Sunday, 10th November 2024

Kolkata Tour: ಕೊಲ್ಕತ್ತಾಗೆ ಭೇಟಿ ನೀಡಿದಾಗ ಈ ಪ್ರಸಿದ್ಧ ಮಾರುಕಟ್ಟೆ ನೋಡುವುದನ್ನು ಮಿಸ್‌ ಮಾಡಿಕೊಳ್ಳಬೇಡಿ!

Kolkata Tour

ಕೊಲ್ಕತ್ತಾ (Kolkata Tour) ವಸಾಹತುಶಾಹಿ ವಾಸ್ತುಶಿಲ್ಪಕ್ಕೆ ಮಾತ್ರವಲ್ಲದೆ ಕುಶಲಕರ್ಮಿಗಳಿಂದ ತುಂಬಿರುವ ಒಂದು ಪ್ರಸಿದ್ಧ ಪ್ರದೇಶವಾಗಿದೆ. ಇಲ್ಲಿ ಅನೇಕ ಕುಶಲಕರ್ಮಿಗಳು ತಯಾರಿಸಿದ  ಕರಕುಶಲ ವಸ್ತುಗಳು ಸಿಗುವಂತಹ ಮಾರುಕಟ್ಟೆಗಳಿವೆ. ಇಲ್ಲಿ ಅಪ್ರತಿಮವಾದ ಸಾಂಪ್ರದಾಯಿಕ ಟೆರಾಕೋಟಾ ಕುಂಬಾರಿಕೆಯಿಂದ ಹಿಡಿದು ಸಂಕೀರ್ಣವಾದ ಕಾಂತಾ ಕಸೂತಿಯವರೆಗೆ ಕಣ್ತುಂಬಿಕೊಳ್ಳಬಹುದು. ಈ ಗದ್ದಲದಿಂದ ತುಂಬಿರುವ ಮಾರುಕಟ್ಟೆಗಳು ಕೋಲ್ಕತ್ತಾದ ಸಂಸ್ಕೃತಿಯ ಬಗ್ಗೆ ಅನಾವರಣಗೊಳಿಸುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ವಿಶೇಷವಾದ ಕರಕುಶಲ ವಸ್ತುಗಳನ್ನು ಖರೀದಿಸಲು ಬಯಸುವವರು ರಜಾ ದಿನಗಳಲ್ಲಿ ಬಿಡುವು ಮಾಡಿಕೊಂಡು ಕೋಲ್ಕತ್ತಾದ ಈ ಮಾರುಕಟ್ಟೆಗಳಿಗೆ ಭೇಟಿ ನೀಡಿ.  ಕೋಲ್ಕತ್ತಾದ ಕರಕುಶಲತೆ ಮತ್ತು ಕಲಾತ್ಮಕತೆಯನ್ನು ಪ್ರದರ್ಶಿಸುವ ಕೆಲವು ಗಮನಾರ್ಹ ಮಾರುಕಟ್ಟೆಗಳು ಯಾವುದೆಂಬುದನ್ನು ನೋಡೋಣ:

Kolkata Tour

1. ದಕ್ಷಿಣಪನ್ ಮಾರುಕಟ್ಟೆ

ದಕ್ಷಿಣ ಕೊಲ್ಕತ್ತಾದಲ್ಲಿರುವ ದಕ್ಷಿಣಪನ್ ಮಾರುಕಟ್ಟೆಯು ಸಾಂಪ್ರದಾಯಿಕ ಬಂಗಾಳಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ  ಒಂದು ಮಾರುಕಟ್ಟೆಯಾಗಿದೆ. ಟೆರಾಕೋಟಾ ಗೊಂಬೆಗಳು, ಜೇಡಿಮಣ್ಣಿನ ಪ್ರತಿಮೆಗಳು, ಬಾಟಿಕ್ ಬಟ್ಟೆಗಳು ಮತ್ತು ಕಾಂತಾವರ್ಕ್ ಸೀರೆಗಳನ್ನು ಇಲ್ಲಿ ಕಾಣಬಹುದು. ಆದ್ದರಿಂದ ಇದು ಪ್ರವಾಸಿಗರು ಮತ್ತು ಸ್ಥಳೀಯರನ್ನು ಹೆಚ್ಚು ತನ್ನ ಕಡೆಗೆ ಸೆಳೆಯುತ್ತದೆ.

