ಬೆಂಗಳೂರು: 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ (Kargil War) ಇಪ್ಪತ್ತೈದು ವರ್ಷಗಳ ನಂತರ ಪಾಕಿಸ್ತಾನ ಸೇನೆಯು ಮೊದಲ ಬಾರಿಗೆ ಈ ಮಿಲಿಟರಿ ಸಂಘರ್ಷ ನಮ್ಮ ಕುಕೃತ್ಯ ಎಂಬುದನ್ನು ಒಪ್ಪಿಕೊಂಡಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ (Asim Munir) ಅವರು ಶುಕ್ರವಾರ ರಕ್ಷಣಾ ದಿನದ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದುವರೆಗೆ ಈ ಯುದ್ಧಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಹಾಗೂ ಭಾರತದಿಂದ ಪೆಟ್ಟು ತಿಂದು ಸೋತು ಸುಣ್ಣವಾಗಿದ್ದ ಹೊರತಾಗಿಯೂ ಅದನ್ನು ಒಪ್ಪಿಕೊಳ್ಳದ ಪಾಕಿಸ್ತಾನ ಇದೀಗ ತಾನೇ ಮಾಡಿದ್ದು ಎಂದು ಹೇಳಿಕೊಂಡಿದೆ.
First time ever #PakistaniArmy accepts involvement in #KargilWar. Pakistan Army Chief General #AsimMunir confirms Pakistan Army's involvement in #KargilWar. Pakistan Army Chief General Asim Munir in a defence day speech on Friday said, "1948, 1965, 1971 or Kargil war between… pic.twitter.com/Um83MwSrwM
— Upendrra Rai (@UpendrraRai) September 7, 2024
1948, 1965, 1971 ಅಥವಾ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ಧ ಅಥವಾ ಸಿಯಾಚಿನ್ ಸಂಘರ್ಷಗಳಲ್ಲಿ ಸಾವಿರಾರು ಸೈನಿಕರು ತ್ಯಾಗ ಮಾಡಿದ್ದಾರೆ” ಎಂದು ಜನರಲ್ ಮುನೀರ್ ಹೇಳಿಕೊಂಡಿದ್ದಾರೆ. ಇದು ಪಾಕಿಸ್ತಾನವೇ ಆರಂಭಿಸಿದ ಸಂಘರ್ಷ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. 1999ರ ಮೇ ಮತ್ತು ಜುಲೈ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ನಿಯಂತ್ರಣ ರೇಖೆ ದಾಟಿ ಭಾರತದ ಭಾಗಕ್ಕೆ ನುಸುಳಿದ್ದವು. ಭಾರತವು ‘ಆಪರೇಷನ್ ವಿಜಯ್’ ಅಡಿಯಲ್ಲಿ ಒಳನುಸುಳುವವರನ್ನು ಹಿಮ್ಮೆಟ್ಟಿಸಿತ್ತು.
ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರರು ಎಂದಿದ್ದ ಪಾಕಿಸ್ತಾನ
ಇಸ್ಲಾಮಾಬಾದ್ ನುಸುಳುಕೋರರನ್ನು “ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರರು” ಅಥವಾ “ಮುಜಾಹಿದ್ದೀನ್” ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿತ್ತು. ನೇರ ಮಿಲಿಟರಿ ಪಾಲ್ಗೊಳ್ಳುವಿಕೆಯನ್ನು ನಿರಂತರವಾಗಿ ನಿರಾಕರಿಸಿತ್ತು. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವು “ಬುಡಕಟ್ಟು ನಾಯಕರು” ಗರಿ ರೇಖೆಯನ್ನು ದಾಟಿದ್ದಾರೆ ಎಂದು ಹೇಳಿಕೊಂಡಿತ್ತು.
ಈ ಸುದ್ದಿಯನ್ನೂ ಓದಿ: Amit Shah: ರಾಜ್ಯ ಸ್ಥಾನಮಾನದ ಹೆಸರಲ್ಲಿ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಿ; ಜಮ್ಮು& ಕಾಶ್ಮೀರದಲ್ಲಿ ಅಮಿತ್ ಶಾ ಗುಡುಗು
ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಧಿಕಾರದಲ್ಲಿದ್ದ ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡ ಕಾರ್ಯಾಚರಣೆಯನ್ನು ಬಹಿರಂಗವಾಗಿ ಟೀಕಿಸಿ ನಾಟಕ ಮಾಡಿದ್ದರು. ಪಾಕಿಸ್ತಾನದ ಮಾಜಿ ಮಿಲಿಟರಿ ಅಧಿಕಾರಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಶಾಹಿದ್ ಅಜೀಜ್ ಅವರು ನಿವೃತ್ತಿಯ ನಂತರ ಕಾರ್ಗಿಲ್‌ನಲ್ಲಿ ತಮ್ಮ ಸೇನೆಯ ಪಾತ್ರವನ್ನು ಒಪ್ಪಿಕೊಂಡಿದ್ದರು. ಆದರೆ, ಅಧಿಕಾರದಲ್ಲಿರುವ ಸೇನಾ ಮುಖ್ಯಸ್ಥರು ಈ ಕ್ರಮವನ್ನು ಒಪ್ಪಿಕೊಳ್ಳುವ ಮೂಲಕ ಪಾಕಿಸ್ತಾನದ ನೇರ ಪಾಲ್ಗೊಳ್ಳುವಿಕೆಯನ್ನು ಒಪ್ಪಿಕೊಂಡಿದೆ.
ಜನರಲ್ ಪರ್ವೇಜ್ ಮುಷರಫ್ ಮತ್ತು ಇತರ ಕೆಲವು ಉನ್ನತ ಕಮಾಂಡರ್‌ಗಳಿಗೆ ಮಾತ್ರ ತಿಳಿದಿರುವ ಈ ಕಾರ್ಯಾಚರಣೆಯನ್ನು “ನಾಲ್ಕು ಜನರ ಯುದ್ಧ ” ಎಂದು ಅಜೀಜ್ ಬಣ್ಣಿಸಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ 1999 ರ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ನವಾಜ್ ಷರೀಫ್, ನಂತರ ಕಾರ್ಗಿಲ್‌ನಲ್ಲಿ ಯುದ್ಧ ಮಾಡುವ ಮೂಲಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಒಪ್ಪಿಕೊಂಡಿದ್ದರು.