ಮಲೇಷ್ಯಾದ ರೆಸ್ಟೋರೆಂಟ್ ನಲ್ಲಿ (Malaysian restaurant) ವಿಶ್ವದ ಅತ್ಯಂತ ಉದ್ದವಾದ ದೋಸೆ (long dose) ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣವಾದ (social media) ಇನ್ ಸ್ಟಾಗ್ರಾಮ್‌ನಲ್ಲಿ ಇದರ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಮಂದಿ ಇದು ಕುತುಬ್ ಮಿನಾರ್ ದೋಸೆ ಎಂದು ಬಣ್ಣಿಸಿದ್ದಾರೆ. ಭಾರತೀಯ ಮೂಲದ ರೆಸ್ಟೋರೆಂಟ್ ಈ ದೋಸೆಯನ್ನು ವಿತರಿಸುತ್ತಿದೆ.
ಇನ್ ಸ್ಟಾ ಗ್ರಾಮ್ ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಲೇಷ್ಯಾದ ರೆಸ್ಟೋರೆಂಟ್ ಅಸಾಮಾನ್ಯವಾದ ಉದ್ದದ ದೋಸೆಯನ್ನು ಕಾಣಬಹುದು.
ಮಲೇಷ್ಯಾದ ಕೌಲಾಲಂಪುರ್‌ನಲ್ಲಿರುವ ಟಿಜಿಯ ನಾಸಿ ಕಂದರ್ ರೆಸ್ಟೋರೆಂಟ್ ಈಗ ಉದ್ದದ ದೋಸೆಯಿಂದಾಗಿ ಸಾಕಷ್ಟು ಗ್ರಾಹಕರನ್ನು ಸೆಳೆಯುತ್ತಿದೆ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಸಾಕಷ್ಟು ನೆಟ್ಟಿಗರನ್ನು ಸೆಳೆದಿದೆ. ಅಗಾಧವಾದ ದೋಸೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಜನರೊಂದಿಗೆ ಟ್ರಾವೆಲ್ ಬ್ಲಾಗರ್‌ವೊಬ್ಬರು ಹಂಚಿಕೊಂಡಿದ್ದಾರೆ.
ಊಟ ಮಾಡುವಾಗ ಯಾವಾಗಲೂ ದಕ್ಷಿಣ ಭಾರತೀಯ ಪಾಕಪದ್ಧತಿಯನ್ನು ಆಯ್ಕೆ ಮಾಡುತ್ತೀರಾ ? ಹಾಗಿದ್ದರೆ ಈ ವಿಡಿಯೋ ವಿಶೇಷವಾಗಿ ನಿಮಗಾಗಿ. ಮಲೇಷ್ಯಾದ ಕೌಲಾಲಂಪುರ್‌ನಲ್ಲಿರುವ ಟಿಜಿಯ ನಾಸಿ ಕಂದರ್ ಎಂಬ ಭಾರತೀಯ ರೆಸ್ಟೋರೆಂಟ್ ನಲ್ಲಿ ಉದ್ದವಾದ ದೋಸೆಗಳೊಂದಿಗೆ ಇತರ ಆಹಾರ ಪದಾರ್ಥಗಳನ್ನು ಗ್ರಾಹಕರು ಸವಿಯುವುದನ್ನು ಕಾಣಬಹುದು.
ರೆಸ್ಟೊರೆಂಟ್‌ನ ಉದ್ಯೋಗಿಯೊಬ್ಬರು ಆಹಾರವನ್ನು ಗ್ರಾಹಕರಿಗೆ ತೆಗೆದುಕೊಂಡು ಹೋಗುವುದನ್ನು ಕಾಣಬಹುದು. ಭಾರೀ ಎತ್ತರದ ದೋಸೆಯನ್ನು ಹಿಡಿಯಲು ಮಧ್ಯೆ ಟಿಶ್ಯು ಇಡಲಾಗಿತ್ತು. ದೋಸೆಯನ್ನು ಮಧ್ಯೆ ಹಿಡಿದು ಗ್ರಾಹಕರ ಟೇಬಲ್ ಗೆ ನಿಧಾನವಾಗಿ ಕೊಂಡೊಯ್ಯಲಾಯಿತು. ಭಾರಿ ಎತ್ತರದ ದೋಸೆಯನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು.
ಇದರ ವಿಡಿಯೋ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಅದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಮಲೇಷ್ಯಾದ ಉಪಾಹಾರ ಗೃಹದ ಕೆಮೆರಾದ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗ್ರಾಹಕರೊಬ್ಬರಿಗೆ ಈ ದೋಸೆಯನ್ನು ನೀಡಿದಾಗ ಇತರ ಗ್ರಾಹಕರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನೂ ತೋರಿಸಲಾಗಿದೆ. ಅದರ ಅದ್ಭುತ ಗಾತ್ರವನ್ನು ಮೆಚ್ಚಿಸಲು ಮತ್ತು ಊಟದ ಅನುಭವವನ್ನು ಕೆಮರಾದಲ್ಲಿ ಸೆರೆಹಿಡಿಯಲು ಅವರು ಎದ್ದುನಿಂತು ದೋಸೆ ಮೇಜಿನ ಬಳಿಗೆ ಬಂದರು.
ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬ್ಲಾಗರ್ ಗೆ ಅನೇಕ ನೆಟ್ಟಿಗರು ಕಾಮೆಂಟ್ ಮೂಲಕ ಇದು ವಿಶ್ವದ ಅತಿದೊಡ್ಡ ದೋಸೆ ಎಂದು ಆಶ್ಚರ್ಯ ವ್ಯಕ್ತಪಡಿಸಿ ಹೇಳಿದ್ದಾರೆ.
ಉದ್ದದ ದೋಸೆಗಾಗಿ ಇತ್ತೀಚೆಗೆ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಪ್ರಯಾಣಿಕ ಕ್ರಿಶ್ಚಿಯನ್ ಬ್ರೂಕಿ, ಜನರು ಕೌಲಾಲಂಪುರದ ರೆಸ್ಟೋರೆಂಟ್‌ನಿಂದ ಎರಡು ಡಾಲರ್‌ಗಳಿಗಿಂತ ಕಡಿಮೆ ಬೆಲೆಗೆ ಈ ದೋಸೆಯನ್ನು ಆರ್ಡರ್ ಮಾಡ ಬಹುದು ಎಂದು ಹೇಳಿದ್ದಾರೆ. ಅಲ್ಲದೇ ಈ ದೋಸೆಯ ರುಚಿ ನಿಜವಾಗಿಯೂ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
Viral Video : ಊಟ ಕೊಡದ್ದಕ್ಕೆ ಲಾರಿಯನ್ನೇ ಹೋಟೆಲ್‌ಗೆ ನುಗ್ಗಿಸಿದ ಕುಡುಕ ಚಾಲಕ, ಇಲ್ಲಿದೆ ವಿಡಿಯೊ
ಈ ವಿಡಿಯೋ ಸದ್ಯ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. ಈ ವರ್ಷದ ಆರಂಭದಲ್ಲಿ ಹಂಚಿಕೊಂಡ ಇದು ಈಗಾಗಲೇ 1.7 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.