Thursday, 19th September 2024

Bra Varieties: ಬ್ರಾಗಳಲ್ಲಿ ಎಷ್ಟೊಂದು ವಿಧ? ಯಾರಿಗೆ ಯಾವುದು ಸೂಕ್ತ? ಇಲ್ಲಿದೆ ಸಚಿತ್ರ ಮಾಹಿತಿ!

Women Bras

ಮಹಿಳೆಯರು ಧರಿಸುವ ಒಳ ಉಡುಪುಗಳಲ್ಲಿ ಬ್ರಾ (Bra Varieties) ಕೂಡ ಮಹತ್ವದ್ದು. ಇದು ಸ್ತನಗಳ ಗಾತ್ರವನ್ನು ಸರಿಯಾದ ಆಕಾರದಲ್ಲಿ ಇಡಲು ಸಹಾಯ ಮಾಡುತ್ತದೆ. ಮಹಿಳೆಯರು ಧರಿಸುವಂತಹ ಬ್ರಾ ಅವರ ಸ್ತನಗಳ ಸೈಜ್‌ಗೆ ಸರಿಯಾಗಿದ್ದರೆ ಮಾತ್ರ ಅದರಿಂದ ದೇಹದಾಕಾರ ಆಕರ್ಷಕವಾಗಿ ಕಾಣುತ್ತದೆ. ಇಲ್ಲವಾದರೆ ಅಸಹ್ಯವಾಗಿ ಕಾಣುತ್ತದೆ. ಪ್ರತಿಯೊಬ್ಬರ ವಾರ್ಡ್ರೋಬ್‍ನಲ್ಲಿ ಹಲವು ವಿಧದ ಡ್ರೆಸ್‍ಗಳು ಇರುತ್ತವೆ. ಅವುಗಳ ಜೊತೆಗೆ ನೀವು ಧರಿಸುವಂತಹ ಡ್ರೆಸ್‍ಗಳಿಗೆ ಸರಿ ಹೊಂದುವಂತಹ ಬ್ರಾಗಳನ್ನು ನಿಮ್ಮ ವಾರ್ಡ್ರೋಬ್‍ನಲ್ಲಿ ಇಟ್ಟುಕೊಳ್ಳಿ. ಇದು ಒಟ್ಟಾರೆಯಾಗಿ ನಿಮ್ಮ ಡ್ರೆಸ್‍ಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡುತ್ತದೆ. ಹಾಗಾದ್ರೆ ನೀವು ನಿಮ್ಮ ಡ್ರೆಸ್‍ಗೆ ಸರಿಹೊಂದುವಂತಹ ಕೆಲವು ಬ್ರಾಗಳ ಬಗ್ಗೆ ತಿಳಿದುಕೊಳ್ಳಿ.

Women Bras

ಟಿ-ಶರ್ಟ್ ಬ್ರಾ

ಟಿ-ಶರ್ಟ್ ಬ್ರಾ ತುಂಬಾ ಮೃದುವಾಗಿರುತ್ತದೆ. ಯಾವುದೇ ಲೇಸ್ ಡಿಸೈನ್‌ಗಳನ್ನು ಹೊಂದಿರುವುದಿಲ್ಲ. ಇದರ ಫಿನಿಶಿಂಗ್‌ ತುಂಬಾ ಚೆನ್ನಾಗಿರುವುದರಿಂದ ಇದನ್ನು ಹೆಚ್ಚಿನ ಡ್ರೆಸ್‍ಗಳ ಒಳಗೆ ಧರಿಸಲು ಸೂಕ್ತವಾಗಿದೆ. ಹಾಗೆಯೇ ಇದರಲ್ಲಿ ನಿಮ್ಮ ಎದೆಯ ಗಾತ್ರಕ್ಕೆ ಬೇಕಾದ ಹಾಗೇ ಸರಿಹೊಂದಿಸಿಕೊಳ್ಳಬಹುದು.

