ಬೆಂಗಳೂರು : ಸೋಮವಾರ ಆಪಲ್ ಕಂಪನಿಯು ಬಹು ನಿರೀಕ್ಷಿತ ಗ್ಲೋಟೈಮ್ ಈವೆಂಟ್‌ನಲ್ಲಿ ಆಪಲ್ 16 ಸೀರಿಸ್‌ನ ಮೊಬೈಲ್‌ಗಳನ್ನು (Apple iphone 16 ) ಬಿಡುಗೆ ಮಾಡಿವೆ. ಈ ವೇಳೆ ವಾಚ್ ಹಾಗೂ ಐಪಾಡ್‌ಗಳು ಬಿಡುಗಡೆಗೊಂಡಿವೆ. ಆದರೆ ಅದಕ್ಕಿಂತ ಮುಂಚಿತವಾಗಿ ಸೈಬರ್ ಕಳ್ಳರು ಆಪಲ್‌ನ ಯೂಟ್ಯೂಬ್ ಚಾನೆಲ್ ಅನ್ನೇ ಹ್ಯಾಕ್ ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ. ಹ್ಯಾಕ್ ಆಗಿರುವ ಯೂಟ್ಯೂಬ್‌ನಲ್ಲಿ ಆಪಲ್ ಸಿಇಒ ಟಿಮ್ ಕುಕ್ ಬಿಟ್ ಕಾಯಿನ್‌ಗೆ ಬೇಡಿಕೆ ಇಡುವ ಕೃತಕ ಬುದ್ಧಿಮತ್ತೆಯ ವಿಡಿಯೊ ಪ್ಲೇ ಆಗಿದೆ. ಟೆಕ್ ಯೂಟ್ಯೂಬರ್ ಅಭಿಷೇಕ್ ಎಂಬುವರು ಈ ಘಟನೆಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
🚨Breaking 🚨
— Abhishek Bhatnagar (@abhishek) September 9, 2024
Apple US YouTube channel hacked? There is a fake Ai video of TimCook streaming on it asking for bitcoin. 😱#AppleEvent pic.twitter.com/b2DOyhxBLL
ಸೆಪ್ಟೆಂಬರ್ 9, 2024 ರಂದು ನಡೆದ 2024 ರ ಆಪಲ್ ಈವೆಂಟ್ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಇದನ್ನು “ಇಟ್ಸ್ ಗ್ಲೋಟೈಮ್” ಎಂದು ಕರೆಯಲಾಗಿದೆ . ಈ ಕಾರ್ಯಕ್ರಮವನ್ನು ಆಪಲ್‌ನ ವೆಬ್ಸೈಟ್, ಯೂಟ್ಯೂಬ್ ಚಾನೆಲ್ ಮತ್ತು ಆಪಲ್ ಟಿವಿ ಅಪ್ಲಿಕೇಶನ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ.
ಸೋಮವಾರ, ಆಪಲ್ ಇಂಕ್ ತನ್ನ ಪ್ರಮುಖ ಉತ್ಪನ್ನವಾದ ಐಫೋನ್ 16 ನ ಇತ್ತೀಚಿನ ಆವೃತ್ತಿಯನ್ನು ಪರಿಚಯಿಸಿದೆ. ಅಂತೆಯೇ ಟಿಮ್ ಕುಕ್ ಅವರು ಫೋನ್‌ಗಳನ್ನು ಕೃತಕ ಬುದ್ಧಿಮತ್ತೆಯ ಗರಿಷ್ಠ ಬಳಕೆಗೆ ಪೂರಕವಾಗಿದೆ ಎಂದು ಹೇಳಿದ್ದರು.
