Friday, 22nd November 2024

Viral Video: ಮೊಸಳೆ – ಕಾಡುಮೃಗದ ಭೀಕರ ಕಾದಾಟ; ಮೈನವಿರೇಳಿಸುವ ವಿಡಿಯೊ

Viral Video

ಬೆಂಗಳೂರು: ಮೊಸಳೆಗಳು ನದಿ, ಹೊಳೆಯಂತಹ ನೀರಿನಲ್ಲಿ ಅಡಗಿದ್ದು ಚಿಕ್ಕ ಚಿಕ್ಕ ಪ್ರಾಣಿಗಳಿಂದ ಹಿಡಿದು ಮನುಷ್ಯರನ್ನೂ ಬೇಟೆಯಾಡುವಂತಹ ಕ್ರೂರ ಪ್ರಾಣಿ. ಬಲವಾದ ದವಡೆಗಳು ಮತ್ತು ಚೂಪಾದ ಹಲ್ಲುಗಳಿಂದ ಮೊಸಳೆಗಳು ತಮ್ಮ ಬೇಟೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಇದರ ಬಾಯಿಗೆ ಬಿದ್ದವರು ತಪ್ಪಿಸಿಕೊಳ್ಳುವುದು ಬಹಳ ಕಷ್ಟ. ಕಾಡಿನ ಅತಿದೊಡ್ಡ ಪ್ರಾಣಿಗಳು ಸಹ ಈ ಭಯಾನಕ ಮೊಸಳೆಗಳಿಗೆ ಹೆದರುತ್ತವೆ. ಹಾಗಾಗಿ ಮೊಸಳೆಗಳು ಇರುವ ನೀರಿನ ಹತ್ತಿರ ಬಂದಾಗ ಬಹಳ ಎಚ್ಚರಿಕೆಯಿಂದ ಇರುತ್ತವೆ. ಇತ್ತೀಚೆಗೆ ಅನಿಮಲ್ ವಿಡಿಯೊದಲ್ಲಿ ಅಂತಹ ಒಂದು ಭಯಾನಕವಾದ ಮೊಸಳೆ ವೈಲ್ಡ್ ಬೀಸ್ಟ್ (ಕಾಡು ಮೃಗ)ಅನ್ನು ಬೇಟೆಯಾಡುವುದನ್ನು ಪೋಸ್ಟ್ ಮಾಡಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪ್ರಾಣಿಗಳ ವೈರಲ್ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಕ್ರೂರ ಮೊಸಳೆಯು ನೀರು ಕುಡಿಯಲು ಬಂದ ಕಾಡುಮೃಗದ ಮೇಲೆ ದಾಳಿ ಮಾಡಿದೆ. ಮೊಸಳೆ ತನ್ನ ದವಡೆಯಿಂದ ಕಾಡು ಮೃಗದ ಬಾಲವನ್ನು ಕಚ್ಚಿ ಗಟ್ಟಿಯಾಗಿ ಹಿಡಿದುಕೊಂಡು ಎಳೆಯುತ್ತಾ ತಿನ್ನಲು ಪ್ರಯತ್ನಿಸುತ್ತಿದೆ. ಆಗ ಕಾಡು ಮೃಗ ನೀರಿನಿಂದ ಹೊರಬರಲು ಹಾಗೂ ತನ್ನ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ಕೊನೆಗೂ ಮೊಸಳೆಯಿಂದ ಬಾಯಿಂದ ತಪ್ಪಿಸಿಕೊಂಡು ಗೆದ್ದಿದೆ. ಮೊಸಳೆಯ ಹಿಡಿತದಿಂದ ತನ್ನ ಬಾಲವನ್ನು ತಪ್ಪಿಸಿಕೊಂಡ ಕಾಡು ಮೃಗ ನೀರಿನಿಂದ ಹೊರಗೆ ಬಂದು ತನ್ನ ಜೀವವನ್ನು ಉಳಿಸಿಕೊಳ್ಳುವ ಮೂಲಕ ತನ್ನ ಶೌರ್ಯ ಮತ್ತು ಶಕ್ತಿಯನ್ನು ಪ್ರದರ್ಶಿಸಿದೆ.

ಈ ವಿಡಿಯೊವನ್ನು ಜುಲೈ 23ರಂದು ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಯಗೊಂಡರೂ ಕೂಡ ಕಾಡುಮೃಗ ಜೀವ ಉಳಿಸಿಕೊಳ್ಳಲು ತೋರಿಸಿದ ಧೈರ್ಯವು ಅನೇಕ ಜನರಿಗೆ ಸ್ಫೂರ್ತಿ ನೀಡಿದೆ. ದೃಢನಿಶ್ಚಯ ಮತ್ತು ಬದುಕುಳಿಯುವ ಇಚ್ಛಾಶಕ್ತಿ ಇದ್ದರೆ , ಸಾವನ್ನು ಸಹ ಗೆದ್ದಬರಬಹುದು ಎಂಬ ಒಂದು ಒಳ್ಳೆಯ ಸಂದೇಶವನ್ನು ಈ ವಿಡಿಯೊ ತೋರಿಸುತ್ತದೆ.

ಭರವಸೆ ಮತ್ತು ಶೌರ್ಯವು ಕೆಲವೊಮ್ಮೆ ಅಪಾಯಕಾರಿ ಸವಾಲುಗಳನ್ನು ಸಹ ಜಯಿಸಲು ಸಹಾಯ ಮಾಡುತ್ತದೆ ಎಂಬುದನ್ನು ಈ ವಿಡಿಯೊ ನೋಡಿದವರು ತಿಳಿಯಬಹುದು.

ವಿಡಿಯೊಗಾಗಿ ಇಲ್ಲಿ ಲಿಂಕ್‌ ಮಾಡಿ

https://www.instagram.com/reel/C9xcw2IoJGT/?utm_source=ig_web_button_share_sheet&igsh=ZDNlZDc0MzIxNw==