Women Bras

ಡೆಮಿ ಬ್ರಾ

ಡೆಮಿ ಬ್ರಾ ಒಳ್ಳೆಯ ಆಕಾರವನ್ನು ಹೊಂದಿರುತ್ತದೆ. ಈ ಬ್ರಾಗಳು ಅರ್ಧದಷ್ಟು ಸ್ತನಗಳನ್ನು ಮಾತ್ರ ಮುಚ್ಚುತ್ತವೆ. ಅವು ನಿಮಗೆ ನೈಸರ್ಗಿಕ ನೋಟವನ್ನು ನೀಡುತ್ತವೆ. ಮತ್ತು ಇದು ಡ್ರೆಸ್‍ನ ಮೇಲಿನಿಂದ ಹೆಚ್ಚು ಸ್ಪಷ್ಟವಾಗಿ ಕಾಣಿಸುವುದಿಲ್ಲ.

ಇದನ್ನು ವಿಶೇಷವಾಗಿ ನೀವು ನೆಕ್‌ಲೈನ್ ಇರುವಂತಹ ಉಡುಪುಗಳ ಜೊತೆಗೆ ಧರಿಸಬಹುದು. ಡೆಮಿ ಬ್ರಾಗಳನ್ನು ವಿವಿಧ ರೀತಿಯಲ್ಲಿ ಬಳಸಬಹುದು.

Women Bras

ಸ್ಟ್ರಾಪ್‌ಲೆಸ್ ಬ್ರಾ

ಹೆಸರೇ ಸೂಚಿಸುವಂತೆ, ಈ ಬ್ರಾಗಳಲ್ಲಿ ಸ್ಟ್ರಾಪ್ ಇರುವುದಿಲ್ಲ. ಇದು ಡೆಮಿ ಬ್ರಾದಂತಹ ಕಪ್ ಅನ್ನು ಹೊಂದಿರುತ್ತದೆ ಮತ್ತು ಕಡಿಮೆ ನೆಕ್‌ಲೈನ್ ಇರುತ್ತದೆ. ಟ್ಯೂಬ್ ಡ್ರೆಸ್‍ಗಳು, ಆಫ್-ಶೋಲ್ಡರ್ ಟಾಪ್‍ಗಳು ಮತ್ತು ಇತರ ಸ್ಟ್ರಾಪ್‌ಲೆಸ್ ಡ್ರೆಸ್‌ಗಳೊಂದಿಗೆ ಧರಿಸಲು ಇವು ಉತ್ತಮವಾಗಿವೆ.

ಅವು ನಾನ್ ಪ್ಯಾಡ್ ವಿಧದಲ್ಲಿಯೂ ಸಿಗುತ್ತವೆ. ಇದನ್ನು ಬ್ಯಾಂಡೂ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಬ್ಯಾಂಡೂ ಬ್ರಾಗಳನ್ನು ಸ್ಟ್ಯಾಂಡ್ಅಲೋನ್ ಟಾಪ್‍ಗಳು ಮತ್ತು ಬ್ಲೇಜರ್‌ಗಳು ಮತ್ತು ಜಾಕೆಟ್‍ಗಳ ಒಳಗೆ ಇದನ್ನು ಧರಿಸಿದರೆ ಉತ್ತಮವಾಗಿ ಕಾಣಿಸುತ್ತದೆ.

Women Bras

ಪ್ಲಂಗಿಂಗ್ ಬ್ರಾ

ಈ ಬ್ರಾಗಳು ಕಡಿಮೆ ನೆಕ್‌ಲೈನ್ ಅನ್ನು ಹೊಂದಿರುತ್ತವೆ. ಅವು ಸ್ತನಗಳನ್ನು ಸಂಪೂರ್ಣವಾಗಿ ಮುಚ್ಚುತ್ತವೆ. ನೀವು ಡೀಪ್ ನೆಕ್‌ಲೈನ್ ಹೊಂದಿರುವ ಡ್ರೆಸ್ ಅಥವಾ ಟಾಪ್ ಧರಿಸಲು ಬಯಸಿದಾಗ ಈ ಬ್ರಾ ಧರಿಸಿದರೆ ಉತ್ತಮವಾಗಿರುತ್ತದೆ. ಅವು ಲೇಸ್, ನಾನ್-ಪ್ಯಾಡೆಡ್‌ ಮತ್ತು ಪ್ಯಾಡ್‌ ರೀತಿಯಲ್ಲಿ ಲಭ್ಯ ಇರುತ್ತವೆ.