ಐಫೋನ್ 16 ಮತ್ತು 16 ಪ್ಲಸ್ ಹೊಸ ಬಣ್ಣಗಳಲ್ಲಿ ಲಭ್ಯವಿದ್ದು, ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಬಟನ್ ಪಡೆದುಕೊಂಡಿದೆ. ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಪ್ರಧಾನ ಕಚೇರಿಯಿಂದ ಸೋಮವಾರ ಪ್ರಸಾರವಾದ ವಿಡಿಯೊದ ಮೂಲಕ ಆಪಲ್ ಹೊಸ ಮೊಬೈಲ್‌ಗಳ ಬಗ್ಗೆ ವಿವರಣೆ ನೀಡಿದೆ. ಕ್ಯಾಮೆರಾ ಕಂಟ್ರೋಲ್ ಬಟನ್ ಇದ್ದು ಚಿತ್ರಗಳನ್ನು ಸ್ನ್ಯಾಪ್ ಮಾಡಲು ಮತ್ತು ಕ್ಯಾಮೆರಾ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದಕ್ಕೆ ನೆರವಾಗಿದೆ.
ಆಪಲ್ ತನ್ನ ಸ್ಮಾರ್ಟ್ ವಾಚ್ ಕೂಡ ಇದೇ ವೇಳೆ ಬಿಡುಗಡೆ ಮಾಡಿದೆ. ಇದು ದೊಡ್ಡ ಸ್ಕ್ರೀನ್‌ನೊಂದಿಗೆ ಬಂದಿದ್ದು, ಸ್ಲೀಪ್ ಅಪ್ನಿಯಾವನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ಏರ್ ಪಾಡ್ ಗಳನ್ನು ಶ್ರವಣ ಸಾಧನಗಳಾಗಿ ಪರಿವರ್ತಿಸುವ ಹೊಸ ಸಾಫ್ಟ್ ವೇರ್ ಕೂಡ ಸಿದ್ದಪಡಿಸಲಾಗಿದೆ.
ಭಾರತದಲ್ಲಿ ಬೆಲೆ ಎಷ್ಟು?
ಐಫೋನ್ 16 ಆರಂಭಿಕ ಬೆಲೆ 799 ಡಾಲರ್ (ಸುಮಾರು 67,000 ರೂ.) ಮತ್ತು ಐಫೋನ್ 16 ಪ್ಲಸ್ ಬೆಲೆ 899 ಡಾಲರ್ (ಸುಮಾರು 75,500 ರೂ.) ಐಫೋನ್ 16 ಪ್ರೊ ಬೆಲೆ 128 ಜಿಬಿಗೆ 999 ಡಾಲರ್ (ಸುಮಾರು 83,870 ರೂ.) ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ 256 ಜಿಬಿಗೆ 1199 ಡಾಲರ್ (ಸುಮಾರು 1 ಲಕ್ಷ ರೂ.) ನಿಂದ ಪ್ರಾರಂಭವಾಗುತ್ತದೆ. ಇದು ಯುಎಸ್ ಮಾರುಕಟ್ಟೆಯಲ್ಲಿನ ಬೆಲೆಯಾಗಿದೆ.
ಇದನ್ನೂ ಓದಿ: Tata Motors : ಟಾಟಾ ಕಾರುಗಳು ಉತ್ಸವ ಆರಂಭ, ಎಸ್‌ಯುವಿಗಳ ಮೇಲೆ ಭರ್ಜರಿ ಆಫರ್‌ಗಳು
ಭಾರತದಲ್ಲಿ ಐಫೋನ್ 16 ಬೆಲೆ 79,900 ರೂ ಮತ್ತು ಐಫೋನ್ 16 ಪ್ಲಸ್ ಬೆಲೆ 89,900 ರೂ. ಐಫೋನ್ 16 ಪ್ರೊ ಭಾರತದಲ್ಲಿ 1,19,900 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 1,44,900 ರೂಪಾಯಿಗಳಾಗಿವೆ. ಪ್ರೀ-ಆರ್ಡರ್ ಸೆಪ್ಟೆಂಬರ್ 13 ರಂದು ಸಂಜೆ 5:30 ಕ್ಕೆ ಭಾರತದಲ್ಲಿ ಪ್ರಾರಂಭವಾಗುತ್ತದೆ. ಮೊದಲ ಮಾರಾಟ ಸೆಪ್ಟೆಂಬರ್ 20 ರಂದು ನಡೆಯಲಿದೆ.