ನವದೆಹಲಿ: ಒಡಿಶಾ ಮಾಜಿ ಮುಖ್ಯಮಂತ್ರಿ(Odisha Ex CM) ನವೀನ್ ಪಟ್ನಾಯಕ್(Naveen Patnaik) ನೇತೃತ್ವದ ಬಿಜು ಜನತಾ ದಳ (BJD)ಪಕ್ಷದಿಂದ ಉಚ್ಚಾಟನೆಗೊಂಡಿರುವ ರಾಜ್ಯಸಭಾ ಸದಸ್ಯ (Rajyasabha Member) ಸುಜೀತ್ ಕುಮಾರ್(Sujith Kumar) ಇಂದು ಬಿಜೆಪಿ ಸೇರ್ಪಡೆ(BJP Joining)ಗೊಂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಸುಜೀತ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಛಾಟನೆ(Expelled) ಮಾಡಲಾಗಿತ್ತು. ಇದಾದ ಒಂದು ದಿನದಲ್ಲೇ ನವೀನ್ ಪಟ್ನಾಯಕ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸುಜೀತ್ ಕುಮಾರ್ ಬಿಜೆಪಿಗೆ ಸೇರ್ಪಡೆಯಾದರು. ಇದಾದ ಬಳಿಕ ಕುಮಾರ್ ಅವರು ಮೇಲ್ಮನೆಗೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿಯ ಮುಖ್ಯ ವಕ್ತಾರ ಅನಿಲ್ ಬಲೂನಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
Expelled BJD (@bjd_odisha) leader Sujeet Kumar (@SujeetKOfficial) joins BJP (@BJP4India) in the presence of Union Minister Dharmendra Pradhan (@dpradhanbjp).
— Lok Poll (@LokPoll) September 6, 2024
Kumar resigned as a #RajyaSabha MP from BJD and the resignation has been accepted. BJD expelled him today for "anti-party… pic.twitter.com/LVoQUEZzkJ
ಇನ್ನು ನಿನ್ನೆ ನವೀನ್ ಪಟ್ನಾಯಕ್ ಅವರು ಅಧಿಸೂಚನೆ ಹೊರಡಿಸಿದ್ದು, ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ತಕ್ಷಣದಿಂದಲೇ ಸುಜೀತ್ ಕುಮಾರ್ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ತನ್ನನ್ನು ರಾಜ್ಯಸಭೆಗೆ ಕಳುಹಿಸಿದ ಪಕ್ಷ ಮತ್ತು ಕಾಳಹಂಡಿ ಜಿಲ್ಲೆಯ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಅವರು ನಿರಾಸೆಗೊಳಿಸಿದ್ದಾರೆ ಎಂದು ಪಟ್ನಾಯಕ್ ಆದೇಶದಲ್ಲಿ ತಿಳಿಸಿದ್ದಾರೆ.
Party President Shri @Naveen_Odisha expelled Rajya Sabha MP Sujeet Kumar from the party with immediate effect for anti-party activities. He has been expelled as he has let down Biju Janata Dal which sent him to Rajya Sabha and betrayed the faith of the people of #Odisha. pic.twitter.com/QQ0gxEMpb4
— Biju Janata Dal (@bjd_odisha) September 6, 2024
ಏತನ್ಮಧ್ಯೆ, ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಜಗದೀಪ್ ಧಂಖರ್ ಅವರು ರಾಜ್ಯಸಭೆ ಸ್ಥಾನಕ್ಕೆ ಸುಜೀತ್ ಕುಮಾರ್ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ಭಾರತದ ಉಪರಾಷ್ಟ್ರಪತಿಗಳ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಸಂವಿಧಾನದ ಆರ್ಟಿಕಲ್ 101 3(ಬಿ) ಗೆ ಅನುಗುಣವಾಗಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: ಒಡಿಶಾದ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ ಪ್ರಮಾಣ ವಚನ