Saturday, 23rd November 2024

Migraine Problem in Children: ನಿಮ್ಮ ಮಗು ತಲೆನೋವಿನಿಂದ ಬಳಲುತ್ತಿದೆಯೆ? ಈ ಸಂಗತಿ ತಿಳಿದಿರಲಿ

Migraine Problem

ಬೆಂಗಳೂರು: ಮೈಗ್ರೇನ್ ಸಮಸ್ಯೆ ಹೆಚ್ಚಾಗಿ ದೊಡ್ಡವರಲ್ಲಿ ಕಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಕೂಡ ಮೈಗ್ರೇನ್ ಸಮಸ್ಯೆ (Migraine problem in Children) ಕಂಡುಬರುತ್ತಿದೆ. ಮೈಗ್ರೇನ್ ಮಕ್ಕಳ ಅಧ್ಯಯನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸರಿಸುಮಾರು 10-15% ಮಕ್ಕಳು ಮೈಗ್ರೇನ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ, ಇದು ಮಕ್ಕಳು ಶಾಲೆಗೆ ಸರಿಯಾಗಿ ಹಾಜರಾಗದಂತೆ ಮಾಡುತ್ತದೆ ಮತ್ತು ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮೈಗ್ರೇನ್ ತೀವ್ರ ತಲೆನೋವು, ವಾಕರಿಕೆ, ವಾಂತಿಗೆ ಕಾರಣವಾಗಬಹುದು. ದೀರ್ಘಕಾಲದ ಮೈಗ್ರೇನ್ ತರಗತಿಯ ಚಟುವಟಿಕೆಗಳು ಮತ್ತು ಸಾಮಾಜಿಕ ಸಂವಹನಗಳಲ್ಲಿ ಭಾಗವಹಿಸುವ ಮಕ್ಕಳ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಒಟ್ಟಾರೆ ಇದು ಮಕ್ಕಳ ಕಲಿಕೆ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸುತ್ತದೆ. ಹಾಗಾಗಿ ನಿಮ್ಮ ಮಕ್ಕಳನ್ನು ಮೈಗ್ರೇನ್ ಸಮಸ್ಯೆಯಿಂದ ಕಾಪಾಡಲು ಈ ಸಲಹೆ ಪಾಲಿಸಿ.

ನೀರು ಕುಡಿಯಲು ತಿಳಿಸಿ:
ಸಾಮಾನ್ಯವಾಗಿ ಮೈಗ್ರೇನ್‍ಗೆ ಮುಖ್ಯ ಕಾರಣ ನಿರ್ಜಲೀಕರಣ ಸಮಸ್ಯೆ. ಇದನ್ನು ತಡೆಗಟ್ಟಲು ದಿನವಿಡೀ ಮಕ್ಕಳಿಗೆ ನೀರು ಕುಡಿಯಲು ತಿಳಿಸಿ. ನಿರ್ಜಲೀಕರಣವು ತಲೆನೋವಿಗೆ ಕಾರಣವಾಗಬಹುದು ಮತ್ತು ಮೈಗ್ರೇನ್ ನೋವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ಮಕ್ಕಳು ಕನಿಷ್ಠ 8 ಲೋಟ ನೀರನ್ನು ಕುಡಿಯುವಂತೆ ನೋಡಿಕೊಳ್ಳಿ ಮತ್ತು ಮಕ್ಕಳ ದೇಹವು ಚೆನ್ನಾಗಿ ಹೈಡ್ರೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

ಕೋಲ್ಡ್ ಅಥವಾ ಬೆಚ್ಚಗಿನ ಕಂಪ್ರೆಸ್ ಬಳಸಿ:
ಮೈಗ್ರೇನ್ ನೋವನ್ನು ಕಡಿಮೆ ಮಾಡಲು ಕೋಲ್ಡ್ ಅಥವಾ ಬಿಸಿ ಮಸಾಜ್ ನೀಡಿ. ಕೋಲ್ಡ್ ಪ್ಯಾಕ್‍ಗಳು ಈ ಸ್ಥಳವನ್ನು ಮರಗಟ್ಟಿಸಬಹುದು ಮತ್ತು ಉರಿಯೂತವನ್ನು ಕಡಿಮೆ ಮಾಡಬಹುದು, ಆದರೆ ಬೆಚ್ಚಗಿನ ಪ್ಯಾಕ್ ಗಳು ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತವೆ. ಹಾಗಾಗಿ ಐಸ್ ಅಥವಾ ಬಿಸಿ ನೀರನ್ನು ಬಳಸಿ ಮಕ್ಕಳಿಗೆ ತಲೆನೋವಿರುವ ಕಡೆ ಮಸಾಜ್ ನೀಡಿ.

