Friday, 22nd November 2024

Viral News: ವಿಸರ್ಜನೆಯ ವೇಳೆ ಎಡವಟ್ಟು, 65 ಗ್ರಾಂ ಚಿನ್ನದ ಸರದ ಸಮೇತ ಮುಳುಗಿದ ಗಣೇಶ ಮೂರ್ತಿ!

viral news gold chain

ಬೆಂಗಳೂರು: ಗಣೇಶನ ಪ್ರತಿಮೆಯ ವಿಸರ್ಜನೆಯ (Ganesh idol immersion) ಸಂದರ್ಭ ಮಾಡಿದ ಎಡವಟ್ಟಿನಿಂದಾಗಿ, ಯುವಕರ ಗುಂಪೊಂದು ಚಿನ್ನದ ಸರದ (gold chain) ಸಮೇತ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿದೆ (Viral News). ಈ ಘಟನೆ ನಡೆದಿರುವುದು ಬೆಂಗಳೂರಿನ ದಾಸರಹಳ್ಳಿ ಸಮೀಪದ ಬಿ.ಆರ್.ಐ ಕಾಲೋನಿಯಲ್ಲಿ.

ಗಣೇಶನ ಹಬ್ಬದಲ್ಲಿ ಮೂರ್ತಿ ಪ್ರತಿಷ್ಠಾಪನೆ ವೇಳೆ ವಿನಾಯಕನ ಮೂರ್ತಿಗೆ 65 ಗ್ರಾಂ ಚಿನ್ನದ ಸರ ಹಾಕಿ ಪೂಜಿಸಲಾಗಿತ್ತು. ಆದರೆ ಮೂರ್ತಿಯ ವಿಸರ್ಜನೆ ವೇಳೆ ಚಿನ್ನದ ಸರ ತೆಗೆಯಲು ಯುವಕರ ಗುಂಪು ಮರೆತಿದೆ. ಚಿನ್ನದ ಹಾರದ ಸಮೇತ ಗಣೇಶ ಮೂರ್ತಿಯನ್ನು ಯುವಕರ ಗುಂಪು ನೀರಿನ ಟ್ಯಾಂಕರ್‌ನಲ್ಲಿ ಮುಳುಗಿಸಿದೆ. ಮೂರ್ತಿಯ ವಿಸರ್ಜನೆಯ ಬಳಿಕ ಚಿನ್ನದ ಸರ ಇದ್ದುದು ನೆನಪಾಗಿದೆ.

ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಬಿಬಿಎಂಪಿಯಿಂದ ಟ್ರಕ್ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಈ ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಗಿದೆ. ಬಳಿಕ ರಾತ್ರಿ 10 ಗಂಟೆ ವೇಳೆಗೆ ಯುವಕರಿಗೆ ಚಿನ್ನದ ಸರದ ನೆನಪಾಗಿದೆ. ತಕ್ಷಣ ಟ್ರಕ್ ಚಾಲಕ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಟ್ರಕ್ ನೀರನ್ನು ಖಾಲಿ ಮಾಡಿದ್ದ ಜಾಗದಲ್ಲಿ, ಗಣೇಶ ಮೂರ್ತಿ ಕರಗಿದ್ದ ಮಣ್ಣಿನಲ್ಲಿ ಯುವಕರು ರಾತ್ರಿಯಿಡೀ ಚಿನ್ನದ ಸರಕ್ಕಾಗಿ ಹುಡುಕಾಡಿದ್ದಾರೆ. ಬೆಳಗಿನ ಜಾವ ಚಿನ್ನದ ಸರ ಸಿಕ್ಕಿದೆ. 65 ಗ್ರಾಂ ಚಿನ್ನದ ಸರ ಸದ್ಯ ಸಿಕ್ಕಿತಲ್ಲ ಎಂದು ಯುವಕರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸುದ್ದಿ ಓದಿ: Vasant Nadiger: ಚುರುಕಾದ ಶೀರ್ಷಿಕೆಯ ಮೋಡಿಗಾರ, ಹಿರಿಯ ಪತ್ರಕರ್ತ ʼನಾಡಿʼ ವಸಂತ ನಾಡಿಗೇರ ಇನ್ನಿಲ್ಲ