Friday, 20th September 2024

Hair Growth Tea: ನೀಳ ಕೇಶರಾಶಿ ನಿಮ್ಮದಾಗಬೇಕೆ? ಈ ಚಹಾ ಟ್ರೈ ಮಾಡಿ ನೋಡಿ!

Hair Growth Tea

ಬೆಂಗಳೂರು: ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಕೂದಲಿನ ಸಮಸ್ಯೆಗಳು ಕಾಡುತ್ತವೆ. ಪಿಸಿಒಡಿ ಇರುವವರಿಗೆ ಹಾರ್ಮೋನ್ ಅಸಮತೋಲನದಿಂದ ನೆತ್ತಿಯ ಮೇಲಿನ ಕೂದಲು ಉದುರುತ್ತದೆ. ಗಲ್ಲ, ಬೆನ್ನು ಮತ್ತು ಮೇಲಿನ ತುಟಿಗಳಂತಹ ಪ್ರದೇಶಗಳಲ್ಲಿ ಕೂದಲು (Hair Growth Tea) ಬೆಳೆಯುತ್ತವೆ. ಇದು ನಿಮ್ಮ ಸೌಂದರ್ಯವನ್ನು ಹಾಳುಮಾಡುತ್ತದೆ. ನಮ್ಮ ದೇಹದಲ್ಲಿರುವ ಆಲ್ಫಾ-ರಿಡಕ್ಟೇಸ್ ಎಂಬ ಕಿಣ್ವವು ಟೆಸ್ಟೋಸ್ಟೆರಾನ್ ಅನ್ನು ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಆಗಿ ಪರಿವರ್ತಿಸುತ್ತದೆ. ಇದು ನೆತ್ತಿಯಲ್ಲಿ ಕೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ ಮತ್ತು ಬೇರೆಡೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಆದರೆ ಭಯಪಡಬೇಡಿ. ಏಕೆಂದರೆ ಆಹಾರ ತಜ್ಞ ಮನ್ಪ್ರೀತ್, ಇನ್ಸ್ಟಾಗ್ರಾಮ್ ಪುಟ ‘ವುಮೆನ್‍ಹೆಲ್ತ್.ಪಿಸಿಒಎಸ್‌ನಲ್ಲಿ ನೈಸರ್ಗಿಕ ಪರಿಹಾರವನ್ನು ನೀಡಿದ್ದಾರೆ. ಅದೇನೆಂದರೆ ಹೇರ್ ಗ್ರೋತ್ ಟೀ. ಮೆಂತ್ಯ ಬೀಜಗಳು, ಸಿಲೋನ್ ದಾಲ್ಚಿನ್ನಿ ಮತ್ತು ಗ್ರೀನ್ ಟೀನಂತಹ ಉತ್ತಮ ಪದಾರ್ಥಗಳನ್ನು ಒಳಗೊಂಡಿರುವ ಈ ಚಹಾವು ಇನ್ಸುಲಿನ್ ಪ್ರತಿರೋಧವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು. ಹಾಗಾದ್ರೆ ಈ ಚಹಾ ಕೂದಲಿನ ಬೆಳವಣಿಗೆಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯಿರಿ.

ಮೆಂತ್ಯ ಬೀಜಗಳು

ಅಮೈನೋ ಆಮ್ಲಗಳಿಂದ ಸಮೃದ್ಧವಾಗಿರುವ ಮೆಂತ್ಯ ಬೀಜಗಳು ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ ಮತ್ತು ಜೀವಕೋಶಗಳಿಂದ ಗ್ಲೂಕೋಸ್ ಬಳಕೆಯನ್ನು ಹೆಚ್ಚಿಸುತ್ತವೆ. ಪಿಸಿಒಡಿಯಲ್ಲಿ ಸಾಮಾನ್ಯ ಸಮಸ್ಯೆಯಾಗಿರುವಂತಹ ಇನ್ಸುಲಿನ್ ಪ್ರತಿರೋಧವನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ.

ಸಿಲೋನ್ ದಾಲ್ಚಿನ್ನಿ

ಸಿಲೋನ್ ದಾಲ್ಚಿನ್ನಿ ಜೀವಕೋಶಗಳಿಂದ ಗ್ಲೂಕೋಸ್ ತೆಗೆದುಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ, ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಮತ್ತಷ್ಟು ಸಹಾಯ ಮಾಡುತ್ತದೆ.

ಗ್ರೀನ್ ಟೀ

ಕ್ಯಾಟೆಚಿನ್‌ನಿಂದ ತುಂಬಿರುವ ಗ್ರೀನ್ ಟೀ ಜೀವಕೋಶಗಳಲ್ಲಿ ಇನ್ಸುಲಿನ್ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುತ್ತದೆ, ಒಟ್ಟಾರೆ ಇನ್ಸುಲಿನ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಹಾಗಾದ್ರೆ ಈ ಚಹಾ ತಯಾರಿಸುವ ವಿಧಾನ ತಿಳಿದುಕೊಳ್ಳಿ:
ನಿಮಗೆ ಹೆಚ್ಚು ಪ್ರಯೋಜನವಾಗಬೇಕೆಂದರೆ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಿಗ್ಗೆ ಒಂದು ಪಾತ್ರೆಯಲ್ಲಿ, ನೀರನ್ನು ಕುದಿಸಿ. ಅದಕ್ಕೆ ನೆನೆಸಿದ ಮೆಂತ್ಯ ಬೀಜಗಳು ಮತ್ತು ಒಂದು ಚಿಟಿಕೆ ಸಿಲೋನ್ ದಾಲ್ಚಿನ್ನಿಯನ್ನು ಸೇರಿಸಿ, ನಂತರ ಈ ಪ್ರಮಾಣವು ಅರ್ಧದಷ್ಟು ಬರುವವರೆಗೆ ಕುದಿಸಿ. ಈ ಮಿಶ್ರಣವನ್ನು ಒಂದು ಕಪ್‍ಗೆ ಸೋಸಿ ಮತ್ತು ಗ್ರೀನ್ ಟೀ ಬ್ಯಾಗ್ ಸೇರಿಸಿ ಸರಿಯಾಗಿ ಮಿಕ್ಸ್ ಆಗಲು ಸುಮಾರು 5 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ಕುಡಿಯಿರಿ ಮತ್ತು ದಟ್ಟವಾದ ಉದ್ದವಾದ ಕೂದಲನ್ನು ಪಡೆಯಿರಿ.

ಇದನ್ನೂ ಓದಿ: ಸಾರಾ ಅಲಿಖಾನ್ ಫಿಟ್‌ನೆಸ್‌ಗೆ ಫ್ಯಾನ್ಸ್‌ ಫಿದಾ! ವಿಡಿಯೊ ನೋಡಿ

ಈ ರೀತಿಯಲ್ಲಿ ಕೂದಲಿನ ಬೆಳವಣಿಗೆಗೆ ಸಹಕಾರಿಯಾದ ಚಹಾ ತಯಾರಿಸಿ ಪ್ರತಿದಿನ ಒಂದು ಕಪ್ ಚಹಾ ಸೇವಿಸಿ. ಇದರಿಂದ ಪಿಸಿಒಡಿಯಿಂದ ಕೂದಲುದುರುವ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇದರಿಂದ ಆರೋಗ್ಯಕರವಾದ ಕೂದಲು ನಿಮ್ಮದಾಗುತ್ತದೆ.