ನವದೆಹಲಿ: ಪಶ್ಚಿಮ ಬಂಗಾಳದ ಪೆಡಾಂಗ್‌ನಿಂದ ಸಿಕ್ಕಿಂನ ಪಕ್ಯೋಂಗ್ ಜಿಲ್ಲೆಯ ಸಿಲ್ಕ್ ಮಾರ್ಗದ ಮೂಲಕ ಜುಲುಕ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಕನಿಷ್ಠ ನಾಲ್ವರು ಭಾರತೀಯ ಸೇನಾ ಸಿಬ್ಬಂದಿ (Indian Army) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಿಲ್ಕ್ ರೂಟ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರೆನಾಕ್ ರೊಂಗ್ಲಿ ರಾಜ್ಯ ಹೆದ್ದಾರಿಯ ದಲೋಪ್ಚಂದ್ ದಾರಾ ಬಳಿಯ ವರ್ಟಿಕಲ್ ವೀನರ್‌ನಲ್ಲಿ ವಾಹನವು ರಸ್ತೆಯಿಂದ ಜಾರಿ ಸುಮಾರು 700 ರಿಂದ 800 ಅಡಿ ಕಮರಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
सेना के 4 जवानों की मौत!
— Monu kumar (@ganga_wasi) September 5, 2024
दुखद!
सिक्किम में सेना का वाहन खाई में गिरने से जवानों के दिवंगत होंने की सूचना है।
इस दुख की घड़ी को सहने के लिए ,जवानों के परिवारों को शक्ति देना भगवान🙏
ॐ शान्ति #Sikkim #IndianArmy #accident pic.twitter.com/G9wxZw4Nk0
ಮೃತರನ್ನು ಮಧ್ಯಪ್ರದೇಶದ ಚಾಲಕ ಪ್ರದೀಪ್ ಪಟೇಲ್, ಮಣಿಪುರದ ಕುಶಲಕರ್ಮಿ ಡಬ್ಲ್ಯೂ ಪೀಟರ್, ಹರಿಯಾಣದ ನಾಯಕ್ ಗುರ್ಸೇವ್ ಸಿಂಗ್ ಮತ್ತು ತಮಿಳುನಾಡಿನ ಸುಬೇದಾರ್ ಕೆ ತಂಗಪಾಂಡಿ ಎಂದು ಗುರುತಿಸಲಾಗಿದೆ. ಮೃತ ಸೇನಾ ಸಿಬ್ಬಂದಿಗಳೆಲ್ಲರೂ ಪಶ್ಚಿಮ ಬಂಗಾಳದ ಬಿನಾಗುರಿ ಘಟಕಕ್ಕೆ ಸೇರಿದವರು.
ಇದನ್ನೂ ಓದಿ : Arvind Kejriwal: ಇಂದೂ ಇಲ್ಲ ಕೇಜ್ರಿವಾಲ್‌ಗೆ ಜಾಮೀನು ಭಾಗ್ಯ; ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್