Friday, 22nd November 2024

Viral Video: ಮಾರುಕಟ್ಟೆಯಲ್ಲಿ ಯುವತಿಯ ಹಿಂಭಾಗ ಸ್ಪರ್ಶಿಸಿ ಕಿರುಕುಳ; ಕಾಮುಕನ ಕೃತ್ಯ ವಿಡಿಯೊದಲ್ಲಿ ಸೆರೆ

Viral Video

ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು (harassment) ತಡೆಗಟ್ಟಲು ಕಾನೂನು ಮೂಲಕ ಎಷ್ಟೇ ಪ್ರಯತ್ನ ನಡೆದರೂ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ (social media) ಇದು ನಿರಂತರ ಚರ್ಚೆಯ ವಿಷಯವಾಗುತ್ತಿದೆ. ಇದೀಗ ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಯುವತಿಗೆ ಕಿರುಕುಳ ನೀಡುತ್ತಿರುವ ವಿಡಿಯೋವೊಂದು ವೈರಲ್ (Viral Video) ಆಗಿದ್ದು, ಸಾಕಷ್ಟು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಜನನಿಬಿಡ ಮಾರುಕಟ್ಟೆಯಲ್ಲಿ ಒಬ್ಬ ವ್ಯಕ್ತಿ ಯುವತಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿ ತೃಪ್ತಿ ಪಡುವ ಜನರ ಧೈರ್ಯವನ್ನು ತೋರಿಸಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಪರಾಧಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ರಸ್ತೆ ಬದಿಯ ಅಂಗಡಿಯೊಂದರ ಮುಂದೆ ಯುವತಿಯೊಬ್ಬಳು ನಿಂತಿದ್ದಳು. ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಅವಳ ಬಳಿಗೆ ಬಂದು ಕಿರುಕುಳ ನೀಡಲು ಪ್ರಾರಂಭಿಸುತ್ತಾನೆ. ಆರಂಭದಲ್ಲಿ ಯುವತಿ ಅವನ ಉದ್ದೇಶಗಳ ಬಗ್ಗೆ ಸ್ಪಷ್ಟವಾಗಿ ತಿಳಿಯದೆ ಸುಮ್ಮನಿರುತ್ತಾಳೆ. ಆದರೆ ಅವನು ಏನು ಮಾಡುತ್ತಿದ್ದಾನೆಂದು ಅರಿತುಕೊಂಡಾಗ ಅವನಿಂದ ದೂರವಿರಲು ಪ್ರಯತ್ನಿಸುತ್ತಾಳೆ. ಏನಾಗುತ್ತಿದೆ ಎಂದು ಅವಳು ತಿಳಿದುಕೊಂಡ ತಕ್ಷಣ ಅವನು ಹಿಂದೆ ಸರಿಯುತ್ತಾನೆ. ಆದರೆ ಈ ಕೃತ್ಯವನ್ನು ಒಬ್ಬ ಪ್ರೇಕ್ಷಕ ಕೆಮರಾದಲ್ಲಿ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ವ್ಯಕ್ತಿಯ ಕೃತ್ಯ ಮತ್ತು ಅದರ ವಿರುದ್ಧ ವರ್ತಿಸದಿದ್ದಕ್ಕಾಗಿ ದೃಶ್ಯ ಸೆರೆ ಹಿಡಿದವನನ್ನು ದೂಷಿಸಿದ್ದಾರೆ.

ಒಬ್ಬ ಬಳಕೆದಾರ ಕಾಮೆಂಟ್ ಮಾಡಿ ಕಿರುಕುಳ ನೀಡುವವರ ವಿರುದ್ಧ ನಿಲ್ಲಲು ಹುಡುಗಿಯ ಅಸಮರ್ಥತೆಯು ಅಂತಹ ವ್ಯಕ್ತಿಗಳಿಗೆ ಧೈರ್ಯ ತುಂಬುತ್ತದೆ. ಅವಳು ಅವನನ್ನು ಕಪಾಳಮೋಕ್ಷ ಮಾಡಿದ್ದರೆ ಅವನು ಇದನ್ನು ಮತ್ತೆ ಮಾಡುವ ಮೊದಲು ಎರಡು ಬಾರಿ ಯೋಚಿಸಿರಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇನ್ನೊಬ್ಬರು ಕಾಮೆಂಟ್ ನಲ್ಲಿ ಮಧ್ಯಪ್ರವೇಶಿಸುವ ಬದಲು ಇಂತಹ ಘಟನೆಗಳ ವಿಡಿಯೋ ಮಾಡಿರುವವರ ವಿರುದ್ಧ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಅವನು ಅಪರಾಧ ಮಾಡುತ್ತಿದ್ದಾನೆ ಮತ್ತು ಜನರು ಕೇವಲ ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ಈ ಘಟನೆಯು ನೋಡುಗರ ಪಾತ್ರ ಮತ್ತು ಅಂತಹ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಜನರ ಜವಾಬ್ದಾರಿಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Rameshwaram Cafe blast: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ; ಬಿಜೆಪಿ ಕಚೇರಿ ಸ್ಫೋಟಕ್ಕೂ ನಡೆದಿತ್ತು ಯತ್ನ!

ಇದೇ ರೀತಿಯ ಘಟನೆಗಳಲ್ಲಿ ಬಲಿಪಶು ಪ್ರಕರಣವನ್ನು ದಾಖಲಿಸಲು ಅಥವಾ ಕಿರುಕುಳ ನೀಡುವವರನ್ನು ರಕ್ಷಿಸಲು ಆದ್ಯತೆ ನೀಡುವುದಿಲ್ಲ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ.