ತಿಂಗಳಿಗೆ 12,5೦೦ ರೂ. ಹೂಡಿಕೆ ಮಾಡಿ 71.79 ಲಕ್ಷ ರೂ. ಗಳಿಸಬಹುದಾದ ಯೋಜನೆ ಸುಕನ್ಯಾ ಸಮೃದ್ಧಿ (Sukanya Samriddhi Yojana). ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳಿಗಾಗಿ (girl child) ಪೋಷಕರು ಇದನ್ನು ಪೋಸ್ಟ್ ಆಫೀಸ್, ಬ್ಯಾಂಕ್ ನಲ್ಲಿ ತೆರೆಯಬಹುದು. ಹೆಚ್ಚಿನ ಬಡ್ಡಿ ದರವನ್ನು (interest rate) ಒದಗಿಸುವ ಈ ಯೋಜನೆಯ ಹಣವನ್ನು ಮಗಳ ಶಿಕ್ಷಣ, ಮದುವೆಗಾಗಿ ಬಳಸುವಂತೆ ಪ್ಲಾನ್ ಮಾಡಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳಿಗೆ ವಾರ್ಷಿಕವಾಗಿಯೂ ಠೇವಣಿ ಮಾಡಬಹುದು. ಕನಿಷ್ಠ ಠೇವಣಿ 250 ರೂ. ನಿಂದ ಗರಿಷ್ಠ 1.5 ಲಕ್ಷ ರೂ. ವರೆಗೆ ಇಡಬಹುದಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯು ಸರ್ಕಾರಿ ಪ್ರಾಯೋಜಿತ ಉಳಿತಾಯ ಯೋಜನೆಯಾಗಿದ್ದು, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆ ವೆಚ್ಚಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಭರವಸೆಯ ಭವಿಷ್ಯವನ್ನು ನೀಡಲು ರಚಿಸಲಾಗಿದೆ.
ಬಡ್ಡಿ ದರ 2024
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವನ್ನು ಹೊಂದಿರುವ ಪೋಷಕರು ಹೆಚ್ಚಾಗಿ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಬಹುದು. ಈ ಯೋಜನೆಯು ತುಲನಾತ್ಮಕವಾಗಿ ಹೆಚ್ಚಿನ ಬಡ್ಡಿದರವನ್ನು ಹೊಂದಿದೆ ಮತ್ತು ಪೋಷಕರು ತಮ್ಮ ಮಗಳ ಶಿಕ್ಷಣ ಅಥವಾ ಮದುವೆಗೆ ಬಳಸಬಹುದಾದ ಕಾರ್ಪಸ್ ಅನ್ನು ರಚಿಸುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯು ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಮುಕ್ತವಾಗಿದೆ. ಇದನ್ನು ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಯಲ್ಲಿ ತೆರೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯು ಪ್ರಸ್ತುತ ತ್ರೈಮಾಸಿಕಕ್ಕೆ ಅಂದರೆ ಜುಲೈ 1 ರಿಂದ ಸೆಪ್ಟೆಂಬರ್ 30ರವರೆಗೆ ಶೇ. 8.2 ಬಡ್ಡಿ ದರವನ್ನು ನೀಡುತ್ತದೆ.
ಸುಕನ್ಯಾ ಸಮೃದ್ಧಿ ಖಾತೆ
ವಾರ್ಷಿಕವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳಿಗೆ ಠೇವಣಿ ಮಾಡಬಹುದು. ಕನಿಷ್ಠ ಠೇವಣಿ 250 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಮೆಚ್ಯೂರಿಟಿ ಅವಧಿಯು ಖಾತೆಯನ್ನು ತೆರೆಯುವ ದಿನಾಂಕದಿಂದ 21 ವರ್ಷಗಳು ಅಥವಾ ಹುಡುಗಿಗೆ 18 ವರ್ಷ ತುಂಬಿದ ಅನಂತರ. ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯುವ ದಿನಾಂಕದಿಂದ 15 ವರ್ಷಗಳವರೆಗೆ ಠೇವಣಿ ಮಾಡಬಹುದಾಗಿದೆ.