Kolkata Tour

2. ನ್ಯೂ ಮಾರ್ಕೆಟ್‌

ಕೊಲ್ಕತ್ತಾದ ಅತ್ಯಂತ ಹಳೆಯ ಮತ್ತು ಜನನಿಬಿಡ ಮಾರುಕಟ್ಟೆಗಳಲ್ಲಿ ಒಂದಾದ ಈ ಮಾರುಕಟ್ಟೆಯನ್ನು ಹಾಗ್ ಮಾರ್ಕೆಟ್ ಎಂದೂ ಕರೆಯುತ್ತಾರೆ. ಇಲ್ಲಿ ಎಲ್ಲಾ ವಿಧದ ಕರಕುಶಲ ವಸ್ತುಗಳು ಸಿಗುತ್ತವೆ. ಬಟ್ಟೆಗಳಿಂದ ಎಲೆಕ್ಟ್ರಾನಿಕ್ಸ್‌ವರೆಗೆ ವಿವಿಧ ವಸ್ತುಗಳನ್ನು ನೀಡುವ ಮಳಿಗೆಗಳ ಜೊತೆಗೆ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಹೊಂದಿದೆ. ಕೋಲ್ಕತ್ತಾದ ಸಂಸ್ಕೃತಿಯ ವೈವಿಧ್ಯಮಯವನ್ನು ಎತ್ತಿ ತೋರಿಸುವ ಡೋಕ್ರಾ ಮೆಟಲ್ ವರ್ಕ್ ಉತ್ಪನ್ನಗಳು, ಸೆಲ್ ಮತ್ತು ಬೋನ್ ಆಭರಣಗಳು ಮತ್ತು ಕೈಮಗ್ಗ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತದೆ.

Kolkata Tour

3. ಕಾಲೇಜ್ ಸ್ಟ್ರೀಟ್ ಮಾರ್ಕೆಟ್

ಕಾಲೇಜ್ ಸ್ಟ್ರೀಟ್ ಮಾರುಕಟ್ಟೆಯು ಪುಸ್ತಕದಂಗಡಿಗಳಿಗೆ ಹೆಸರುವಾಸಿಯಾಗಿದೆ. ಅಲ್ಲಿ ವಿದ್ಯಾರ್ಥಿಗಳಿಗೆ ಹಲವು ರೀತಿಯ ಪುಸ್ತಕಗಳು ಸಿಗುತ್ತದೆ. ಹಾಗೇ ಇಲ್ಲಿ ಕರಕುಶಲ ವಸ್ತುಗಳನ್ನು ಮಾರುವ ಅಂಗಡಿಗಳು ಕೂಡ ಇವೆ. ನೀವು ಪುಸ್ತಕ ಮಳಿಗೆಗಳ ಮೂಲಕ ನಡೆಯುತ್ತಾ ಹೋಗುವಾಗ ಅಲ್ಲಿ ಕೈಗಳಿಂದ ತಯಾರಿಸಲಾದ ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರು ಸಿಗುತ್ತಾರೆ. ಆದ್ದರಿಂದ ಇಲ್ಲಿ ನೀವು ಕೈಯಿಂದ ತಯಾರಿಸಿದ ಚರ್ಮದ ವಸ್ತುಗಳನ್ನು ಅಥವಾ ಮರದ ಕಲಾಕೃತಿಗಳನ್ನು ಅಥವಾ ಸಾಂಪ್ರದಾಯಿಕ ವರ್ಣಚಿತ್ರಗಳನ್ನು ಖರೀದಿಸಬಹುದು.

