Thursday, 19th September 2024

Railway Jobs: ಕೊಂಕಣ ರೈಲ್ವೆಯಲ್ಲಿ ಕರ್ನಾಟಕದವರಿಗೆ 190 ಉದ್ಯೋಗ, ಸರ್ಜಿ ಸಲ್ಲಿಸುವುದು ಹೀಗೆ

konkan Railway Jobs

ಬೆಂಗಳೂರು: ಕೊಂಕಣ ರೈಲ್ವೆ ನೂತನವಾಗಿ ಕರೆದಿರುವ ಉದ್ಯೋಗಾವಕಾಶಗಳಲ್ಲಿ (Konkan Railway Jobs) ಕರ್ನಾಟಕದವರಿಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 16ಕ್ಕೆ ಅರ್ಜಿ ಸಲ್ಲಿಕೆ ಶುರುವಾಗಲಿದೆ. ಒಟ್ಟು 190 ಹುದ್ದೆಗಳನ್ನು ಭರ್ತಿ ಮಾಡಲು ಕೊಂಕಣ ರೈಲ್ವೆ ಮುಂದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಇಂಜಿನಿಯರಿಂಗ್, ಡಿಪ್ಲೋಮಾ, ಐಟಿಐ ಮಾಡಿದವರು ಅರ್ಜಿ ಸಲ್ಲಿಸಬಹುದು. ಇದರಲ್ಲಿ ಲೆವೆಲ್ 1 ರಿಂದ ಲೆವೆಲ್ 7 ರ ತನಕದ ಹುದ್ದೆಗಳಿದ್ದು ತಿಂಗಳಿಗೆ 18,000 ರೂಪಾಯಿಯಿಂದ 45,000 ರೂಪಾಯಿ ತನಕದ ವೇತನ ಶ್ರೇಣಿ ಇದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕೊಂಕಣ ರೈಲ್ವೆ ನಿಗಮ ನಿಯಮ ಪ್ರಕಟಿಸಿದೆ. ವಿವಿಧ ವಿಭಾಗಗಳ ಖಾಲಿ ಹುದ್ದೆ ಭರ್ತಿ ಮಾಡುವುದಕ್ಕೆ ಸಂಬಂಧಿಸಿದ ವಿಸ್ತೃತ ಮಾಹಿತಿ ಒದಗಿಸಿದೆ.

ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 6 ರವರೆಗೆ konkanrailway.com ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಇರುವ 190 ಖಾಲಿ ಹುದ್ದೆಗಳ ಅರ್ಹತಾ ಮಾನದಂಡಗಳು ಮತ್ತು ಇತರ ವಿವರಗಳು ಹೀಗಿವೆ.

