-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಹಬ್ಬಕ್ಕೆ (Ganesh Chaturthi 2024) ಮಕ್ಕಳ ಫ್ಯಾಷನ್‌ನಲ್ಲಿ ನಾನಾ ಬಗೆಯ ಟ್ರೆಡಿಷನಲ್ ಲುಕ್ ನೀಡುವಂತಹ ವೈವಿಧ್ಯಮಯ ಎಥ್ನಿಕ್‌ವೇರ್ಸ್‌ಗಳು ಕಾಲಿಟ್ಟಿವೆ.
ಕ್ಯೂಟಾಗಿ ಬಿಂಬಿಸುವ ಎಥ್ನಿಕ್‌ವೇರ್ಸ್
ಗೌರಿ-ಗಣೇಶ ಹಬ್ಬದ ಸಂಭ್ರಮ ಹೆಚ್ಚಿಸಲು ಈಗಾಗಲೇ ನಾನಾ ಬಗೆಯ ಮಕ್ಕಳ ಎಥ್ನಿಕ್‌ವೇರ್‌ಗಳು ಆಗಮಿಸಿವೆ. ಅದರಲ್ಲೂ ಹಬ್ಬದ ಕಳೆ ಹೆಚ್ಚಿಸುವಂತಹ ಟ್ರೆಡಿಷನಲ್ ವೇರ್‌ಗಳು, ಮಿನಿ ಡಿಸೈನರ್‌ವೇರ್‌ಗಳು ಬಂದಿವೆ.
ಮಕ್ಕಳು ಧರಿಸಿದಾಗ ಕ್ಯೂಟಾಗಿ ಕಾಣಿಸುವಂತಹ ಉಡುಪುಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಈ ಫೆಸ್ಟಿವ್ ಸೀಸನ್‌ನಲ್ಲಿ ಬಂದಿರುವುದು ಪೋಷಕರ ಸಂತೋಷಕ್ಕೆ ಕಾರಣವಾಗಿದೆ. ಅಲ್ಲದೇ, ಈ ಸೀಸನ್‌ನಲ್ಲಿ ಇವುಗಳ ಬೇಡಿಕೆ ಕೂಡ ಹೆಚ್ಚಿದೆ ಎನ್ನುವ ಕಿಡ್ಸ್ ಸ್ಟೈಲಿಸ್ಟ್ ಸವಿತಾ ರೆಡ್ಡಿ. ಅವರ ಪ್ರಕಾರ, ಪುಟ್ಟದಾಗಿರುವ ಮಿನಿ ಸೈಝಿನ ಎಥ್ನಿಕ್‌ವೇರ್‌ಗಳು ಮಕ್ಕಳನ್ನು ಹೈಲೈಟ್ ಮಾಡುವುದರೊಂದಿಗೆ ಕ್ಯೂಟಾಗಿ ಬಿಂಬಿಸುತ್ತವೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಕಿಡ್ಸ್ ಎಥ್ನಿಕ್‌ವೇರ್ಸ್
ಈ ಫೆಸ್ಟಿವ್ ಸೀಸನ್‌ನಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳ ಎಥ್ನಿಕ್‌ವೇರ್‌ಗಳಲ್ಲಿ ಸಾಕಷ್ಟು ಡಿಸೈನ್‌ಗಳು ಹೊಸ ರೂಪದಲ್ಲಿ ಬಂದಿವೆ. ಇವು ತಕ್ಷಣಕ್ಕೆ ನೋಡಲು ಹಳೆಯ ವಿನ್ಯಾಸ ಎಂದೆನಿಸಿದರೂ ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲಿ ನವ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.
ಇನ್ನು ಬಿಡುಗಡೆಗೊಂಡಿರುವ ಹೆಣ್ಣು ಮಕ್ಕಳ ಉದ್ದ-ಲಂಗಗಳು ಇದೀಗ ಕ್ರಾಪ್ ಆಗಿದೆ. ರೇಷ್ಮೆಯ ಉದ್ದ ಲಂಗಕ್ಕೆ ವಿನೂತನ ಬಗೆಯ ಸ್ಲೀವ್ ಡಿಸೈನ್‌ಗಳು ಎಂಟ್ರಿ ನೀಡಿವೆ. ಇವುಗಳೊಂದಿಗೆ ಬ್ಯಾಕ್ ಬಟನ್ ಬ್ಲೌಸ್‌ನ ಉದ್ದ-ಲಂಗ ಮರಳಿದೆ. ತ್ರೀ ಪೀಸ್ ಮಿನಿ ಲಂಗ-ದಾವಣಿ ಎಲ್ಲರನ್ನು ಆಕರ್ಷಿಸಿದೆ ಎನ್ನುತ್ತಾರೆ ಡಿಸೈನರ್‌ಗಳು. ಇನ್ನು ಗಂಡು ಮಕ್ಕಳ ಎಥ್ನಿಕ್ ಫ್ಯಾಷನ್‌ನಲ್ಲಿ ಮಿನಿ ಶೆರ್ವಾನಿ, ಕುರ್ತಾ ಹಾಗೂ ಪಂಚೆ-ಶಲ್ಯದಂತಹ ಟ್ರೆಡಿಷನಲ್ ವೇರ್‌ಗಳು, ಚಿಣ್ಣರಿಗೆ ಕಂಫರ್ಟಬಲ್ ಎಂದೆನಿಸುವ ಸಾಫ್ಟ್ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ.
ಗ್ರ್ಯಾಂಡ್ ಎಥ್ನಿಕ್‌ವೇರ್ಸ್
ಗ್ರ್ಯಾಂಡಾಗಿ ಕಾಣಿಸುವ ಮಕ್ಕಳ ಎಥ್ನಿಕ್‌ವೇರ್‌ಗಳು ಈ ಬಾರಿ ಸಾಕಷ್ಟು ಬೇಡಿಕೆ ಸೃಷ್ಟಿಸಿಕೊಂಡಿವೆ. ಎಥ್ನಿಕ್‌ವೇರ್ ಎಂದರೇ ಸಾಕು ದೂರ ಓಡಿ ಹೋಗುವ ಮಕ್ಕಳು ಕೂಡ ಇಷ್ಟಪಟ್ಟು ಧರಿಸುವಂತಹ ಡಿಸೈನರ್‌ವೇರ್‌ಗಳು ಈ ಬಾರಿ ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಬೋಟಿಕ್ ಡಿಸೈನರ್ಸ್.
ಮಕ್ಕಳ ಎಥ್ನಿಕ್‌ವೇರ್ ಆಯ್ಕೆ ಹೇಗೆ?
ಮೊದಲು ಮಕ್ಕಳ ಅಭಿರುಚಿ ತಿಳಿದುಕೊಂಡು ಅದಕ್ಕೆ ತಕ್ಕನಾದ ಎಥ್ನಿಕ್‌ವೇರ್ ಖರೀದಿಸಿ.
ಸಾಫ್ಟ್ ಫ್ಯಾಬ್ರಿಕ್‌ನ ಎಥ್ನಿಕ್‌ವೇರ್‌ಗಳನ್ನೇ ಆಯ್ಕೆ ಮಾಡಿ.
ದೊಡ್ಡವರೊಂದಿಗೆ ಟ್ವಿನ್ನಿಂಗ್ ಮಾಡಬಹುದಾದಂತಹ ಮಿನಿ ಡಿಸೈನರ್‌ವೇರ್‌ಗಳು ಲಭ್ಯ.