4. ಗರಿಯಾಹತ್ ಮಾರುಕಟ್ಟೆ

ಕೊಲ್ಕತ್ತಾದಲ್ಲಿ ಸಾಂಪ್ರದಾಯಿಕ ವಸ್ತುಗಳನ್ನು ಖರೀದಿಸಲು ಈ ಮಾರುಕಟ್ಟೆಗೆ ಭೇಟಿ ನೀಡಿ. ಈ ಮಾರುಕಟ್ಟೆಯಲ್ಲಿ ಮುಖ್ಯವಾಗಿ ಬಟ್ಟೆ ಮತ್ತು ಪರಿಕರಗಳನ್ನು ಮಾರಾಟ ಮಾಡುತ್ತಿದ್ದರೂ ಸಹ, ಅದರೊಳಗೆ ಕೆಲವು ಕರಕುಶಲ ಮಾರಾಟಗಾರರ ಮಳಿಗೆಗಳನ್ನು ನೀವು ಕಾಣಬಹುದು. ಕಿರಿದಾದ ಗಲ್ಲಿಗಳ ಮೂಲಕ ನಡೆದರೆ, ಸಂಕೀರ್ಣವಾಗಿ ನೇಯ್ದ ಜಮ್ದಾನಿ ಸೀರೆಗಳು, ಬೆಳ್ಳಿಯಿಂದ ಮಾಡಿದ ಸೂಕ್ಷ್ಮವಾದ ಫಿಲಿಗ್ರೀ ಆಭರಣಗಳು ಮತ್ತು ಉತ್ತಮವಾಗಿ ಕೆತ್ತಲಾದ ಶ್ರೀಗಂಧದ ವಸ್ತುಗಳನ್ನು ಪ್ರದರ್ಶಿಸುವ ಅಂಗಡಿಗಳನ್ನು ಕಾಣಬಹುದು.

5. ಚೌರಿಂಗೀ ಲೇನ್

ಚೌರಿಂಗಿಯ ಜನನಿಬಿಡ ಬೀದಿಗಳ ನಡುವೆ ಇರುವ ಈ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಕರಕುಶಲ ವಸ್ತುಗಳನ್ನು ನೋಡಬಹುದು. ಇಲ್ಲಿನ ವಿಶಿಷ್ಟ ಮಳಿಗೆಗಳು ಬಿಹಾರದ ಮಧುಬನಿ ವರ್ಣಚಿತ್ರಗಳು, ಒಡಿಶಾದ ಬುಡಕಟ್ಟು ಕಲೆ, ಬಂಗಾಳದ ಸಾಂಪ್ರದಾಯಿಕ ಡೋಕ್ರಾ ಪ್ರತಿಮೆಗಳು ಮತ್ತು ಇತರ ವಸ್ತುಗಳಿಂದ ತುಂಬಿವೆ. ಮೈದಾನ್ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಬಳಿ ಇರುವ ಈ ಮಾರುಕಟ್ಟೆಯು ಕೋಲ್ಕತ್ತಾದಲ್ಲಿ ವಿಶೇಷವಾಗಿ ಪ್ರವಾಸಿಗರು ಭೇಟಿ ನೀಡಲೇಬೇಕಾದ ತಾಣಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಸಾರಾ ಅಲಿಖಾನ್ ಫಿಟ್‌ನೆಸ್‌ಗೆ ಫ್ಯಾನ್ಸ್‌ ಫಿದಾ! ವಿಡಿಯೊ ನೋಡಿ

ಹಾಗಾಗಿ ರಜಾದಿನಗಳಲ್ಲಿ ಕೋಲ್ಕತ್ತಾಗೆ ಭೇಟಿ ನೀಡಿದರೆ ಈ ಮಾರುಕಟ್ಟೆಗಳಿಗೆ ಹೋಗಿ ಸುತ್ತಾಡಿ. ಇಲ್ಲಿ ಕಾಣಸಿಗುವಂತಹ ವಸ್ತುಗಳು ನಿಮ್ಮ ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಹಾಗೇ ಯಾವುದನ್ನು ಖರೀದಿಸಬೇಕು, ಯಾವುದನ್ನು ಬಿಡಬೇಕು ಎಂದು ನಿಮಗೆ ತಿಳಿಯುವುದಿಲ್ಲ. ಅಷ್ಟೋಂದು ಅದ್ಭುತವಾದ ಮಾರುಕಟ್ಟೆಗಳಿವೆ.