ಲಾಭ ಲೆಕ್ಕಾಚಾರ
ಜುಲೈ- ಸೆಪ್ಟೆಂಬರ್ 2024 ತ್ರೈಮಾಸಿಕಕ್ಕೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಸ್ತುತ ವಾರ್ಷಿಕ ಶೇ. 8.2 ಬಡ್ಡಿ ದರವನ್ನು ನೀಡಲಾಗುತ್ತದೆ. ಈ ಬಡ್ಡಿ ದರವು 21 ವರ್ಷಗಳ ಖಾತೆಯ ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ. ಐದು ವರ್ಷದ ಹೆಣ್ಣು ಮಗುವನ್ನು ಹೊಂದಿರುವ ಖಾತೆದಾರನು ವಾರ್ಷಿಕವಾಗಿ 1.5 ಲಕ್ಷ ರೂ. ಠೇವಣಿ ಮಾಡಿದರೆ ತಿಂಗಳಿಗೆ 12,500 ರೂ. ಆಗುತ್ತದೆ. 15 ವರ್ಷಗಳವರೆಗೆ, ಖಾತೆದಾರರು ಒಟ್ಟು 22.49 ಲಕ್ಷ ರೂ. ವನ್ನು ಹೂಡಿಕೆ ಮಾಡಿ ಖಾತೆ ತೆರೆದ 21 ವರ್ಷಗಳ ನಂತರ ಮೆಚ್ಯೂರಿಟಿಯಲ್ಲಿ 71.79 ಲಕ್ಷ ರೂ. ಗಳಿಸಬಹುದು.
ಖಾತೆ ತೆರೆಯಲು ನಿಯಮ
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಪೋಷಕರು ಅಥವಾ ಕಾನೂನು ಪಾಲಕರು ಮಾತ್ರ ತೆರೆಯಬಹುದು. ಪ್ರತಿ ಕುಟುಂಬಕ್ಕೆ ಗರಿಷ್ಠ ಎರಡು ಖಾತೆಗಳನ್ನು ತೆರೆಯಲು ಅವಕಾಶವಿದೆ. ಎರಡನೇ ಬಾರಿ ಅವಳಿ ಮಕ್ಕಳು ಜನಿಸಿದರೆ ಮೂರನೇ ಖಾತೆಗೆ ಅವಕಾಶವಿದೆ.
DK Shivakumar: ಕಮಲಾ ಹ್ಯಾರಿಸ್ ಫೋನ್ ಕರೆ; ಚುನಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿಕೆ ಶಿವಕುಮಾರ್ ಅಮೆರಿಕಕ್ಕೆ
ಸುಕನ್ಯಾ ಸಮೃದ್ಧಿ ಖಾತೆ ತೆರೆಯುವ ಪ್ರಕ್ರಿಯೆಯು ಪೂರ್ಣಗೊಂಡ ಅನಂತರ ಆನ್‌ಲೈನ್ ಬ್ಯಾಂಕಿಂಗ್ ಬಳಸಿ ಠೇವಣಿ ಮಾಡಬಹುದು. ವಾರ್ಷಿಕ ಠೇವಣಿಗಳನ್ನು ಮಾಡಲು ವಿಫಲವಾದರೆ ಖಾತೆಯನ್ನು ಡಿಫಾಲ್ಟ್ ಅಡಿಯಲ್ಲಿ ಖಾತೆ ಎಂದು ವರ್ಗೀಕರಿಸಬಹುದು. ಖಾತೆ ಪ್ರಾರಂಭವಾದ 15 ವರ್ಷಗಳವರೆಗೆ ಠೇವಣಿ ಮಾಡದಿರುವ ಪ್ರತಿ ವರ್ಷಕ್ಕೆ 50 ರೂ. ದಂಡ ಪಾವತಿಸಿ ಖಾತೆಯನ್ನು ಸಕ್ರಿಯಗೊಳಿಸಬಹುದು.