Women Bras

ಬಾಲ್ಕೊನೆಟ್ ಬ್ರಾ

ಟಿ-ಶರ್ಟ್ ಬ್ರಾ ಅಥವಾ ಡೆಮಿ ಬ್ರಾಗೆ ಹೋಲಿಸಿದರೆ ಬಾಲ್ಕೊನೆಟ್ ಬ್ರಾದಲ್ಲಿ ಕಪ್ಸ್ ಗಾತ್ರ ಕಡಿಮೆ ಇರುತ್ತದೆ. ಹಾಗಾಗಿ ಇದು ಸಣ್ಣ ಎದೆಗಳನ್ನು ಹೊಂದಿರುವ ಮಹಿಳೆಯರಿಗೆ ಹೆಚ್ಚು ಸೂಕ್ತವಾಗಿದೆ. ಕಪ್‍ಗಳ ಮೇಲ್ಭಾಗದಲ್ಲಿ ಸಮತಲವಾದ ಕಟ್ ಹೊಂದಿರುವುದರಿಂದ ಅದು ಸ್ತನಗಳನ್ನು ಎತ್ತುತ್ತದೆ ಮತ್ತು ಅದು ನೈಸರ್ಗಿಕವಾದ ನೋಟವನ್ನು ನೀಡುತ್ತದೆ. ಈ ಬ್ರಾಗಳು ಡೀಪ್‌ನೆಕ್ ಹೊಂದಿರುವ ಉಡುಪುಗಳೊಂದಿಗೆ ಬಳಸಲು ಉತ್ತಮವಾಗಿವೆ.

Women Bras

ಬ್ರಾಲೆಟ್ ಬ್ರಾ

ಬ್ರಾಲೆಟ್ ಎಂಬುದು ವಿಶಿಷ್ಟ ರೀತಿಯ ಬ್ರಾ ಆಗಿದ್ದು, ಇದು ಯಾವುದೇ ಪ್ಯಾಡಿಂಗ್ ಇಲ್ಲದೆ ಬರುತ್ತದೆ. ಇದು ಉದ್ದವಾಗಿರುತ್ತದೆ. ಹಾಗಾಗಿ ಇದನ್ನು ಧರಿಸಿದಾಗ ಸೊಂಟದವರೆಗೆ ಬರುತ್ತದೆ. ಇದು ಮೃದುವಾದ ಲೇಸ್‌ಗಳನ್ನು ಹೊಂದಿರುತ್ತದೆ. ಈ ಬ್ರಾಗಳಿಗೆ ಯಾವುದೇ ಅಂಡರ್ ವೈರ್‌ಗಳಿಲ್ಲ. ಇವು ತುಂಬಾ ಆರಾಮದಾಯಕವಾಗಿರುತ್ತವೆ. ಆದರೆ ಇದು ಸ್ತನಗಳಿಗೆ ಹೆಚ್ಚು ಸಪೋರ್ಟ್ ಅನ್ನು ನೀಡುವುದಿಲ್ಲ. ಬ್ರಾಲೆಟ್‌ಗಳನ್ನು ಕುಲೋಟ್‍ಗಳು, ಫ್ಲೇರ್ಡ್ ಲೆಗ್ ಮತ್ತು ಮಾಮ್ ಪ್ಯಾಂಟ್‌ಗಳೊಂದಿಗೆ ಟಾಪ್‍ಗಳಂತೆ ಧರಿಸಬಹುದು.