ಕೊಂಕಣ ರೈಲ್ವೆ ಹುದ್ದೆಗಳ ವಿವರ

ಎಲೆಕ್ಟ್ರಿಕಲ್ ಡಿಪಾರ್ಟ್‌ಮೆಂಟ್‌ –

ಹಿರಿಯ ಸೆಕ್ಷನ್ ಎಂಜಿನಿಯರ್ ಹುದ್ದೆ – 5

ಟೆಕ್ನಿಷಿಯನ್ – I, II ಹುದ್ದೆಗಳು- 15

ಅಸಿಸ್ಟೆಂಟ್ ಲೋಕೊ ಪೈಲಟ್‌ ಹುದ್ದೆಗಳು -15

ಸಿವಿಲ್ ಡಿಪಾರ್ಟ್‌ಮೆಂಟ್‌

ಸೀನಿಯರ್ ಸೆಕ್ಷನ್ ಎಂಜಿನಿಯರ್ ಹುದ್ದೆ- 5

ಟ್ರಾಕ್‌ ಮೇಂಟೇನರ್ ಹುದ್ದೆ – 35

ಮೆಕಾನಿಕಲ್ ಡಿಪಾರ್ಟ್‌ಮೆಂಟ್‌

ಟೆಕ್ನಿಷಿಯನ್ – I, II ಹುದ್ದೆಗಳು- 20

ಆಪರೇಟಿಂಗ್ ಡಿಪಾರ್ಟ್‌ಮೆಂಟ್‌

ಸ್ಟೇಷನ್ ಮಾಸ್ಟರ್‌ ಹುದ್ದೆಗಳು – 10

ಗೂಡ್ಸ್ ಟ್ರೇನ್‌ ಮ್ಯಾನೇಜರ್ ಹುದ್ದೆ- 5

ಪಾಯಿಂಟ್ಸ್‌ ಮ್ಯಾನ್ ಹುದ್ದೆ – 60

ಸಿಗ್ನಲ್ ಮತ್ತು ಟೆಲಿಕಮ್ಯೂನಿಕೇಷನ್ ಡಿಪಾರ್ಟ್‌ಮೆಂಟ್‌

ಇಎಸ್‌ಟಿಎಂIII ಹುದ್ದೆ – 15

ವಾಣಿಜ್ಯ ವಿಭಾಗ

ಕಮರ್ಷಿಯಲ್ ಸೂಪರ್‌ವೈಸರ್ ಹುದ್ದೆ – 5

ಯಾರು ಅರ್ಜಿ ಸಲ್ಲಿಸಬಹುದು?

1) ಕೊಂಕಣ ರೈಲ್ವೆ ಮಾರ್ಗ ಅಥವಾ ಯೋಜನೆ ಕಾಮಗಾರಿ ವೇಳೆ ಭೂಮಿ ಕಳೆದುಕೊಂಡವರು ಅಂದರೆ ಕೆಆರ್‌ಸಿಎಲ್ ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಭೂಮಿ ಬಿಟ್ಟುಕೊಟ್ಟವರಿಗೆ ಪ್ರಥಮ ಪ್ರಾಶಸ್ತ್ಯ. ಈ ಹುದ್ದೆಗಳಿಗೆ ಭೂಮಿ ಕೊಟ್ಟವರ ಸಂಗಾತಿ (ಹೆಂಡತಿ/ಪತಿ), ಮಗ, ಮಗಳು, ಮೊಮ್ಮಗ ಮತ್ತು ಮೊಮ್ಮಗಳು ಸಹ ಅರ್ಜಿ ಸಲ್ಲಿಸಬಹುದು.

2) ಮಹಾರಾಷ್ಟ್ರ, ಗೋವಾ, ಅಥವಾ ಕರ್ನಾಟಕದಲ್ಲಿ ನೆಲೆಸಿರುವ ಅಭ್ಯರ್ಥಿಗಳು ಮತ್ತು ಕೊಂಕಣ ರೈಲ್ವೆ ಮಾರ್ಗದಲ್ಲಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲಾದ ಮಾನ್ಯ ಉದ್ಯೋಗ ವಿನಿಮಯ ಕಾರ್ಡ್‌ಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಇವರಿಗೆ ಎರಡನೇ ಆದ್ಯತೆ ಸಿಗಲಿದೆ.

ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2024ರ ಆಗಸ್ಟ್ 1 ರಂದು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ 36 ವರ್ಷಕ್ಕಿಂತ ಹೆಚ್ಚಿರಬಾರದು. ಕೋವಿಡ್‌ 19 ಸಾಂಕ್ರಾಮಿಕ ರೋಗದಿಂದಾಗಿ ವಯಸ್ಸಿನ ಮಿತಿಯನ್ನು ಮೀರಿದ ಅಭ್ಯರ್ಥಿಗಳಿಗೆ ಪರಿಹಾರವನ್ನು ಒದಗಿಸಲು ಗರಿಷ್ಠ ವಯಸ್ಸಿನ ಮಿತಿಯನ್ನು 33 ರಿಂದ 36 ಕ್ಕೆ ಹೆಚ್ಚಿಸಲಾಗಿದೆ ಎಂದು ಕೆಆರ್‌ಸಿಎಲ್‌ ತಿಳಿಸಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಹೆಚ್ಚಿನ ಸಡಿಲಿಕ ಸಿಗಲಿದೆ.

ಈ ಸುದ್ದಿ ಓದಿ: V Somanna: ತುಮಕೂರು- ಯಶವಂತಪುರ ಮೆಮು ರೈಲು ಓಡಾಟ ಶೀಘ್ರದಲ್ಲೇ ಆರಂಭ: ವಿ.ಸೋಮಣ್ಣ