Sunday, 24th November 2024

Buldozer Justice : ಯೋಗಿ ಆದಿತ್ಯನಾಥ್‌ ಬುಲ್ಡೋಜರ್‌ ನ್ಯಾಯದ ಅಫಿಡವಿಟ್‌ಗೆ ಸುಪ್ರೀಂ ಕೋರ್ಟ್‌ ತೃಪ್ತಿ

Buldozer Justice:

ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರಗಳು ಮಾಡುತ್ತಿರುವ ‘ಬುಲ್ಡೋಜರ್ ಕ್ರಮವನ್ನು’ (Buldozer Justice) ತೀವ್ರವಾಗಿ ಟೀಕಿಸಿದ್ದ , ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಸಮಾಜಾಯಿಷಿಗಳನ್ನು ಶ್ಲಾಘಿಸಿದೆ ಎಂದು ದೈನಿಕ್ ಜಾಗರಣ್ ವರದಿ ಮಂಗಳವಾರ ವರದಿ ಮಾಡಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ವ್ಯಕ್ತಿಗೆ ಸೇರಿದ ಯಾವುದೇ ಆಸ್ತಿಯನ್ನು ನೆಲಸಮಗೊಳಿಸಲಾಗಿಲ್ಲ ಎಂದು ಹೇಳಿಕೊಂಡಿದೆ.

ಕಾನೂನು ಪ್ರಕ್ರಿಯೆಗಳ ಅಡಿಯಲ್ಲಿ ಯಾವುದೇ ಸ್ಥಿರಾಸ್ತಿಯನ್ನು ನೆಲಸಮ ಮಾಡಬಹುದು ಮತ್ತು ನಾವು ಆ ಪ್ರಕ್ರಿಯೆಗೆ ಬದ್ಧರಾಗಿದ್ದೇವೆ ಎಂದು ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಅಫಿಡವಿಟ್‌ ಮೂಲಕ ಹೇಳಿದ್ದಾರೆ. ರಾಜ್ಯ ಸರ್ಕಾರಗಳು ಆರೋಪಿಗಳ ಮನೆಗಳು, ಅಂಗಡಿಗಳು ಮತ್ತು ವಾಣಿಜ್ಯ ಆಸ್ತಿಗಳನ್ನು ನೆಲಸಮಗೊಳಿಸುವ ಪ್ರವೃತ್ತಿ ಹೆಚ್ಚುತ್ತಿರುವ ವಿರುದ್ಧ ಹಲವಾರು ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ ಈ ಬೆಳವಣಿಗೆ ನಡೆದಿದೆ.

 ಸುಪ್ರೀಂ ಕೋರ್ಟ್  ಟೀಕೆ:  ಅಪರಾಧಿಗಳ ಅಕ್ರಮ ನೆಲಗಳನ್ನು ಬುಲ್ಡೋಜರ್‌ ಹರಿಸಿ ನಾಶ ಮಾಡುವ ರಾಜ್ಯ ಸರ್ಕಾರಗಳ ಅಭ್ಯಾಸದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಿತ್ತು. ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಟೀಕೆ ಮಾಡಿತ್ತು. ಆರೋಪಿ ತಪ್ಪಿತಸ್ಥನೆಂದು ಸಾಬೀತಾದರೂ, ಅವರ ಮನೆಯನ್ನು ನೆಲಸಮಗೊಳಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿತ್ತು.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಸೋಮವಾರ ಸ್ಥಿರಾಸ್ತಿಗಳ ಮೇಲೆ ಸರ್ಕಾರಗಳು ಆಯ್ಕೆ ಮಾಡಿದ ಇತ್ತೀಚಿನ ಬುಲ್ಡೋಜರ್ ಅಭ್ಯಾಸಗಳ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಸೂಚಿಸಿತ್ತು. ವಿಷಯದ ಬಗ್ಗೆ ನ್ಯಾಯಪೀಠವು ಸಂಬಂಧಪಟ್ಟ ಇಲಾಖೆಗಳಿಂದ ಸಲಹೆಗಳನ್ನು ಕೋರಿತ್ತು.

ಈ ಸುದ್ದಿಯನ್ನೂ ಓದಿ: Nivin Pauly : ”ಪ್ರೇಮಂ” ಸಿನಿಮಾ ಖ್ಯಾತಿಯ ಮಲಯಾಳಂ ನಟ ನಿವಿನ್‌ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌

ಸಾರ್ವಜನಿಕ ರಸ್ತೆಗಳಿಗೆ ಅಡ್ಡಿಪಡಿಸುವ ಯಾವುದೇ ಅಕ್ರಮ ಕಟ್ಟಡವನ್ನು ರಕ್ಷಿಸುವುದಿಲ್ಲ ಎಂದು ಉನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ. ಆಸ್ತಿಗಳ ನೆಲಸಮವನ್ನು ಕಾನೂನಿನ ಪ್ರಕಾರ ಮಾಡಬೇಕು ಎಂದು ಉನ್ನತ ನ್ಯಾಯಾಲಯ ಹೇಳಿದೆ. ಉನ್ನತ ನ್ಯಾಯಾಲಯವು ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿತು ಮತ್ತು ಈ ವಿಷಯವನ್ನು ಸೆಪ್ಟೆಂಬರ್ 12 ರಂದು ವಿಚಾರಣೆ ಮಾಡುವುದಾಗಿ ಹೇಳಿದೆ.