ಬೆಂಗಳೂರು: ಶುಕ್ರವಾರ ಗ್ರಾಹಕರ ಕೈ ಸುಟ್ಟಿದ್ದ ಚಿನ್ನದ ದರ ಇಂದು (ಸೆಪ್ಟೆಂಬರ್ 7) ಇಳಿಮುಖವಾಗಿದ್ದು, ಆ ಮೂಲಕ ಗ್ರಾಹಕರ ಗಣೇಶ ಚತುರ್ಥಿ ಹಬ್ಬದ ಖುಷಿಯನ್ನು ಹೆಚ್ಚಿಸಿದೆ (Gold Rate). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 40 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 44 ರೂ. ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,680 ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 7,287 ರೂ. ಇದೆ.
22 ಕ್ಯಾರಟ್ ಚಿನ್ನದ ದರಗಳ ವಿವರ
22 ಕ್ಯಾರಟ್‌ನ 8 ಗ್ರಾಂ ಚಿನ್ನ53,440 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 66,800 ರೂ. ಮತ್ತು 100 ಗ್ರಾಂಗೆ 6,68,000 ರೂ. ಪಾವತಿಸಬೇಕಾಗುತ್ತದೆ.
24 ಕ್ಯಾರಟ್ ಚಿನ್ನದ ದರಗಳ ವಿವರ
24 ಕ್ಯಾರಟ್‌ನ 8 ಗ್ರಾಂ ಚಿನ್ನ 58,296 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 72,870 ರೂ. ಮತ್ತು 100 ಗ್ರಾಂಗೆ 7,28,700 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
ಬೆಂಗಳೂರು | 6,680 ರೂ. | 7,287 ರೂ. |
ದೆಹಲಿ | 6,695 ರೂ. | 7,3026 ರೂ. |
ಮುಂಬೈ | 6,680 ರೂ. | 7,287 ರೂ. |
ಚೆನ್ನೈ | 6,680 ರೂ. | 7,287 ರೂ. |
ಹೈದರಾಬಾದ್ | 6,680 ರೂ. | 7,287 ರೂ. |
ಬೆಳ್ಳಿ ಬೆಲೆ
ಇತ್ತ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ 84 ರೂ. ಇದೆ. 8 ಗ್ರಾಂಗೆ 672 ರೂ., 10 ಗ್ರಾಂಗೆ 840 ರೂ. ಮತ್ತು 1 ಕೆಜಿಗೆ 84,000 ರೂ. ಪಾವತಿಸಬೇಕಾಗುತ್ತದೆ.
ಆಭರಣ ಕೊಂಡುಕೊಳ್ಳುವ ಮುನ್ನ ಗಮನಿಸಬೇಕಾದ ಅಂಶಗಳಿವು
ದೇಶದಲ್ಲಿ ಚಿನ್ನ ಎನ್ನುವುದು ಬಹು ಬೇಡಿಕೆಯ ಮತ್ತು ಅತ್ಯಮೂಲ್ಯ ಲೋಹ ಎನಿಸಿಕೊಂಡಿದೆ. ಆಭರಣದ ಜತೆಗೆ ಹೂಡಿಕೆಗೂ ಚಿನ್ನವನ್ನು ಪರಿಗಣಿಸಲಾಗುತ್ತದೆ. ಅದರಲ್ಲಿಯೂ ಮದುವೆ ಸೀಸನ್, ಹಬ್ಬಗಳ ಋತುಗಳಲ್ಲಿ ಚಿನ್ನದ ಆಭರಣಕ್ಕೆ ಉತ್ತಮ ಬೇಡಿಕೆ ಕಂಡು ಬರುತ್ತದೆ. ಮೊದಲ ಬಾರಿಗೆ ಆಭರಣ ಖರೀದಿಸುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಲ್ಲಿದೆ.
ಶುದ್ಧತೆ
ಚಿನ್ನದ ಶುದ್ಧತೆಯನ್ನು ಕ್ಯಾರಟ್‌ಗಳಲ್ಲಿ ಅಳೆಯಲಾಗುತ್ತದೆ. 24 ಕ್ಯಾರಟ್ ಚಿನ್ನವನ್ನು 99.9% ಶುದ್ಧವೆಂದು ಪರಿಗಣಿಸಲಾಗುತ್ತದೆ. ನೀವು 22 ಕ್ಯಾರಟ್, 18 ಕ್ಯಾರಟ್, 14 ಕ್ಯಾರಟ್ ಇತ್ಯಾದಿಗಳನ್ನು ಆರಿಸುವಾಗ ಶುದ್ಧತೆಯ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ನೀವು ಯಾವ ರೀತಿಯ ಚಿನ್ನದ ಖರೀದಿಸಲು ಬಯಸುತ್ತಿದ್ದೇರಿ ಎನ್ನುವುದನ್ನು ಮೊದಲೇ ನಿರ್ಧರಿಸಿ. ಹಾಲ್‌ಮಾರ್ಕ್ ಶುದ್ಧತೆಯನ್ನು ಸೂಚಿಸುವ ಮತ್ತೊಂದು ವಿಧಾನ. ಹೀಗಾಗಿ ಹಾಲ್‌ಮಾರ್ಕ್ ಇರುವ ಆಭರಣಗಳನ್ನೇ ಖರೀದಿಸಿ.
ದರ
ಆಭರಣದ ಬೆಲೆಯು ಅದರ ಶುದ್ಧತೆ ಮತ್ತು ಅದನ್ನು ಯಾವ ಮಿಶ್ರಲೋಹದೊಂದಿಗೆ ಬೆರೆಸಿ ತಯಾರಾಗಿಸಲಾಗಿದೆ ಮತ್ತು ಹೇಗೆ ತಯಾರಾಗಿಸಲಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ. ಅಂದರೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಆಭರಣಗಳು ದುಬಾರಿಯಾಗಿರುತ್ತವೆ. ಹೀಗಾಗಿ ದರದ ಬಗ್ಗೆ ಯೋಚಿಸುವಾಗ ಡಿಸೈನ್ ಕೂಡ ನಿಮ್ಮ ಗಮನದಲ್ಲಿರಲಿ. ಜತೆಗೆ ಬೇರೆ ಬೇರೆ ಜ್ಯುವೆಲ್ಲರಿಗಳಲ್ಲಿನ ಕೊಡುಗೆಯನ್ನು ಗಮನಿಸಿ ದರಗಳನ್ನು ಹೋಲಿಸಿ ನೋಡಿ.
ಭಾರ
ಹಣ ಪಾವತಿಸುವ ಮೊದಲು ನೀವು ಖರೀದಿಸಿದ ಚಿನ್ನದ ತೂಕವನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಅಲ್ಲದೆ ಖರೀದಿಯ ಬಿಲ್ ಅನ್ನು ತಪ್ಪದೆ ಪಡೆದುಕೊಳ್ಳಿ.
ಈ ಸುದ್ದಿಯನ್ನೂ ಓದಿ: Money Tips: PPF ಖಾತೆ ಹೊಂದಿದ್ದೀರಾ? ಬದಲಾದ ಈ ಹೊಸ ನಿಯಮ ತಿಳಿದಿರಲಿ