Friday, 20th September 2024

Murder case: ಗುಂಡು ಹಾರಿಸಿ ಬಿಜೆಪಿ ಮುಖಂಡನ ಕೊಲೆ

bjp leader killed

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಗುಂಡು ಹಾರಿಸಿ ಬಿಜೆಪಿ ಮುಖಂಡರೊಬ್ಬರನ್ನು (BJP leader Murder case) ಕೊಲೆ ಮಾಡಲಾಗಿದೆ. ಚಿನ್ನದ ಸರ ಕಸಿಯಲು ಯತ್ನಿಸಿದ ದುಷ್ಕರ್ಮಿಗಳನ್ನು ತಡೆಯಲು ಮುಂದಾದ ಬಿಜೆಪಿ ಮುಖಂಡನ ಮೇಲೆ ಗುಂಡು ಹಾರಿಸಿ ಪಾತಕಿಗಳು ಪರಾರಿಯಾಗಿದ್ದಾರೆ.

ಪಾಟ್ನಾ ನಗರದ ಮಂಗಲ್ ತಲಾಬ್ ಬಳಿಯ ಮನೋಜ್ ಕಮಾಲಿಯಾ ಗೇಟ್ ಬಳಿ ಈ ಘಟನೆ ನಡೆದಿದೆ. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಬಿಜೆಪಿ ಮುಖಂಡನ ಕೊಲೆ ಸಂಭವಿಸಿದ್ದು, ಮೃತ ಮುಖಂಡನನ್ನು ಶ್ಯಾಮ್ ಸುಂದರ್ ಅಲಿಯಾಸ್ ಮುನ್ನಾ ಶರ್ಮಾ ಎಂದು ಗುರುತಿಸಲಾಗಿದೆ.

ಶ್ಯಾಮ್ ಸುಂದರ್ ಬಿಜೆಪಿಯಿಂದ ಪಾಟ್ನಾ ಸಿಟಿ ಚೌಕ್‌ನ ಮಾಜಿ ಮುನ್ಸಿಪಲ್ ಬೋರ್ಡ್ ಅಧ್ಯಕ್ಷರಾಗಿದ್ದರು. ಶ್ಯಾಮ್ ಸುಂದರ್ ಮನೋಜ್ ಕಮಾಲಿಯಾ ಗೇಟ್ ಬಳಿ ಬಂದಾಗ ಕ್ರಿಮಿನಲ್‌ಗಳು ಗುಂಡು ಹಾರಿಸಿದ್ದಾರೆ. ಮೊದಲು ಇವರು ಶ್ಯಾಮ್‌ ಬಳಿ ಇದ್ದ ಸರ ಕಸಿದುಕೊಳ್ಳಲು ಯತ್ನಿಸಿದರು ಎನ್ನಲಾಗಿದೆ. ಕುಟುಂಬಸ್ಥರು ಇವರನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮುನ್ನಾ ದೇವಸ್ಥಾನದಿಂದ ಹೊರಗೆ ಬಂದು ಯಾರೊಂದಿಗೋ ಮಾತನಾಡುತ್ತಿದ್ದರು. ಅಷ್ಟರಲ್ಲಿ ಬೈಕ್​ನಲ್ಲಿ ಬಂದ ಇಬ್ಬರು ಅವರ ಕತ್ತಿನಲ್ಲಿದ್ದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಮುನ್ನಾ ಇದನ್ನು ಪ್ರತಿಭಟಿಸಿದರು.

ದುಷ್ಕರ್ಮಿಗಳು ಬಳಿಕ ಅವರ ಮೊಬೈಲ್ ಕಿತ್ತುಕೊಂಡು ತಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಹೀಗಾಗಿ ಇದು ದರೋಡೆ ಕೃತ್ಯವೇ ಅಥವಾ ಉದ್ದೇಶಪೂರ್ವ ಕೊಲೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿ ಓದಿ: Jawhar Sircar: ವೈದ್ಯೆ ಕೊಲೆ ಕೇಸ್‌; ಮಮತಾ ವಿರುದ್ಧ ಸ್ವಪಕ್ಷದಲ್ಲೇ ಅಪಸ್ವರ- ರಾಜ್ಯಸಭೆಗೆ ಟಿಎಂಸಿ ಸಂಸದ ರಾಜೀನಾಮೆ; ರಾಜಕೀಯಕ್ಕೂ ಗುಡ್‌ಬೈ