Friday, 25th October 2024

Amrutanand Sree: ಶಿಕ್ಷಕರು ಸುಂದರ ನಾಡನ್ನು ಕಟ್ಟುವ ಶಿಲ್ಪಿಗಳು – ಅಮೃತಾನಂದ ಶ್ರೀಗಳು

ಇಂಡಿ: ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಶಿಕ್ಷಕರು ಪೂರಕವಾದವರು. ಮಕ್ಕಳಲ್ಲಿ ನೈತಿಕ ಮೌಲ್ಯ ತುಂಬು ದು ಮಕ್ಕಳ ಭವಿಷ್ಯಕ್ಕೆ ಬೇಳಕನ್ನು ಚೆಲಿ ಸುಂದರ ನಾಡನ್ನು ಕಟ್ಟುವ ಶಿಲ್ಪಿಗಳನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಕಾತ್ರಾಳ ಗ್ರಾಮದ ಗುರುದೇವಾಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಗುರುಭವನದಲ್ಲಿ ಜಿ.ಪಂ ಶಿಕ್ಷಣ ಇಲಾಖೆ ವಿಜಯಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ನಡೆದ ಭಾರತ ರತ್ನ ಡಾ.ಎಸ್.ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾ ಚರಣೆ ಕಾರ್ಯಕ್ರಮದಲ್ಲಿ ಅರ್ಶೀವಚನ ನೀಡಿದರು.

ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯೆಂತ ಶಕ್ತಿಶಾಲಿ ಆಯುಧವೇಂದರೆ ಶಿಕ್ಷಣ. ಇಂತಹ ಪವಿತ್ರ ಶಿಕ್ಷಣ ವೃತ್ತಿಯಿಂದ ಬಂದ ವಿಶಿಷ್ಠ ವ್ಯಕ್ತತ್ವದ ಶಿಕ್ಷಕರು ಭಾರತದ ಪುರಾತನ ಪರಂಪರೆಯ ಹಿರಿಮೇ ಗರಿಮೆ ಗಳನ್ನು ಆಧುನಿಕ, ವೈಜ್ಞಾನಿಕ ಪರೀಭಾಷೆಯಲ್ಲಿ ಜಗತ್ತಿಗೆ ವಿಶ್ಲೇಷಿಸಿ ಸಾರಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕ ಹಾಗೂ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಮಾತನಾಡಿ ಇಂಡಿ ತಾಲೂಕಿನ ಜನತೆ ಅಥರ್ಗಾದ ಶ್ರೀರೇವಣಸಿದ್ದೇಶ್ವರ ಹಾಗೂ ನಿಂಬಾಳದ ರಾನಡೇ ಮಹಾರಾಜರನ್ನು ದೇವರೆಂದು ಪೂಜೀಸುವ ಸಂಸ್ಕೃತಿ ನಮ್ಮದು. ಶಿಕ್ಷಕ, ಗುರು ಬರಿದಾಗದ ಅಕ್ಷಯ ಪಾತ್ರೆ. ವಿಧ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ಏರಿಸಿಲು ಹೊರಟಿರುವ ಅಪರೂಪದ ರೂವಾರಿ. 
ಇಡೀ ಸಮುದಾಯವೇ ಈ ಕಾರಣಕ್ಕೆ ಶಿಕ್ಷಕರನ್ನು ಗೌರವಿಸುತ್ತದೆ ಎಂದರು.

ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದಯಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ, ಕ್ಷೇತ್ರ ಸಮ್ನಯಾಧಿಕಾರಿ ಎಸ್.ಆರ್ ನಡಗಡ್ಡಿ,ಪ್ರಕಾಶ ನಾಯಕ ಆನಂದ ಹುಣಸಗಿ, ಬಸವರಾಜ ಗೋರನಾಳ ಮಾತನಾಡಿದರು.

ವೇದಿಕೆ ಮೇಲೆ ಸಿದ್ದರಾಮೇಶ್ವರ ಪಟ್ಟದ ದೇವರು, ಬಸವಾನಂದಶ್ರೀಗಳು, ತಹಶೀಲ್ದಾರ ಬಿ.ಲೆಸ್ ಕಡಕ ಭಾವಿ, ಒಉರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಲ್.ಸಿ ಗಿರಣಿವಡ್ಡರ್, ಅಲ್ಲಾಭಕ್ಷ ವಾಲೀಕಾರ, ಎ.,ಓ ಹೂಗಾರ, ಸುಜಾತಾ ಪೂಜಾರಿ, ಎಸ್.ಡಿ ಪಾಟೀಲ, ಎಸ್ ಆರ್ ಪಾಟೀಲ ವೈ.ಟಿ.ಪಾಟೀಲ, ನಿಜಣ್ಣಾ ಕಾಳೆ, ಎಂ.ಎಚ್ ಬ್ಯಾಳಿ, ಪಿ,ಬಿ ಕಲ್ಮನಿ, ಆರ್.ವ್ಹಿ ಪಾಟೀಲ, ಶಂಕರ ಕೊಳ್ಳೆಕರ್, ಜಾವೇದ ಮೋಮಿನ್, ಭೀಮಣ್ಣಾ ಕೌಲಗಿ ಇದ್ದರು.