Friday, 22nd November 2024

Bengaluru News: ತಂತ್ರಜ್ಞಾನದಿಂದ ಗ್ರಾಮೀಣರಲ್ಲೂ ಆಧುನಿಕತೆ

Bengaluru News

ಬೆಂಗಳೂರು: ಶಿಕ್ಷಣ ಸಚಿವಾಲಯ, ಎಐಸಿಟಿಇ (ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್), ಮಿನಿಸ್ಟ್ರಿ ಆಫ್ ಸ್ಕೂಲ್ ಇನ್ನೋವೇಶನ್ಸ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ನಾವಿನ್ಯತೆ, ವಿನ್ಯಾಸ ಮತ್ತು ಉದ್ಯಮಶೀಲತೆ ಕುರಿತು 2 ದಿನಗಳ ಕಾಲ ಬೂಟ್ ಕ್ಯಾಂಪ್ ಹಾಗೂ‌ ಶಿಕ್ಷಕರ ದಿನದ ಪ್ರಯುಕ್ತ ಶಿಕ್ಷಕರಿಗೆ ತಂತ್ರಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕುರಿತಾಗಿ ವಿಶೇಷ ಕಾರ್ಯಾಗಾರವನ್ನು ನಗರದ (Bengaluru News) ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪ್ರೈಮ್ ಮಿನಿಸ್ಟರ್ಸ್ ರೈಸಿಂಗ್ ಇಂಡಿಯಾ ವಿಷಯದಡಿ ಪಿಎಂಶ್ರೀ ಸ್ಕೂಲ್ಸ್ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಈ ಶಿಬಿರವನ್ನು ಜಿಜ್ (ಜರ್ಮನ್‌ ಸಂಸ್ಥೆ) ‌ ಜತೆಗೆ ವೊಕೇಶನಲ್ ಎಜುಕೇಶನ್ ಮತ್ತು ಟ್ರೈನಿಂಗ್ ಪ್ರಚಾರಕರು ಹಾಗೂ ತಾಂತ್ರಿಕ ಅಡ್ವೈಸರ್ ಜಯರಾಮ್ ತಿಮ್ಮಯ್ಯ ಉದ್ಘಾಟಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ಕೇಂದ್ರ ಸರ್ಕಾರದಿಂದ ಆಟೊ ಉದ್ದಿಮೆಗೆ ಉತ್ತೇಜನ; ಉದ್ಯೋಗವಕಾಶ ಹೆಚ್ಚಳ ನಿರೀಕ್ಷೆ

ಬಳಿಕ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಕೃಷಿಯನ್ನು ಎಲ್ಲರೂ ನಂಬಿಕೊಂಡಿದ್ದರು. ಆದರೆ ಆಗ ತಂತ್ರಜ್ಞಾನದ ಬಳಕೆ ಕಡಿಮೆ ಇತ್ತು. ಆದರೆ ಕಾಲ ಬದಲಾಗಿದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚು ಅಭಿವೃದ್ಧಿ ಹೊಂದಿದೆ. ನಾವಿಂದು ಅಂತರ್ಜಾಲಕ್ಕೆ ಕೃತಜ್ಞತೆ ಸಲ್ಲಿಸಬೇಕು. ಏಕೆಂದರೆ ಯಾವುದೇ ಸ್ಥಳ ಎನ್ನುವುದನ್ನು ಲೆಕ್ಕಿಸದೆ ಎಲ್ಲರಿಗೂ ತಂತ್ರಜ್ಞಾನವನ್ನು ಪರಿಚಯಿಸುವ ಮಹತ್ವದ ಕಾರ್ಯವನ್ನು ಅಂತರ್ಜಾಲ ಮಾಡುತ್ತಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಕೆಯ ಜತೆಗೆ ಇತ್ತೀಚಿನ ಅಭಿವೃದ್ಧಿಗಳನ್ನು ಅರಿಯುವ ಮೂಲಕ ತಮ್ಮ ಕ್ರಿಯಾಶೀಲತೆಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬಳಿಕ ಡಾ.ಎಂ.ಆರ್.ರಂಗನಾಥ್ ಮಾತನಾಡಿ, ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ಬೇಡಿಕೆಗಳ ನಡುವಿನ ಸಂಪರ್ಕ ಕಡಿತವನ್ನು ಉಲ್ಲೇಖಿಸಿದರು. ಈ ಕಾರಣಕ್ಕಾಗಿ ಇಂದಿನ ದಿನಗಳಲ್ಲಿ ಉದ್ಯೋಗದ ಸಮಸ್ಯೆಗಳು ಎದುರಾಗುತ್ತಿವೆ. ಹಾಗಾಗಿ ಅದಕ್ಕೆ ಬೇಕಾದ ತರಬೇತಿ ನೀಡಬೇಕು. ವಿಶೇಷವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ಗಳನ್ನು ಪ್ರೋತ್ಸಾಹಿಸುವುದರಿಂದ ಅಂತರವನ್ನು ಕಡಿಮೆ ಮಾಡಬಹುದು ಮತ್ತು ಸರ್ಕಾರಿ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನಿರುದ್ಯೋಗವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಎಂಸಿ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್‌ ಕೆ. ಮಾತನಾಡಿ, ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಿಎಂ ಶ್ರೀ ಎಂಒಇನ ಇನ್ನೋವೇಶನ್‌ ಸೆಲ್‌, ಸ್ಕೂಲ್ ಇನ್ನೋವೇಶನ್ ಕೌನ್ಸಿಲ್ ಮತ್ತು ವಾಧ್ವನಿ ಫೌಂಡೇಶನ್ ಬೆಂಬಲದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ವೇಳೆ ಎಎಂಸಿ ಸಂಸ್ಥೆಯು ಇಂಥದ್ದೊಂದು ವಿಶೇಷ ಶಿಬಿರ ನಡೆಸುತ್ತಿದ್ದು, ಇದರ ಕಾರಣೀಕರ್ತರಾದ ಸಂಸ್ಥೆಯ ಸಂಸ್ಥಾಪಕ ಡಾ ಕೆ.ಆರ್.‌ ಪರಮಹಂಸ ಮತ್ತು ಎಎಂಸಿ ಸಂಸ್ಥೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಹುಲ್ ಕಲ್ಲೂರಿ ಅವರ ಪ್ರಯತ್ನ ನೆನೆಯಲೇಬೇಕು ಎಂದರು.

ಈ ಸುದ್ದಿಯನ್ನೂ ಓದಿ | Invest Karnataka: ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿದ ಸಿಂಗಾಪುರ ಉದ್ಯಮಿಗಳು

ಕಾರ್ಯಕ್ರಮದಲ್ಲಿ ಎಎಂಸಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಆರ್. ಪರಮಹಂಸ, ಎಎಂಸಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಹುಲ್ ಕಲ್ಲೂರಿ, ಶೈಕ್ಷಣಿಕ ಮತ್ತು ಆಡಳಿತ, ಎಎಂಸಿ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ ಮೋಹನ್ ಬಾಬು ಜಿ.ಎನ್., ಸಿಬ್ಬಂದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.