ್ಯಕೀಯ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ಕೇವಲ 330 ಪ್ರಕರಣಗಳು ದಾಖಲಾಗಿವೆ.

2015ರಲ್ಲಿ ದಕ್ಷಿಣ ಅಮೆರಿಕದ ಎಸ್ಟೆಲಾ ಮೆಲೆಂಡೆಜ್ ಎಂಬ 92 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಗಟ್ಟಿಯಾದ ಭ್ರೂಣವಿರುವುದು ಪತ್ತೆಯಾಗಿತ್ತು. ಆಕೆಯ ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಭ್ರೂಣವು ಆಕೆಯ ಆರೋಗ್ಯಕ್ಕೆ ಯಾವುದೇ ಅಪಾಯವನ್ನು ಉಂಟುಮಾಡಲಿಲ್ಲ.

ಲಿಥೋಪಿಡಿಯನ್ ರೂಪುಗೊಳ್ಳಲು ಭ್ರೂಣವು ಗರ್ಭದಲ್ಲಿ ಕನಿಷ್ಠ ಮೂರು ತಿಂಗಳ ಕಾಲ ಬದುಕಬೇಕು. ಬಳಿಕ ಯಾವುದಾದರೂ ಕಾರಣದಿಂದ ಭ್ರೂಣವು ಸತ್ತರೆ ಅದು ಕ್ರಮೇಣ ಕಾಲಾನಂತರದಲ್ಲಿ ಕ್ಯಾಲ್ಸಿಫೈಡ್ ಆಗುತ್ತದೆ.

Stone Baby

ಎಂಆರ್‌ಐ ಸ್ಕ್ಯಾನ್‌ನಲ್ಲಿ ಪತ್ತೆ

ಆಸ್ಪತ್ರೆಯ  ಪ್ರಸೂತಿ ವಿಭಾಗದ ಪ್ರಾಧ್ಯಾಪಕರಾದ ಡಾ. ವಾಣಿ ಅವರು ಮಹಿಳೆಗೆ ಆರಂಭಿಕ ಅಲ್ಟ್ರಾಸೌಂಡ್ ನಡೆಸಿದರು. ಇದು ಮಹಿಳೆಯ ಹೊಟ್ಟೆಯಲ್ಲಿ ಅಸ್ವಾಭಾವಿಕ ವಸ್ತು ಇರುವುದನ್ನು ಪತ್ತೆ ಹಚ್ಚಿತ್ತು. ಬಳಿಕ ಎಂಆರ್ ಐ ಸ್ಕ್ಯಾನ್ ಮಾಡಿದಾಗ ಅವಳ ಹೊಟ್ಟೆಯಲ್ಲಿ “ಮೂಳೆಗಳ ಗೂಡು” ಹೋಲುವ ಕ್ಯಾಲ್ಸಿಫೈಡ್ ದ್ರವ್ಯರಾಶಿ ಇರುವುದು ಗೊತ್ತಾಗಿದೆ.

ವೈದ್ಯಕೀಯ ತಂಡವು ಆಗಸ್ಟ್ 31 ರಂದು ಮಹಿಳೆಯ ಹೊಟ್ಟೆಯಿಂದ 24 ವಾರಗಳ ಭ್ರೂಣದ ಕ್ಯಾಲ್ಸಿಫೈಡ್ ಅವಶೇಷಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಿತು. ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ. ಲಿಥೋಪಿಡಿಯನ್ ವರ್ಷಗಳವರೆಗೆ ಪತ್ತೆಯಾಗುವುದಿಲ್ಲ. ಕಿಬ್ಬೊಟ್ಟೆಯ ನೋವು ಅಥವಾ ಅಂತಹ ಯಾವುದೇ ಲಕ್ಷಣಗಳಿದ್ದಾಗ ಮಾತ್ರ ಇದನ್ನು ಪತ್ತೆ ಹಚ್ಚಲು ಸಾಧ್ಯ ಎನ್ನುತ್ತಾರೆ ವೈದ್ಯರು.