ಬೆಂಗಳೂರು: ಗಣೇಶ ಚತುರ್ಥಿ 2024 ರ (Ganesh Chaturthi 2024) ಹಿನ್ನೆಲೆಯಲ್ಲಿ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣೇಶ ಹಬ್ಬದ ಮೊದಲ ದಿನದಂದು 48.30 ಲಕ್ಷ ರೂ.ಗಳ ದೇಣಿಗೆ ಪಡೆದುಕೊಂಡಿದೆ. ದೇಣಿಗೆ 48 ಲಕ್ಷ 30 ಸಾವಿರ ರೂಪಾಯಿಗಳಿಷ್ಟಿದೆ ಎಂದು ಲಾಲ್‌ಬಾಗ್ ಕಾ ರಾಜಾ ಸಾರ್ವಜನಿಕ ಗಣೇಶೋತ್ಸವ ಮಂಡಲ್‌ನ ಖಜಾಂಚಿ ಮಂಗೇಶ್ ದತ್ತಾರಾಮ್ ದಾಲ್ವಿ ಸೋಶಿಯಲ್ ಮೀಡಿಯಾಗ ಮೂಲಕ ತಿಳಿಸಿದ್ದಾರೆ. ಕಾಣಿಕೆಯನ್ನು ಎಣಿಸಲು ಜನರು ಸಹಾಯ ಮಾಡುವ ವೀಡಿಯೊವನ್ನುಹಂಚಿಕೊಳ್ಳಲಾಗಿದೆ. ಜನರು ಲಾಲ್‌ಬಾಗ್‌ಚಾ ರಾಜ ರಾಜಾ ಸಾರ್ವಜನಿಕ ಗಣೇಶೋತ್ಸವ ಮಂಡಲದ ಸದಸ್ಯರಾಗಿದ್ದಾರೆ.
#WATCH | Mumbai: The donations received on the first day of Ganesh Chaturthi Festival 2024 were counted at Lalbaugcha Raja Sarvajanik Ganeshotsav Mandal.
— ANI (@ANI) September 8, 2024
The donation amounted to Rs. 48 lakh 30 thousand: Mangesh Dattaram Dalvi, Treasurer, Lalbaugcha Raja Sarvajanik Ganeshotsav… pic.twitter.com/dtI6GWtIyt
ಸ್ವಯಂಸೇವಕರು ಅಥವಾ ಎಣಿಕೆ ತಂಡವು ನಾಣ್ಯಗಳು ಮತ್ತು ನೋಟುಗಳನ್ನು ಹೇಗೆ ಎಣಿಸಿದರು ಎಂಬುದನ್ನು ವೀಡಿಯೊ ತೋರಿಸುತ್ತದೆ. ಅವರು ಹಣದಿಂದ ಮಾಡಿದ ಹಾರಗಳಿಂದ ನೋಟುಗಳನ್ನು ತೆಗೆದು ಕರೆನ್ಸಿ ಮುಖಬೆಲೆಯ ನೋಟುಗಳನ್ನು ಪ್ರತ್ಯಕೇ ಮಾಡುತ್ತಿದ್ದರು.
ಎಣಿಕೆ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲಾಗಿದೆ ಇದರಿಂದ ಹೆಚ್ಚು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲಾಗಿದೆ. ವೀಡಿಯೊ ತೋರಿಸುವಂತೆ, ಹೂಮಾಲೆಗಳಿಂದ ನೋಟುಗಳನ್ನು ಬೇರ್ಪಡಿಸಲು ಮತ್ತು ಅವುಗಳನ್ನು ಕಟ್ಟುಗಳಾಗಿ ಸಂಗ್ರಹಿಸಲು ಒಂದು ತಾಣವಿದೆ. ಬಳಿಕ ದು ಎಣಿಕೆ ಕೇಂದ್ರಕ್ಕೆ ಹೋಗಿದೆ. ಅಲ್ಲಿ ಯಂತ್ರಗಳ ಮೂಲಕ ನೋಟುಗಳನ್ನು ಎಣಿಸಲಾಗುತ್ತಿತ್ತು.
ಇದನ್ನೂ ಓದಿ: Ganeshotsava Gauribidanur: ಗೌರಿಬಿದನೂರು ಬೈಪಾಸ್ ಗಣೇಶೋತ್ಸವಕ್ಕೆ 21ರ ಸಂಭ್ರಮ
ಯುಎಸ್ ಡಾಲರ್, ಸಿಂಗಾಪುರ್ ಡಾಲರ್, ಆಸ್ಟ್ರೇಲಿಯನ್ ಡಾಲರ್ ಮುಂತಾದ ವಿದೇಶಿ ಕರೆನ್ಸಿಗಳಲ್ಲಿ ದೇಣಿಗೆಗಳನ್ನು ನೀಡಲಾಗಿದೆ ಎಂದು ವೀಡಿಯೊ ತೋರಿಸಿದೆ. ಕೊನೆಯಲ್ಲಿ ಕಂಪ್ಯೂಟರ್ ವ್ಯವಸ್ಥೆ ಕಂಡುಬಂದಿದೆ.
ಬಾಲಿವುಡ್ ಸೂಪರ್‌ಸ್ಟಾರ್‌ಗಗಳು ಪ್ರಸಿದ್ಧ ಗಣೇಶೋತ್ಸವದಲ್ಲಿ ಭಾಗವಹಿಸಿದ್ದಾರೆ. ಶಾರುಖ್ ಖಾನ್, ಕಾರ್ತಿಕ್ ಆರ್ಯನ್, ವಿಕ್ಕಿ ಕೌಶಲ್, ವರುಣ್ ಧವನ್, ನೀಲ್ ನಿತಿನ್ ಮುಖೇಶ್ ಮತ್ತು ಬೊಮನ್ ಇರಾನಿ ಅವರಂತಹ ಸೆಲೆಬ್ರಿಟಿಗಳು ಸೆಪ್ಟೆಂಬರ್ 7 ರ ಶನಿವಾರ ಲಾಲ್‌ಬಾಗ್‌ಚಾ ರಾಜ ಗಣೇಶೋತ್ಸವವನ್ನು ವೀಕ್ಷಿಸಿದ್ದರು.