ಸರಿಯಾದ ನಿದ್ರೆಯ ದಿನಚರಿ ಪಾಲಿಸಿ:
ಮಕ್ಕಳಿಗೆ ಪ್ರತಿದಿನ ಒಂದೇ ಸಮಯದಲ್ಲಿ ಮಲಗುವ ಮತ್ತು ಎಚ್ಚರಗೊಳ್ಳುವಂತಹ ದಿನಚರಿಯನ್ನು ರೂಡಿಸಿ. ಇದು ನಿಮ್ಮ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಮೈಗ್ರೇನ್ ಅನ್ನು ಪ್ರಚೋದಿಸುವ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ಆರೋಗ್ಯವನ್ನು ಬೆಂಬಲಿಸಲು ಮಕ್ಕಳು ಪ್ರತಿ ರಾತ್ರಿ 7-9 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡುವಂತೆ ನೋಡಿಕೊಳ್ಳಿ.

ಸ್ಕ್ರೀನ್ ಸಮಯವನ್ನು ಮಿತಿಗೊಳಿಸಿ:
ಮಕ್ಕಳು ಹೆಚ್ಚಿನ ಸಮಯವನ್ನು ಕಂಪ್ಯೂಟರ್, ಲ್ಯಾಪ್‍ಟಾಪ್, ಟಿವಿ, ಮೊಬೈಲ್ ನೋಡುವುದರಲ್ಲೇ ಕಳೆಯುತ್ತಾರೆ. ಇದು ಕಣ್ಣಿನ ಮೇಲೆ ಒತ್ತಡವನ್ನುಂಟುಮಾಡುತ್ತದೆ ಮತ್ತು ಮೈಗ್ರೇನ್ ಸಮಸ್ಯೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಮಕ್ಕಳು ಹೆಚ್ಚು ಕಂಪ್ಯೂಟರ್‌ಗಳು, ಫೋನ್‍ಗಳು ಮತ್ತು ಟಿವಿಗಳಂತಹ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸಮಯ ಕಳೆಯುವ ಸಮಯ ಕಳೆಯುವುದನ್ನು ತಡೆಯಿರಿ.

ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿಸಿ:
ಸಾಮಾನ್ಯವಾಗಿ ಮೈಗ್ರೇನ್ ಸಮಸ್ಯೆಯನ್ನು ತಡೆಯಲು ಆಳವಾದ ಉಸಿರಾಟ, ಧ್ಯಾನ ಅಥವಾ ಸೌಮ್ಯ ಯೋಗದಂತಹ ವಿಶ್ರಾಂತಿ ವಿಧಾನಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ. ಈ ತಂತ್ರಗಳು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಸ್ನಾಯುವಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತವೆ, ಮೈಗ್ರೇನ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ:ರೀಲ್‍ಗಾಗಿ ಹಾವಿನೊಂದಿಗೆ ಸರಸ! ಜೀವ ಕಳೆದುಕೊಂಡ ಯುವಕ

ಈ ರೀತಿಯಲ್ಲಿ ನಿಮ್ಮ ಮಕ್ಕಳನ್ನು ಮೈಗ್ರೇನ್ ಸಮಸ್ಯೆಯಿಂದ ನರಳುವುದನ್ನು ತಡೆಯಿರಿ. ಇದರಿಂದ ಅವರು ಅಧ್ಯಯನದ ಕಡೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತದೆ. ಹಾಗಾಗಿ ತಪ್ಪದೇ ಈ ಸಲಹೆಗಳನ್ನು ಪೋಷಕರು ಪಾಲಿಸುವುದು ಅವಶ್ಯಕ.