Saturday, 23rd November 2024

Senator Controversy: ನೌಕರನನ್ನು ಲೈಂಗಿಕ ಜೀತದಾಳಾಗಿ ಬಳಸಿಕೊಂಡ ಆರೋಪ; ಕ್ಯಾಲಿಫೋರ್ನಿಯಾ ಸೆನೆಟರ್‌ ವಿರುದ್ಧ ಭುಗಿಲೆದ್ದ ವಿವಾದ

Senator Controversy

ವಾಷಿಂಗ್ಟನ್‌: ತನ್ನ ನೌಕರರನ್ನು ಒತ್ತಾಯಪೂರ್ವಕವಾಗಿ ಲೈಂಗಿಕ ಜೀತದಾಳು(Sex slave)ವನ್ನಾಗಿ ಬಳಸಿಕೊಂಡ ಆರೋಪದಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಸೆನೆಟರ್(Senator Controversy) ವಿರುದ್ಧ ಕೇಸ್‌ ದಾಖಲಾಗಿದೆ. ಕ್ಯಾಲಿಫೋರ್ನಿಯಾ ಸ್ಟೇಟ್ ಸೆನೆಟರ್ ಮೇರಿ ಅಲ್ವರಾಡೊ-ಗಿಲ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ, ಆಕೆಯ ನೌಕರನೋರ್ವ ಈ ಮೊಕದ್ದಮೆ ಹೂಡಿದ್ದು, ತನ್ನ ಮೇಲೆ ಅಲ್ವರಾಡೊ-ಗಿಲ್‌( Alvarado-Gil) ನಿರಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾನೆ.

ಚಾಡ್ ಕಂಡಿಟ್ ಎಂಬಾತ ಹೂಡಿರುವ ಈ ಮೊಕದ್ದಮೆಯು ಸೆನೆಟರ್‌ನ ಸಿಬ್ಬಂದಿಯ ಮುಖ್ಯಸ್ಥರಾಗಿ ಕೆಲಸ ಮಾಡುವಾಗ ಅಲ್ವರಾಡೊ-ಗಿಲ್ ತನ್ನನ್ನು ಸೆಕ್ಸ್‌ ಸ್ಲೇವ್‌(ಲೈಂಗಿಕ ಗುಲಾಮ)ನಾಗಿ ಬಳಸಿಕೊಂಡಿದ್ದಾರೆ. ಉದ್ಯೋಗ ಉಳಿಸಿಕೊಳ್ಳವ ಸಲುವಾಗಿ ಬೇರೆ ದಾರಿ ಇಲ್ಲದೇ ಅವರ ಒತ್ತಡಕ್ಕೆ ಮಣಿಯಬೇಕಾಗಿತ್ತು ಎಂದು ಕಾಂಡಿಡ್‌ ದೂರಿನಲ್ಲಿ ಹೇಳಿದ್ದಾರೆ.

ಅಲ್ವಾರಾಡೊ-ಗಿಲ್ ಮೌಖಿಕ ಸಂಭೋಗಕ್ಕೆ ಪ್ರಾಕ್ವಿವಿಟಿಯನ್ನು ಹೊಂದಿದ್ದಳು. ಕೆಲಸದಿಂದ ತೆಗೆದು ಹಾಕುವ ಬೆದರಿಕೆಯೊಡ್ಡಿ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಆಕೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಿರಂತರವಾಗಿ ತನ್ನ ಇಚ್ಛೆಗೆ ವಿರುದ್ಧವಾಗಿ ಆಕೆಯ ಒತ್ತಡವಾಗಿ ಮಣಿಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಎಂದು ಕಾಂಡಿಡ್‌ ಹೇಳಿದ್ದಾನೆ.

ಇನ್ನು ಅಲ್ವರಾಡೊ-ಗಿಲ್ ಹೆಚ್ಚಾಗಿ ಓರಲ್‌ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದಳು. ಕಾರು ಸೇರಿದಂತೆ ಆಕೆಗೆ ಇಚ್ಛಿಸಿದ್ದಲ್ಲಿ ಆಕೆಯ ಜತೆ ಓರಲ್‌ ಸೆಕ್ಸ್‌ ಮಾಡಬೇಕಾಗಿತ್ತು. ಇದರಿಂದ ನನಗೆ ತೀರ ಬೆನ್ನುನೋವಿನ ಸಮಸ್ಯೆ ಉಂಟಾಗಿತ್ತು. ಬೆನ್ನಿನಲ್ಲಿ ಮೂರು ಹರ್ನಿಯೇಟೆಡ್ ಡಿಸ್ಕ್‌ ಸಮಸ್ಯೆ ಎದುರುತ್ತಿದ್ದು, ಸೊಂಟ ನೋವಿನಿಂದ ಬಳಲುತ್ತಿದ್ದೇನೆ. ಕೊನೆಗೆ ಇದರಿಂದ ಹೊರ ಬರಲು ನಿರ್ಧರಿಸಿದಾಗ ಅವರು ನನ್ನನ್ನು ಕೆಲಸದಿಂದಲೇ ತೆಗೆದು ಹಾಕಿದ್ದಾರೆ.

