Friday, 20th September 2024

Plastic Ban: ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸೂಚನೆ 

ತುಮಕೂರು: ಕರ್ನಾಟಕ ರಾಜ್ಯ ವಾಯು ಮಾಲಿನ್ಯ ಮಂಡಳಿ(Karnataka State Air Pollution Board) ಹೊರಡಿ ಸಿರುವ ಪ್ಲಾಸ್ಟಿಕ್ ತ್ಯಾಜ್ಯ (Plastic Garbaze) ನಿರ್ವಹಣಾ ನಿಯಮದನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಸ್ಟರಿನ್ ಮತ್ತು ವಿಸ್ತರಿತ ಪಾಲಿಸ್ಟರಿನ್ ಸೇರಿದಂತೆ ವಿವಿಧ ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನೆ/ಆಮದು/ಸಂಗ್ರಹಣೆ/ವಿತರಣೆ ಮಾರಾಟ ಮತ್ತು ಬಳಕೆ ನಿಷೇಧಿಸ ಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ (BVAshwaj) ತಿಳಿಸಿದ್ದಾರೆ. 

ಏಕಬಳಕೆ ಪ್ಲಾಸ್ಟಿಕ್ ಬಳಕೆ(Single Use Plastic)ಯನ್ನು ನಿಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ನಗರ ವ್ಯಾಪ್ತಿಯ ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿ, ಅಂಗಡಿ ಮಾಲೀಕರು, ಇ-ಕಾಮರ್ಸ್ ಕಂಪನಿ, ಬೀದಿ ವ್ಯಾಪಾರಿ, ವಾಣ ಜ್ಯ ಸಂಸ್ಥೆ (ಮಾಲ್‌ಗಳು, ಮಾರುಕಟ್ಟೆ ಸ್ಥಳ, ಶಾಪಿಂಗ್ ಕೇಂದ್ರ), ಸಿನಿಮಾ ಮನೆ, ಪ್ರವಾಸೋದ್ಯಮ ಸ್ಥಳ, ಶಾಲೆ/ಕಾಲೇಜು, ಕಚೇರಿ ಸಂಕೀರ್ಣ/ಆಸ್ಪತ್ರೆ, ಇತರೆ ಸಂಸ್ಥೆಗಳು ನಿಯಮವನ್ನು ಪಾಲಿಸದಿರುವುದು ಪಾಲಿಕೆ ಗಮನಕ್ಕೆ ಬಂದಿದೆ. 

ನಗರ ವ್ಯಾಪ್ತಿಯಲ್ಲಿರುವ ಹಲವು ಹೊಟೇಲ್ ಹಾಗೂ ರಸ್ತೆ ಬದಿ ವ್ಯಾಪಾರಿಗಳು ಇಡ್ಲಿ ತಯಾರಿಸಲು/ಆಹಾರ ವಿತರಿಸುವ ಪ್ಲೇಟ್ ಮೇಲೆ/ಸಾಂಬರ್/ಚಟ್ನಿ-ಸಾಗು ಪಾರ್ಸಲ್ ನೀಡಲು ನಿಷೇಧಿತ ಪ್ಲಾಸ್ಟಿಕ್ ಹಾಳೆಗಳನ್ನು ಬಳಸು ತ್ತಿರುವ; ಕಾಫಿ-ಟೀ, ಪಾನೀಯಗಳನ್ನು ಪಾರ್ಸಲ್ ನೀಡಲು ಸಿಲ್ವರ್ ಕೋಟೆಡ್ ಪ್ಲಾಸ್ಟಿಕ್ ಕವರ್ ಥರ್ಮೋ ಕೋಲ್ ಬಟ್ಟಲು/ಪ್ಲೇಟ್, ಸಿಲ್ವರ್ ಕೋಟೆಡ್ ಶೀಟ್ಸ್ ಹೊಂದಿರುವ ಜೊನ್ನೆ, ಪೇಪರ್ ಪ್ಲೇಟ್, ತಟ್ಟೆ ಇತ್ಯಾದಿಗಳನ್ನು ಬಳಸು ತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿರುವುದರಿಂದ ಈ ವಸ್ತುಗಳನ್ನು ಬಳಸದಂತೆ ನಿಷೇಧಿಸಲಾಗಿದೆ. 

 ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಇಯರ್ ಬಡ್, ಬಲೂನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಧ್ವಜ/ಕ್ಯಾಂಡಿ ಸ್ಟಿಕ್/ ಐಸ್‌ಕ್ರೀಂ ಸ್ಟಿಕ್/ ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟರಿನ್ (ಥರ್ಮೋಕೋಲ್)/ಪ್ಲೇಟ್/ಕಪ್/ಲೋಟ/ಫರ‍್ಕ್/ ಚಮಚ/ ಚಾಕು/ ಟ್ರೇಗಳಂತಹ ಪ್ಲಾಸ್ಟಿಕ್ ಕಟ್ಲರಿ, ಸ್ವೀಟ್ ಬಾಕ್ಸುಗಳ ಸುತ್ತ ಸುತ್ತುವ ಪ್ಲಾಸ್ಟಿಕ್ ಫಿಲ್ಮ್, ಆಮಂತ್ರಣ ಪತ್ರ ಹಾಗೂ ಸಿಗರೇಟ್ ಪ್ಯಾಕೇಟ್, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್/ಪ್ಲಾಸ್ಟಿಕ್ ಸ್ಟಿಕ್ಕರ್‌ಗಳ ಉತ್ಪಾದನೆ/ಆಮದು/ಸಂಗ್ರಹಣೆ/ವಿತರಣೆ/ಮಾರಾಟ/ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ ದಂಡ ವಿಧಿಸಿ ಉದ್ದಿಮೆ ರಹದಾರಿಯನ್ನು ರದ್ದುಪಡಿಸಿ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.