Women Bras

ಪುಶ್-ಅಪ್ ಬ್ರಾ

ಹೆಸರೇ ಸೂಚಿಸುವಂತೆ, ಈ ಬ್ರಾ ಸ್ತನಗಳನ್ನು ಎತ್ತಲು ಮತ್ತು ಸ್ತನಗಳಿಗೆ ತುಂಬಾ ಸಫೋರ್ಟಿವ್ ಆಗಿರುತ್ತದೆ. ಪುಶ್-ಅಪ್ ಪ್ರಕಾರದ ಈ ಬ್ರಾ ಕಪ್‍ನ ಕೆಳಭಾಗದಲ್ಲಿ ಹೆಚ್ಚುವರಿ ಜೆಲ್ ಅಥವಾ ಫೋಮ್ ಪ್ಯಾಡಿಂಗ್ ಅನ್ನು ಹೊಂದಿರುತ್ತದೆ. ಇದು ಸ್ತನಗಳನ್ನು ಮೇಲಕ್ಕೆ ಎತ್ತಲು ಸಹಾಯ ಮಾಡುತ್ತದೆ. ಆದರೆ ಮಧ್ಯಮ ಹಾಗೂ ಭಾರವಾದ ಎದೆಗಳನ್ನು ಹೊಂದಿರುವ ಮಹಿಳೆಯರು ಇವುಗಳನ್ನು ಧರಿಸದಿರುವುದು ಒಳಿತು.

Women Bras

ಸ್ಪೋರ್ಟ್ಸ್ ಬ್ರಾ

ಕ್ರೀಡೆಗಳನ್ನು ಆಡುವಾಗ ಅಥವಾ ಇತರ ಯಾವುದೇ ಕಠಿಣವಾದ ದೈಹಿಕ ಚಟುವಟಿಕೆಗಳ ಸಮಯದಲ್ಲಿ ಬೇರೆ ಬ್ರಾಗಳು ಆರಾಮದಾಯಕವಾಗಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಿಮಗೆ ಆರಾಮವನ್ನು ಒದಗಿಸುವಂತಹ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಪೋರ್ಟ್ಸ್ ಬ್ರಾಗಳನ್ನು ಧರಿಸುವುದು ಒಳ್ಳೆಯದು. ಇವು ಹೆಚ್ಚಾಗಿ ಬೆವರನ್ನು ಹೀರಿಕೊಳ್ಳುವ ಮತ್ತು ಸುಲಭವಾಗಿ ಒಣಗುವ ಮೇಟಿರಿಯಲ್‌ನಿಂದ ತಯಾರಿಸಲಾಗುತ್ತದೆ. ಇದು ವಿವಿಧ ಮಟ್ಟದ ಪ್ಯಾಡಿಂಗ್ ಅನ್ನು ಹೊಂದಿದೆ.

ಇದನ್ನೂ ಓದಿ:ಅಶ್ಲೀಲ ಭಂಗಿಯಲ್ಲಿ ಯೋಗಾಸನ; ಯೋಗ ಶಿಕ್ಷಕ ಅನ್ಸಾರಿ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ


ಒಟ್ಟಾರೆ ಮಹಿಳೆಯರು ತಮ್ಮ ಸ್ತನಗಳ ಆಕಾರಕ್ಕೆ ಸರಿಹೊಂದುವಂತಹ ಬ್ರಾಗಳನ್ನು ಧರಿಸಿ ಆಕರ್ಷಕ ನೋಟವನ್ನು ಪಡೆಯಿರಿ. ಇದು ನಿಮಗೆ ಆರಾಮದಾಯಕವಾಗಿರುತ್ತದೆ. ಹಾಗಾಗಿ ಸರಿಯಾದ ಬ್ರಾ ಧರಿಸುವುದರಿಂದ ನಿಮಗೆ ಯಾವುದೇ ಪಾರ್ಟಿ ಫಂಕ್ಷನ್ ಗಳಲ್ಲಿ ಡ್ರೆಸ್‍ನಿಂದ ಕಿರಿಕಿರಿಯಾಗುವುದಿಲ್ಲ.