2022 ರಲ್ಲಿ ಚುನಾಯಿತರಾದ ಅಲ್ವಾರಾಡೊ-ಗಿಲ್, ಚಾಡ್ ಕಂಡಿಟ್ ಅವರನ್ನು ತಮ್ಮ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಿಕೊಂಡರು. ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದ ನಂತರ, ಸೆನೆಟರ್ ತನ್ನ ಡೇಟಿಂಗ್ ಜೀವನ, ವಿಚ್ಛೇದನಗಳು ಮತ್ತು ವೈವಾಹಿಕ ದಾಂಪತ್ಯ ದ್ರೋಹದ ಅಂಶಗಳನ್ನು ಒಳಗೊಂಡಂತೆ ವೈಯಕ್ತಿಕ ಮತ್ತು ನಿಕಟ ವಿವರಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು. ತನ್ನ ಹೋರಾಟಗಳು ಮತ್ತು ಅಭ್ಯಾಸಗಳು, ಮಾದಕವಸ್ತು ಬಳಕೆ ಮತ್ತು ಮನರಂಜನಾ ಚಟುವಟಿಕೆಗಳನ್ನು ಸಹ ಬಹಿರಂಗವಾಗಿ ಚರ್ಚಿಸಿದ್ದರು ಎಂದು ಎಂದು ಮೊಕದ್ದಮೆ ಹೇಳುತ್ತದೆ.

ತನ್ನ ಮೇಲಾಗುತ್ತಿರುವ ದೌರ್ಜನ್ಯದಿಂದ ಹೊರ ಬರಲು ಕಾಂಡಿಡ್‌ ನಿರ್ಧರಿಸಿದಾಗ, ಕ್ಷುಲ್ಲಕ ಕಾರಣ ನೀಡಿ ಡಿಸೆಂಬರ್ 2023 ರಲ್ಲಿ ಅವರನ್ನು ಉದ್ಯೋಗದಿಂದ ತೆಗೆದು ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಅವರ ಆರೋಪವನ್ನು ಅಲ್ವಾರಾಡೊ-ಗಿಲ್ ಪರ ವಕೀಲರು ಸುಳ್ಳು ಎಂದು ಹೇಳಿದ್ದಾರೆ. ಇದೊಂದು ಹಣ ಸುಳಿಗೆ ಮಾಡುವ, ಮತ್ತು ಸೆನೆಟರ್‌ ಅವರ ಗೌರವಕ್ಕೆ ಚ್ಯುತಿ ತರುವ ಯತ್ನ ಎಂದಿದ್ದಾರೆ.

”ಅತೃಪ್ತ ಮಾಜಿ ಉದ್ಯೋಗಿಯೊಬ್ಬರು ವೇತನ ಪಡೆಯಲು ಪುರಾವೆಗಳಿಲ್ಲದೆ ವಿಲಕ್ಷಣ ಕಥೆಯನ್ನು ಕಟ್ಟಿದ್ದಾರೆ. ಹಣಕಾಸಿನ ಅವ್ಯವಹಾರದಿಂದಾಗಿ ಸೆನೆಟರ್ ಕಾಂಡಿಡ್‌ ಅವರನ್ನು ತಮ್ಮ ಕಕ್ಷಿದಾರ ಅಲ್ವಾರಾಡೊ-ಗಿಲ್ ಕೆಲಸದಿಂದ ತೆಗೆದುಹಾಕಿದ್ದಾರೆ. ಅವರ ಆರೋಪ ನಿರಾಧಾರ ಎಂದಿದ್ದಾರೆ. ಇನ್ನು ಅಲ್ವಾರ್ಡೊ-ಗಿಲ್ ವಿವಾಹಿತರಾಗಿದ್ದು, ಆರು ಮಕ್ಕಳನ್ನು ಹೊಂದಿದ್ದಾರೆ.

ಈ ಸುದ್ದಿಯನ್ನೂ ಓದಿ: DK Shivakumar: ಅಮೆರಿಕ ಪ್ರವಾಸ ಖಾಸಗಿಯದ್ದು, ಯಾವ ನಾಯಕರನ್ನೂ ಭೇಟಿ ಮಾಡುತ್ತಿಲ್ಲ ಎಂದ ಡಿಕೆಶಿ