-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಹಬ್ಬದ ನಂತರ ಮೇಕಪ್ ರುಟೀನ್‌ಗೆ ಒಂದು ಸಣ್ಣ ಬ್ರೇಕ್ ನೀಡಿ. ಇದು ನಿರಂತರ ಮೇಕಪ್‌ನಿಂದಾಗಿ ನಿಸ್ತೇಜವಾಗುವ ತ್ವಚೆಗೆ ಒಂದಿಷ್ಟು ಸಮಯ ನೀಡಿ, ಉಸಿರಾಡಲು ಅವಕಾಶ ನೀಡಿದಂತಾಗುವುದು ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ ದಿಶಾ. ಅವರ ಪ್ರಕಾರ, ಹಬ್ಬದ ಸೀಸನ್‌ನಲ್ಲಿ ಅಂದವಾಗಿ ಕಾಣಲು ಬಾರಿಬಾರಿ ಮಾಡುವ ಮೇಕಪ್ (Makeup Tips) ತ್ವಚೆಗೆ ಧಕ್ಕೆ ಉಂಟು ಮಾಡಬಹುದು. ಹಾಗಾಗಿ, ತ್ವಚೆಯನ್ನು ಮತ್ತೊಮ್ಮೆ ಸಕ್ರಿಯವಾಗಿಸಲು ಸದ್ಯಕ್ಕೆ ಮೇಕಪ್‌ಗೆ ತಾತ್ಕಲಿಕವಾಗಿ ಬೈ ಹೇಳಿ ಎನ್ನುತ್ತಾರೆ.
ಹಬ್ಬದ ನಂತರ ತ್ವಚೆಯ ಆರೈಕೆ
ಹಬ್ಬದ ನಂತರ ತ್ವಚೆಯ ಆರೈಕೆ ಅತ್ಯವಶ್ಯ. ಹೌದು, ಹಬ್ಬದ ಪ್ರಯುಕ್ತ ಮುಖಕ್ಕೆ ಹಚ್ಚಿದ ಗ್ರ್ಯಾಂಡ್ ಅತಿಯಾದ ಮೇಕಪ್ ಹಾಗೂ ಹಬ್ಬದ ಸಿಹಿ ತಿಂಡಿ ಸೇವನೆಯಿಂದಾಗಿ ಕೆಲವರಿಗೆ ಮೊಡವೆ ಉಂಟಾಗಬಹುದು. ಇದನ್ನು ನಿಭಾಯಿಸಲು ಫೆಸ್ಟಿವ್ ಸೀಸನ್ ಮುಗಿದ ನಂತರ ಮುಖದ ಆರೈಕೆಯತ್ತ ಗಮನ ನೀಡುವುದು ಅಗತ್ಯ. ಇದು ಮತ್ತೊಮ್ಮೆ ತ್ವಚೆ ನವೋಲ್ಲಾಸದಿಂದ ಕಾಣಲು ಸಹಕರಿಸುತ್ತದೆ.
ಕ್ಲೆನ್ಸಿಂಗ್- ಟೋನಿಂಗ್-ಮಾಯಿಶ್ಚರೈಸಿಂಗ್
ತ್ವಚೆಗೆ ಹೆಚ್ಚೇನೂ ಹಚ್ಚಬೇಡಿ. ಮುಖ ತೊಳೆದ ನಂತರ ಮಾಯಿಶ್ಚರೈಸ್ ಮಾಡಿ. ಮುಖದ ತ್ವಚೆಗೆ ಉಸಿರಾಡಲು ಅವಕಾಶ ನೀಡಿ. ನಿಮ್ಮ ತ್ವಚೆಗೆ ಕ್ಲೆನ್ಸಿಂಗ್-ಟೋನಿಂಗ್ ಕೂಡ ಮಾಡಬಹುದು. ಇದು ತ್ವಚೆಯನ್ನು ರಿಲ್ಯಾಕ್ಸ್ ಆಗಿಸುತ್ತದೆ.
ಹರ್ಬಲ್ ಫೇಶಿಯಲ್
ಮೇಕಪ್ ಮಾಡಿ ನಿಮ್ಮ ತ್ವಚೆ ಒಣಗಿದಂತಾಗಿದ್ದಲ್ಲಿ, ಮನೆಯಲ್ಲಿರುವ ಹಣ್ಣುಗಳಿಂದಲೇ ಹರ್ಬಲ್ ಫೇಶಿಯಲ್ ಮಾಡಿಕೊಳ್ಳಿ. ಇಲ್ಲವೇ ಬ್ಯೂಟಿ ಪಾರ್ಲರ್‌ನಲ್ಲಿಯೂ ಇನ್‌ಸ್ಟಂಟ್ ಹರ್ಬಲ್ ಫೇಶಿಯಲ್ ಮಾಡಿಸಿಕೊಳ್ಳಬಹುದು.
ಡೆಡ್ ಸ್ಕಿನ್ ತೆಗೆಯಲು ಸ್ಕ್ರಬ್ ಬಳಸಿ
ಸ್ಕ್ರಬ್ ಬಳಕೆಯಿಂದ ಚರ್ಮದ ಮೇಲಿನ ಡೆಡ್ ಸ್ಕಿನ್ ಹೋಗುತ್ತದೆ. ಜತೆಗೆ ರಕ್ತ ಸಂಚಾರ ಸುಗಮವಾಗುತ್ತದೆ. ಹೋಮ್ ಮೇಡ್ ಸ್ಕ್ರಬ್ ಉತ್ತಮ. ಇದಕ್ಕಾಗಿ ನೀವು ಅಡುಗೆ ಮನೆಯಲ್ಲಿರುವ ಅನೇಕ ಸಾಮಗ್ರಿಗಳನ್ನು ಬಳಸಿಕೊಳ್ಳಬಹುದು. ಸಾಕಷ್ಟು ಬ್ಯೂಟಿ ಬ್ಲಾಗ್‌ಗಳಲ್ಲಿ ಈ ವಿವರಗಳನ್ನು ನೋಡಬಹುದು.
ಈ ಸುದ್ದಿಯನ್ನೂ ಓದಿ | Suburban Rail Project: ಉಪನಗರ ರೈಲು ಯೋಜನೆ; 2026ರ ಡಿಸೆಂಬರ್‌ಗೆ ಕಾರಿಡಾರ್ 2, 4 ಪೂರ್ಣ
ಇನ್‌ಸ್ಟಂಟ್ ಶೀಟ್ ಮಾಸ್ಕ್ ಬಳಕೆ
ತ್ವಚೆಯ ಫ್ರೆಂಡ್ಲಿ ಹಾಗೂ ಅಗತ್ಯ ಪೌಷ್ಟಿಕಾಂಶಗಳನ್ನು ಪೂರೈಸುವ ಶೀಟ್ ಮಾಸ್ಕ್‌ಗಳು ಬ್ಯೂಟಿ ಶಾಪ್‌ಗಳಲ್ಲಿ ದೊರೆಯುತ್ತವೆ. ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವ ಇನ್‌ಸ್ಟಂಟ್ ಶೀಟ್ ಮಾಸ್ಕ್ ಮುಖಕ್ಕೆ ಹಾಕಿ. ರಿಲ್ಯಾಕ್ಸ್ ಮಾಡಿ. ಇದು ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ.