Friday, 20th September 2024

ಭಾರತದಲ್ಲಿ ಆಟ ನಿಲ್ಲಿಸಿದ ’ಪಬ್ ಜಿ’ ಮೊಬೈಲ್ ಗೇಮ್

ನವದೆಹಲಿ: ಅತ್ಯಂತ ಜನಪ್ರಿಯ ಪಬ್ ಜಿ ಮೊಬೈಲ್ ಗೇಮ್ ಆಯಪ್ ಇಂದಿನಿಂದ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಚಟುವಟಿಕೆ ನಿಲ್ಲಿಸಿದೆ.

ಕೇಂದ್ರ ಸರಕಾರ ಚೀನಾದ 114 ಮೊಬೈಲ್ ಅಪ್ಲಿಕೇಶನ್ ನಿಷೇಧಿಸಿ ಸುಮಾರು 2 ತಿಂಗಳ ನಂತರ ಪಬ್ ಬಿ ಭಾರತದಲ್ಲಿ ಅಧಿಕೃತ ವಾಗಿ ತನ್ನ ಆಟ ನಿಲ್ಲಿಸಿದೆ.

ಅಕ್ರಮವಾಗಿ ಗ್ರಾಹಕರ ಮಾಹಿತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಳೆದ ಸೆಪ್ಟೆಂಬರ್’ನಲ್ಲಿ 114 ಮೊಬೈಲ್ ಗಳನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಪಬ್ ಜಿ ಮೊಬೈಲ್ ಮತ್ತು ಪಬ್ ಜಿ ಲೈಟ್ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೆನಿಂದ ತೆಗೆದು ಹಾಕಲಾಗಿದೆ.

ಪಬ್ ಜಿ ಆಡಳಿತ ಮಂಡಳಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅಕ್ಟೋಬರ್ 30ರಿಂದ ಭಾರತದಲ್ಲಿ ತನ್ನ ಸೇವೆ ನಿಲ್ಲಿಸಿದ್ದೇವೆ ಎಂದು ತಿಳಿಸಿದೆ.